ಕಾಮಿಡಿ ಕಿಲಾಡಿಗಳು ಜೋಡಿ ಜಿಜಿ-ದಿವ್ಯಶ್ರೀ ಈಗ ಹಸೆಮಣೆ ಏರುತ್ತಿದ್ದಾರೆ!

ಬೆಂಗಳೂರು: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಮನರಂಜನೆಯ ರಸದೌತಣವನ್ನೇ ಉಣಬಡಿಸಿದ್ದ ಗೋವಿಂದೇಗೌಡ (ಜಿಜಿ) ಮತ್ತು ದಿವ್ಯಶ್ರೀ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.

ಹೌದು, ರಿಯಾಲಿಟಿ ಶೋ ಮೂಲಕ ಕನ್ನಡದ ಮನೆ ಮನಗಳಲ್ಲಿ ನಗೆ ಬುಗ್ಗೆಯನ್ನು ಉಕ್ಕಿಸಿದ್ದ ಈ ಜೋಡಿ ಜ. 27ರಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

ಕಾಮಿಡಿ ಕಿಲಾಡಿಗಳು ಶೋ ಮೂಲಕ ಪರಸ್ಪರ ಪರಿಚಯವಾಗಿದ್ದ ಗೋವಿಂದೇಗೌಡ ಹಾಗೂ ಮೂಡಿಗೆರೆಯ ದಿವ್ಯಶ್ರೀ ನಡುವೆ ಪ್ರೀತಿ ಉಂಟಾಗಿತ್ತು. ಬಳಿಕ ಎರಡೂ ಮನೆಯವರನ್ನು ಒಪ್ಪಿಸಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ಇವರು ಮಾ. 14 ರಂದು ಶೃಂಗೇರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಕೆ.ಜಿ.ಎಫ್. ಸಿನಿಮಾದಲ್ಲಿ ಕಾಮಿಡಿ ರೋಲ್‌ನಲ್ಲಿ ಗೋವಿಂದೇಗೌಡ ನಟಿಸಿದ್ದು, ಜಂತರ್‌ ಮಂತರ್‌ ಎಂಬ ಸಿನಿಮಾವನ್ನು ಕೂಡ ನಿರ್ದೇಶಿಸಿದ್ದರು.

ಸದ್ಯ ದಿವ್ಯಶ್ರೀ ಅವರು ರಾಜ್ ನಿರ್ದೇಶನದ ‘ಪುಣ್ಯಾತ್​ಗಿತ್ತೀರು’ ಚಿತ್ರದಲ್ಲಿ ಟಾಮ್ ಬಾಯ್ ಆಗಿ ನಟಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)

 

Leave a Reply

Your email address will not be published. Required fields are marked *