ಕಾಮನ್ವೆಲ್ತ್​ಗೆ ಮಹಿಳಾ ಕ್ರಿಕೆಟ್: 2022ರ ಬರ್ವಿುಗ್​ಹ್ಯಾಂ ಗೇಮ್ಸ್​ಗೆ ಟಿ20 ಸೇರ್ಪಡೆ ಖಚಿತ

ಮೆಲ್ಬೋರ್ನ್: ಬರ್ವಿುಂಗ್​ಹ್ಯಾಂನಲ್ಲಿ ನಡೆಯಲಿರುವ 2022ರ ಕಾಮನ್ವೆಲ್ತ್ ಗೇಮ್ಸ್​ಗೆ ಮಹಿಳಾ ಟಿ20 ಕ್ರಿಕೆಟ್ ಸೇರ್ಪಡೆ ಮಾಡಲಾಗುತ್ತಿದೆ ಎಂದು ಕಾಮನ್ವೆಲ್ತ್ ಗೇಮ್್ಸ ಫೆಡರೇಷನ್ (ಸಿಜಿಎಫ್) ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಗಳವಾರ ಜಂಟಿಯಾಗಿ ಪ್ರಕಟಿಸಿವೆ.

1998ರಲ್ಲಿ ಮಲೇಷ್ಯಾದ ಕೌಲಾಲಂಪುರ ದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಪುರುಷರ ವಿಭಾಗದ ಕ್ರಿಕೆಟ್ ಆಯೋಜಿಸಲಾಗಿತ್ತು. ಅಂದಿನ ಕೂಟದಲ್ಲಿ ದಕ್ಷಿಣ ಆಫ್ರಿಕಾ ತಂಡ ಸ್ವರ್ಣ ಪದಕ ಗೆದ್ದುಕೊಂಡಿತ್ತು. 2022ರ ಜುಲೈ 27ರಿಂದ ಆಗಸ್ಟ್ 7ರವರೆಗೆ ಕಾಮನ್ವೆಲ್ತ್ ಗೇಮ್್ಸ ನಡೆಯಲಿದ್ದು, ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ 8 ಅಂತಾರಾಷ್ಟ್ರೀಯ ತಂಡಗಳು ಭಾಗವಹಿಸಲಿವೆ.

‘ಇಂದು ಐತಿಹಾಸಿಕ ದಿನ. ಕಾಮನ್ವೆಲ್ತ್ ಗೇಮ್ಸ್​ಗೆ ಕ್ರಿಕೆಟ್​ಗೆ ವಾಪಸಾಗುತ್ತಿದೆ’ ಎಂದು ಸಿಜಿಎಫ್ ಅಧ್ಯಕ್ಷ ಡೇಮ್ ಲೂಸಿ ಮಾರ್ಟಿನ್ ತಿಳಿಸಿದ್ದಾರೆ. ಇತ್ತೀಚೆಗೆ ಪುರುಷರ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಏಜ್​ಬಾಸ್ಟನ್ ಮೈದಾನದಲ್ಲಿ ಬಹುತೇಕ ಪಂದ್ಯಗಳು ನಡೆಯಲಿವೆ. -ಪಿಟಿಐ

ಶೂಟಿಂಗ್​ಗೆ ಸ್ಥಳವಿಲ್ಲ!

ಶೂಟಿಂಗ್ ಸ್ಪರ್ಧೆ ಆಯೋಜಿಸದಿದ್ದರೆ ಕೂಟದಿಂದ ಹೊರಗುಳಿಯವುದಾಗಿ ಎಂದು ಭಾರತ ಎಚ್ಚರಿಕೆ ನೀಡಿದ್ದರೂ 2022ರ ಕೂಟದಲ್ಲಿ ಶೂಟಿಂಗ್ ಇರುವುದಿಲ್ಲ ಎಂದು ಸಿಜಿಎಫ್ ಮುಖ್ಯಸ್ಥ ಡೇಮ್ ಲೂಸಿ ಸ್ಪಷ್ಟಪಡಿಸಿದ್ದಾರೆ. ‘ಶೂಟಿಂಗ್ ಆಯೋಜಿಸಲು ಸೂಕ್ತ ಸ್ಥಳದ ಕೊರತೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು. 1974ರಿಂದ ಈಚೆಗೆ ಮೊದಲ ಬಾರಿ ಕಾಮನ್ವೆಲ್ತ್ ಗೇಮ್ಸ್​ನಿಂದ ಶೂಟಿಂಗ್ ಕೈಬಿಡಲಾಗಿದೆ. ಕಾಮನ್ವೆಲ್ತ್ ಗೇಮ್್ಸ ಶೂಟಿಂಗ್ ಕಡ್ಡಾಯ ಕ್ರೀಡೆಯೇನಲ್ಲ ಎಂದು ಲೂಸಿ ಹೇಳಿದ್ದಾರೆ. ಶೂಟಿಂಗ್ ಸಂಘಟಿಸದಿದ್ದರೆ ಭಾರತದ ಪದಕ ಬೇಟೆಗೆ ಭಾರಿ ಹಿನ್ನಡೆಯಾಗಲಿದೆ.

2028ರ ಒಲಿಂಪಿಕ್ಸ್​ಗೆ ಕ್ರಿಕೆಟ್, ಐಸಿಸಿ ಮೇಲೆ ಎಂಸಿಸಿ ಒತ್ತಡ

2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರ್ಪಡೆಗೊಳಿಸಲು ಐಸಿಸಿ ಕಾರ್ಯ ಪ್ರವೃತ್ತವಾಗಿದೆ. ಈ ಸಂಬಂಧ ಐಸಿಸಿ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಮೈಕ್ ಗ್ಯಾಟಿಂಗ್ ತಿಳಿಸಿದ್ದಾರೆ. ಬಿಸಿಸಿಐ ಇತ್ತೀಚೆಗೆ ನಾಡಾದ ಉದ್ದೀಪನ ಪರೀಕ್ಷೆಗೆ ಸಮ್ಮತಿಸಿದಂತೆಯೇ, ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರ್ಪಡೆ ಬಗೆಗಿನ ವಿರೋಧವನ್ನೂ ಕೈಬಿಡುವ ನಿರೀಕ್ಷೆ ಹರಡಿದೆ. ಅಲ್ಲದೆ ಬಿಸಿಸಿಐ ಈಗ ನಾಡಾದ ವ್ಯಾಪ್ತಿಗೆ ಬಂದಿರುವುದರಿಂದ ಒಲಿಂಪಿಕ್ಸ್​ಗೆ

ಕ್ರಿಕೆಟ್ ಸೇರ್ಪಡೆಯೂ ಸುಲಭವೆನಿಸಿದೆ. ‘ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರ್ಪಡೆಗೊಳಿಸಲು ಐಸಿಸಿ ಸಿಇಒ ಮನು ಸಾವ್ನೆ ಜತೆ ರ್ಚಚಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಪ್ರಯತ್ನ ಯಶಸ್ವಿಯಾದರೆ ಕ್ರಿಕೆಟ್​ಗೆ ದೊಡ್ಡ ಬೋನಸ್ ಸಿಗಲಿದೆ’ ಎಂದು ಗ್ಯಾಟಿಂಗ್ ತಿಳಿಸಿದ್ದಾರೆ. ವರ್ಷಾರಂಭದಲ್ಲಿ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಒಲಿಂಪಿಕ್ಸ್ ಕ್ರಿಕೆಟ್ ಸೇರ್ಪಡೆಯನ್ನು ಬೆಂಬಲಿಸಿದ್ದರು.

 

Leave a Reply

Your email address will not be published. Required fields are marked *