More

  ಕರೊನಾ ಗಲಾಟೆ: ಮೇ 17ರಂದು ಇಂಟರ್​ನೆಟ್​ ಸೇವೆ ಸ್ಥಗಿತ

  ಕೋಲ್ಕತಾ: ಕರೊನಾ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯ ತೆಲಿನಿಪಾರದಲ್ಲಿ ಕೋಮು ಸಂಘರ್ಷಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಇಲ್ಲಿ ಮೇ 17ರಂದು ಇಂಟರ್​ನೆಟ್​ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

  ಒಂದು ಕೋಮಿನವರು ಇನ್ನೊಂದು ಕೋಮಿನ ಜನರಿಗೆ ಕರೊನಾ ಎಂದು ಸಂಬೋಧಿಸಿದ್ದ ಹಿನ್ನೆಲೆಯಲ್ಲಿ, ಘರ್ಷಣೆ ಸಂಭವಿಸಿತ್ತು. ಚಾಂದನಗರ ಮತ್ತು ಶ್ರೀರಾಂಪುರ ಉಪವಿಭಾಗದಲ್ಲಿ ಈ ಘಟನೆ ನಡೆದಿತ್ತು. ಇದು ತೀವ್ರ ಹಿಂಸಾಚಾರಕ್ಕೂ ತಿರುಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆಯೇ ಹಿಂಸಾಚಾರ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡಿತ್ತು.

  ಇದನ್ನೂ ಓದಿ: ವಿಮಾನ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಾರಾಟಕ್ಕೆ ಮುಹೂರ್ತ ಫಿಕ್ಸ್​- ಇಲ್ಲಿದೆ ನೋಡಿ ಸಂಪೂರ್ಣ ವಿವರ

  ಇಂದಿಗೂ ಅಲ್ಲಲ್ಲಿ ಎರಡು ಕೋಮಿನ ನಡುವೆ ಗಲಾಟೆ ಸಂಭವಿಸುತ್ತಲೇ ಇದೆ. ಈಹಿನ್ನೆಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿನ್ನೆ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಜತೆಗೆ ಮೇ 17ರ 6ಗಂಟೆವರೆಗೆ ಇಂಟರ್​ನೆಟ್​ ಸೇವೆ ಸ್ಥಗಿತಗೊಳಿಸಿರುವುದಾಗಿ ಆದೇಶ ಹೊರಡಿಸಿದ್ದಾರೆ. ಮೇ 17ರ ಸಂಜೆ 6ಗಂಟೆವರೆಗೆ ಚಂದನ್​ನಗರ್ ಮತ್ತು ಶ್ರೀರಾಮಪುರ ಪ್ರದೇಶದಲ್ಲಿ ಬ್ರಾಡ್ ಬ್ಯಾಂಡ್ ಸೇರಿದಂತೆ ಎಲ್ಲಾ ಬಗೆಯ ಇಂಟರ್​ನೆಟ್​ ಸೇವೆ ರದ್ದುಗೊಳಿಸುವುದಾಗಿ ಅವರು ಹೇಳಿದ್ದಾರೆ.

  ಯಾರು ಲಾಕ್ ಡೌನ್ ಆದೇಶ ಉಲ್ಲಂಘಿಸುತ್ತಾರೋ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಸೋಂಕನ್ನು ಯಾರೇ ಹರಡಲಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕೋಮು ಘರ್ಷಣೆಗೆ ಕಾರಣರಾದವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಯಾರನ್ನೂ ನಾವು ಬಿಡುವುದಿಲ್ಲ. ವ್ಯಕ್ತಿಯು ಎ ಸಮುದಾಯ ಅಥವಾ ಬಿ ಸಮುದಾಯಕ್ಕೆ ಸೇರಿದವನೇ ಎಂದೂ ನಾವು ನೋಡುವುದಿಲ್ಲ. ವ್ಯಕ್ತಿ ಯಾರೇ ಆಗಿರಲಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

  ಇದನ್ನೂ ಓದಿ: VIDEO: ಕಟ್ಟಿಗೆ ತುಂಡಿನಿಂದ ಮರುಜೀವ ಪಡೆದ ಯುವಕ! ವೀಡಿಯೋ ಭಾರಿ ವೈರಲ್​

  ಕೋಮು ಘರ್ಷಣೆ ಬೆನ್ನಲ್ಲೇ 50ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದು ವಿಧ್ವಂಸಕ ಕೃತ್ಯಕ್ಕೂ ಕೈ ಹಾಕಿದ್ದಾರೆ. ಕೆಲವೆಡೆ ಬೆಂಕಿಯನ್ನೂ ಹಾಕಿ ದುಷ್ಕೃತ್ಯ ಮೆರೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 56 ಮಂದಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts