More

  ಜನರ ಸೇವೆಗೆ ಬದ್ಧರಾಗಿ

  ಯಲಬುರ್ಗಾ: ಕಕ್ಷಿದಾರರ ನೋವು ಅರ್ಥೈಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಒದಗಿಸುವ ವಕೀಲರ ಕೊಡುಗೆ ಅಪಾರವಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಧೀಶ ಚಂದ್ರಶೇಖರ ಹೇಳಿದರು.

  ಇದನ್ನೂ ಓದಿ: ಗುರುವಿನ ಸೇವೆಯಿಂದ ಪುಣ್ಯ ಪ್ರಾಪ್ತಿ

  ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಾಜಿ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ ಜನ್ಮದಿನ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಮಾತನಾಡಿದರು.

  ದೇಶದ ಮೊದಲ ರಾಷ್ಟ್ರಪತಿಯಾದ ರಾಜೇಂದ್ರ ಪ್ರಸಾದ ಕೂಡ ವಕೀಲರಾಗಿದ್ದರು. ಸಮಾಜಮುಖಿ ಚಿಂತನೆ ನಡೆಸಿ ಜನರ ಸೇವೆಗೆ ಮುಂದಾಗಬೇಕು. ಸತತ ಅಧ್ಯಯನ, ಕ್ರಿಯಾಶೀಲತೆ ರೂಢಿಸಿಕೊಂಡಗ ವಕೀಲ ವೃತ್ತಿಗೆ ಗೌರವ ಬರುತ್ತದೆ ಎಂದರು.

  ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್.ಮಿಟ್ಟಲಕೋಡ ಮಾತನಾಡಿ, ವಕೀಲರು ಅಧ್ಯಯನಶೀಲರಾಗಬೇಕು. ನ್ಯಾಯಾಲಯದ ಕಾರ್ಯಕಲಾಪದಲ್ಲಿ ಆಸಕ್ತಿಯಿಂದ ಭಾಗವಹಿಸಿದಾಗ ವೃತ್ತಿಪರತೆ ಹೆಚ್ಚುತ್ತದೆ. ವೃತ್ತಿಯಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಮುಖ್ಯ ಎಂದರು.

  ಮದ್ರಾಸ್ ಉಚ್ಛನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ತಾಲೂಕಿನ ಕುದರಿಕೊಟಗಿ ಗ್ರಾಮದ ಅನ್ನದಾನಯ್ಯ ಸ್ವಾಮಿಯವರು ಭಾವಚಿತ್ರ ಅನಾವರಣಗೊಳಿಸಲಾಯಿತು. ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ ವಕೀಲರ ಸಂಘದ ಶ್ರೇಯೋಭಿವೃದ್ಧಿಗೆ 1ಲಕ್ಷ ರೂ. ದೇಣಿಗೆ ನೀಡಿದರು.

  ಹಿರಿಯ ಸಿವಿಲ್ ನ್ಯಾಯದೀಶ ವಿಜಯಕುಮಾರ ಕನ್ನೂರು, ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಮಜೀದ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಬೇಲೇರಿ, ವಕೀಲರಾದ ಬಿ.ಎಂ.ಶಿರೂರು, ಸಿ.ಎಚ್.ಪಾಟೀಲ್, ರಾಜಶೇಖರ ನಿಂಗೋಜಿ, ಎಸ್.ಎನ್.ಶ್ಯಾಗೋಟಿ, ಸಿ.ಎಸ್.ಬನಪ್ಪಗೌಡರ, ಎಚ್.ಎಚ್.ಹಿರಿಮನಿ, ಎಸ್.ಎಸ್.ಹೊಂಬಳ, ಮಲ್ಲನಗೌಡ ಪಾಟೀಲ್, ಸಂಗಮೇಶ ವಾದಿ, ಸಿ.ಎಸ್.ಮೆಣಸಗೇರಿ, ಇಂದಿರಾ ಉಳ್ಳಾಗಡ್ಡಿ ತರರಿದ್ದರು.

  See also  ಸರ್ಕಾರಿ ಸೇವೆ ತೃಪ್ತಿ ತಂದಿದೆ: ಜಗದೀಶ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts