More

  ಕಮಿಷನ್ ದಂಧೆಗೆ ಬ್ರೇಕ್ ಹಾಕದಿದ್ದರೆ ಹೋರಾಟ

  ಕೊಪ್ಪಳ: ರಾಜ್ಯಾದ್ಯಂತ ಕಮಿಷನ್ ದಂಧೆ ವಿರುದ್ಧ ಗುತ್ತಿಗೆದಾರರ ಆರೋಪ ಮುಂದುವರೆದಿದೆ. ಜಿಲ್ಲೆಯಲ್ಲು ಗುತ್ತಿಗೆದಾರರು ಜನಪ್ರತಿನಿಧಿಗಳ ಕಮಿಷನ್ ಕಾಟಕ್ಕೆ ಬೇಸತ್ತಿದ್ದು ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.


  ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಗುತ್ತಿಗೆದಾರರು ತಮ್ಮ ದುಃಖ ತೋಡಿಕೊಂಡರು.


  ಜಿಲ್ಲಾ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ದೇವಪ್ಪ ಅರಕೇರಿ ಮಾತನಾಡಿ, ಜಿಲ್ಲೆ ಸೇರಿ ರಾಜ್ಯಾದ್ಯಂತ ಕಮಿಷನ್ ದಂಧೆ ಜೀವಂತವಿದೆ. ಶೇ. 40 ರಷ್ಟು ಕಮಿಷನ್ ನೀಡದಿದ್ದರೆ ಯಾವುದೇ ಕೆಲಸಗಳಾಗುವುದಿಲ್ಲ ಎಂದು  ಆರೋಪಿಸಿದರು.


  ಇತ್ತೀಚೆಗೆ ರಾಜ್ಯದಲ್ಲಿ ಕಮಿಷನ್ ದಂಧೆ ಮಿತಿಮೀರಿದೆ. ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಜನಪ್ರತಿನಿಧಿಗಳ ಕಮಿಷನ್ ಆಸೆಗೆ ಗುತ್ತಿಗೆದಾರರು ಹೈರಾಣಾಗಿ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


  ಕಮಿಷನ್ ನೀಡುವ ಕುರಿತು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪ ಸತ್ಯ. ಅವರು ವ್ಯವಸ್ಥೆ ವಿರುದ್ಧ ಆರೋಪಿಸಿದ್ದಾರೆ. ಆದರೆ, ಇದನ್ನು ತಪ್ಪಾಗಿ ಅರ್ಥೈಸಿದ ಕೆಲ ಜನ ಪ್ರತಿನಿಧಿಗಳು ಕೆಂಪಣ್ಣನವರ ವಿರುದ್ಧ ಹರಿಹಾಯುತ್ತಿದ್ದಾರೆ. ಇದು ಸರಿಯಾದ ನಡೆಯಲ್ಲ. ಕೂಡಲೇ ಶೇ.40 ರಷ್ಟು ಕಮಿಷನ್ ಪಡೆಯುವುದಕ್ಕೆ ಬ್ರೇಕ್ ಹಾಕಬೇಕು. ಇಲ್ಲದಿದ್ದರೆ ಗುತ್ತಿಗೆದಾರರ ಸಂಘದಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು. ಜಿಲ್ಲಾ ಕೇಂದ್ರದಲ್ಲಿ ಶೀಘ್ರದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು. ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರಾದ ಟಿ.ರತ್ನಾಕರ ರಾಮಣ್ಣ ಕಲ್ಲಣ್ಣನವರ್, ದ್ಯಾಮಣ್ಣ ಪೂಜಾರ ಕಮಲಸಾಬ್ ಒಂಟಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts