ಚಿತ್ರದುರ್ಗ: ಕೇಂದ್ರ ತಂಡಕ್ಕೆ ನೈಜ ಮತ್ತು ಪರಿಣಾಮಾಕಾರಿಯಾಗಿ ಇಲ್ಲಿನ ಪರಿಸ್ಥಿತಿ ವಿವರಿಸಲಾಗುವುದು. ಇದೇ ಕಾರಣಕ್ಕಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಮುಂಚಿತವಾಗಿ ಪ್ರದೇಶಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ನಾಯಕನಹಟ್ಟಿಗೆ ಗುರುವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿ, ಪ್ರಮುಖ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ, ರಾಗಿ, ತೊಗರಿ ಸೇರಿ ಪ್ರಮುಖ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಂವಹನ ಮಾಡಲಾಗಿದೆ. ಬರದ ಹೆಚ್ಚಿನ ತೀವ್ರತೆಯಿರುವ ಹೊಲ ಮತ್ತು ಪ್ರದೇಶಗಳನ್ನು ಗುರುತಿಸಲಾಗಿದೆ. ಇದರ ಜತೆಗೆ ಇಲ್ಲಿನ ಚಿಕ್ಕಕೆರೆಯನ್ನು ಸಹ ತಂಡಕ್ಕೆ ತೋರಿಸಲಾಗುವುದು ಎಂದರು.