More

    ಭೂ ಒತ್ತುವರಿ ಪತ್ತೆಗೆ ಸಮಿತಿ: ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಸ್ಥಿತ್ವಕ್ಕೆ, ಸಂಪುಟ ನಿರ್ಧಾರ

    ಬೆಂಗಳೂರು: ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದ ಬೆಂಗಳೂರು ನಗರ ಸರ್ಕಾರಿ ಭೂಮಿ ಒತ್ತುವರಿ ಅಧ್ಯಯನ ಜಂಟಿ ಸದನ ಸಮಿತಿ ಮಾದರಿಯಲ್ಲಿಯೇ ಮತ್ತೊಂದು ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ.

    ಶಾಸಕ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ‘ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ’ ರಚನೆಯಾಗಿದೆ. ಈ ಕುರಿತು ಶುಕ್ರವಾರ ನಡೆದ ಸಂಪುಟ ಸಭೆ ನಿರ್ಣಯ ಕೈಗೊಂಡಿದ್ದು, ಶೀಘ್ರವೇ ಸರ್ಕಾರಿ ಆದೇಶ ಹೊರ ಬೀಳಲಿದೆ. ಸಮಿತಿಯಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ, ಎ.ಟಿ.ರಾಮಸ್ವಾಮಿ, ಎಸ್.ಆರ್.ವಿಶ್ವನಾಥ್, ರಾಜಶೇಖರ್ ಪಾಟೀಲ್, ರಾಜೂಗೌಡ ಸದಸ್ಯರಾಗಿದ್ದು, ಸರ್ಕಾರಿ ಜಮೀನು ಒತ್ತುವರಿ ಗುರುತಿಸುವುದು ಮತ್ತು ತೆರವುಗೊಳಿಸುವುದು ಹಾಗೂ ಸರ್ಕಾರಕ್ಕೆ ಸಲಹೆ ನೀಡುವ ಅಧಿಕಾರವನ್ನು ನೀಡಲಾಗಿದೆ. ಬೆಂಗಳೂರು ಹೊರವಲಯದ ಪೀಣ್ಯ ಕೈಗಾರಿಕಾ ವಸಾಹತು ಮೂಲಸೌಕರ್ಯ ಅಭಿವೃದ್ಧಿಗೆ 50 ಕೋಟಿ ರೂ. ಹಾಗೂ ಹುಬ್ಬಳ್ಳಿಯ ಎಂ.ಟಿ. ಸಾಗರ ಕೈಗಾರಿಕಾ ವಸಾಹುತುವಿನ ಅಗತ್ಯ ಸೌಕರ್ಯಕ್ಕೆ 18.5 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಲೋಕಾಯುಕ್ತದಡಿ ಅಕ್ರಮ ಗಣಿಗಾರಿಕೆ ತನಿಖೆ ನಡೆಸಲು ರಚಿಸಿದ್ದ ಸಮಿತಿ ಅವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಲು ತೀರ್ವನಿಸಲಾಗಿದೆ. ಇವಿಎಂ ಹಾಗೂ ವಿವಿ ಪ್ಯಾಟ್​ಗಳನ್ನು ಆಯಾ ಜಿಲ್ಲೆಗಳ ಡಿಸಿ ಕಚೇರಿಗಳಲ್ಲಿ ಸಂರಕ್ಷಿಸಿಡಲು ಗೋದಾಮು ನಿರ್ವಣಕ್ಕೆ 123 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹೇಮಾವತಿ ನಾಲೆ ವಿಸ್ತೀರ್ಣಗೊಳಿಸುವ ಸಂಬಂಧ 425 ಕೋಟಿ ರೂ. ಟೆಂಡರ್ ಕರೆಯಲು ತೀರ್ವನಿಸಿದ್ದು, ಮೊದಲ ಹಂತದಲ್ಲಿ 250 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ಉಳಿದ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದರು. ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಜಂತುಹಳು ನಿರೋಧಕ ಮಾತ್ರೆ ಖರೀದಿಗೆ 10.92 ಕೋಟಿ ರೂ., ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 100 ಕೋಟಿ ರೂ. ಹಾಗೂ ವಿಜಯಪುರ ಕಾರಾಗೃಹದಲ್ಲಿ 99.98 ಕೋಟಿ ರೂ. ವೆಚ್ಚದಲ್ಲಿ ಗರಿಷ್ಠ ಭದ್ರತಾ ಕಾರಾಗೃಹ ನಿರ್ವಿುಸುವ ಯೋಜನೆಗೆ ಸಂಪುಟ ಒಪ್ಪಿದೆ. ಕಲಬುರಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಸ್ಥಾಪಿಸಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನದಲ್ಲಿ 150 ಕೋಟಿ ರೂ. ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

    ಮುಖ್ಯಾಂಶಗಳು

    • ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಹಾಗೂ 300 ಹಾಸಿಗೆ ಆಸ್ಪತ್ರೆ ನಿರ್ಮಾಣ ಸಂಬಂಧ ಟೆಂಡರ್ ಮರುಪರಿಶೀಲಿಸಿ 508 ಕೋಟಿ ರೂ.ಗೆ ಇಳಿಸಿ ಅನುಮೋದನೆ.
    • ಹಾವೇರಿ ಹಾಗೂ ಯಾದಗಿರಿಯಲ್ಲಿ ತಲಾ 478 ಕೋಟಿ ರೂ. ವೆಚ್ಚದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ. ಈ ಎರಡೂ ಕಾಲೇಜುಗಳ ಸೀಟು ಸಂಖ್ಯೆ 150.
    • ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆ ಮೂಲ ಸೌಕರ್ಯಕ್ಕೆ 20 ಕೋಟಿ ರೂ. ಬಿಡುಗಡೆ.
    • ಮೈಸೂರು ಮೆಡಿಕಲ್ ಕಾಲೇಜಿನ ಬಾಲಕಿಯರ ವಸತಿ ಗೃಹ ನಿರ್ವಣಕ್ಕೆ 32 ಕೋಟಿ ರೂ. ಮಂಜೂರು.
    • ಪಾಂಡವಪುರ ಹಾಗೂ ಚುಂಚನಕಟ್ಟೆ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಮುಂದಿನ 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಮ್ಮತಿ.
    • 300 ಹಾಸಿಗೆಗಳ ಕಾರವಾರ ಆಸ್ಪತ್ರೆಯನ್ನು 750 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು 144.51 ಕೋಟಿ ರೂ. ಬಿಡುಗಡೆ.

    ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ

    ಆಶಾ ಕಾರ್ಯಕರ್ತೆ ಯರಿಗೆ ಒಂದು ಬಾರಿ ತಲಾ 3 ಸಾವಿರ ರೂ. ಪೋತ್ಸಾಹ ಧನ ನೀಡಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾರ್ಯಕರ್ತೆಯರು ಬೇಡಿಕೆ ಈಡೇರಿಕೆಗಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಈ ಬೇಡಿಕೆ ಮುಂದಿಟ್ಟಿದ್ದರು. ಅದಕ್ಕೆ ಸ್ಪಂದಿಸಿದ ಸರ್ಕಾರ 41,628 ಕಾರ್ಯಕರ್ತೆಯರಿಗೆ 12.48 ಕೋಟಿ ರೂ. ನೀಡಲು ತೀರ್ವನಿಸಿದೆ.

    ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ

    ನಕ್ಷೆ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳಿಗೆ 2 ಪಟ್ಟು ತೆರಿಗೆ ವಿಧಿಸುವ ಕಾಯ್ದೆ ಈಗಾಗಲೇ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿದ್ದು, ಈಗ ಅದನ್ನು ಬಿಬಿಎಂಪಿ ವ್ಯಾಪ್ತಿಗೂ ವಿಸ್ತರಿಸಲು ಸಂಪುಟ ಸಭೆಯಲ್ಲಿ ತೀರ್ವನಿಸಲಾಗಿದೆ.

    ಸಿಎಂ ಸಂತೈಸಿದ ಸ್ವಾಮೀಜಿಗಳು

    ಬೆಂಗಳೂರು: ವಚನಾನಂದ ಸ್ವಾಮೀಜಿಗಳ ಮಾತಿನಿಂದ ಬೇಸರಿಸಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ್ದ ಸ್ವಾಮೀಜಿಗಳ ತಂಡ, ಅವರನ್ನು ಸಮಾಧಾನಪಡಿಸಿ ಅಲ್ಲಿ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದೆ. ಕೂಡಲಸಂಗಮದ ಪಂಚಮಸಾಲಿ ಲಿಂಗಾಯತ ಮಠದ ಜಯಮೃತ್ಯುಂಜಯ ಸ್ವಾಮೀಜಿ, ಮಾದಾರಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಕುಂಚಟಿಗ ಗುರುಪೀಠದ ಶಾಂತಿವೀರ ಮಹಾಸ್ವಾಮಿ, ಯಾದವ ಗುರುಪೀಠದ ಕೃಷ್ಣಯಾದವಾನಂದ ಸ್ವಾಮಿ, ಬೋವಿ ಗುರುಪೀಠದ ಇಮ್ಮಡಿಸಿದ್ದರಾಮೇಶ್ವರ ಮಹಾಸ್ವಾಮಿ ಅವರು ‘ನಿಮ್ಮನ್ನು ಪಂಚಮಸಾಲಿ ಮತದಾರರು ಕೈ ಬಿಡುವುದಿಲ್ಲ’ ಎನ್ನುವ ಭರವಸೆ ನೀಡಿದರು. ಬಳಿಕ ಮಾತನಾಡಿದ ಜಯಮೃತ್ಯಂಜಯ ಸ್ವಾಮೀಜಿ, ಮುಖ್ಯಮಂತ್ರಿಗಳಿಗೆ ಅಗೌರವ ತೋರುವ ಕೆಲಸಕ್ಕೆ ನಮ್ಮ ಬೆಂಬಲವಿಲ್ಲ. ಸಮುದಾಯದ ಪರ ಮಾತನಾಡುವಾಗ ಸ್ವಾಮೀಜಿ ಮಾತಿನ ಶೈಲಿ ಸರಿಯಿರಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts