ಕಂಪ್ಲಿ: ಹಿಂದು-ಮುಸ್ಲಿಮರ ಭಾವೈಕ್ಯದ ಮೊಹರಂ ಹಬ್ಬವನ್ನು ಸರ್ವರೂ ಪ್ರೀತಿ, ಪ್ರೇಮ ಮತ್ತು ಸಂಭ್ರಮದಿಂದ ಆಚರಿಸುವಲ್ಲಿ ಜಾಗೃತಿ ತೋರಬೇಕು ಎಂದು ಪಿಐ ಸುರೇಶ್ ಎಚ್.ತಳವಾರ್ ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಮೊಹರಂ ಶಾಂತಿಸಭೆಯಲ್ಲಿ ಮಾತನಾಡಿದರು. ಪೊಲೀಸ್ ಠಾಣೆ ವ್ಯಾಪ್ತಿಯ 44 ಕಡೆ ಪೀರಲು ದೇವರಿಟ್ಟು ಮೊಹರಂ ಆಚರಿಸುತ್ತಿದ್ದು, ತಾಲೂಕಿನ ಗೋನಾಳದಲ್ಲಿ ಆಚರಣೆ ನಿಷೇಧಿಸಲಾಗಿದೆ.
ಜು.20ರಂದು ಹಬ್ಬ ಆರಂಭಗೊಳ್ಳಲಿದ್ದು, ಜು.28ರಂದು ಕತಲ್ ರಾತ್ರಿ, ಜು.29ರಂದು ದಫನ್ ಆಚರಿಸಲಾಗುತ್ತದೆ. ಮೊಹರಂ ಹಬ್ಬವನ್ನು ಕೋಮು-ಸೌಹಾರ್ದದಿಂದ ಆಚರಿಸಬೇಕು. ಅಕ್ರಮ ಮದ್ಯ ಮಾರಾಟವಾಗುತ್ತಿದ್ದಲ್ಲಿ ಗಮನಕ್ಕೆ ತರಬೇಕು.
ಇದನ್ನೂ ಓದಿ: https://www.vijayavani.net/chandrayaan-3-kottoor-source-scientist-vessel-message-carrier-ruwari-dr-darukesh
ಕಾನೂನು ಉಲ್ಲಂಘಿಸಿದಂತೆ ಹಬ್ಬ ಆಚರಣೆ ಮಾಡಬೇಕು. ನಿಯಮ ಮೀರಿ ನಡೆದುಕೊಂಡಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪಿಎಸ್‌ಐ ವಿಜಯಪ್ರತಾಪ್ ಎಸ್.ಪಾಟೀಲ್, ಪ್ರಮುಖರಾದ ಎಂ.ವಲಿ ಅಹ್ಮದ್‌ಸಾಬ್, ವಾಲ್ಮೀಕಿ ಈರಣ್ಣ, ಕೆ.ಎಂ.ಹೇಮಯ್ಯಸ್ವಾಮಿ, ಕೆ.ಮೆಹಬೂಬ್, ಭಟ್ಟ ಪ್ರಸಾದ್, ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಮೆಹಮೂದ್, ಕೆ.ಮಸ್ತಾನ್‌ಸಾಬ್, ಸಿ.ಬಸವರಾಜ್ ಇತರರಿದ್ದರು.