ಅರಣ್ಯ ಇಲಾಖೆಗೆ ನೆರವು ನೀಡಲು ನಟ ದರ್ಶನ್​ ಮಾರಾಟಕ್ಕಿಟ್ಟಿದ್ದ ಆನೆಯ ಛಾಯಾಚಿತ್ರ ಖರೀದಿಸಿದ ಹಾಸ್ಯನಟ ಚಿಕ್ಕಣ್ಣ

ಬೆಂಗಳೂರು: ನಟ ದರ್ಶನ್​ ಅವರಿಗೆ ಫೋಟೋಗ್ರಫಿಯಲ್ಲಿ ಎಲ್ಲಿಲ್ಲದ ಆಸಕ್ತಿ ಇರುವುದು ಎಲ್ಲರಿಗೂ ತಿಳಿದ ವಿಚಾರವೇ. ಬಿಡುವಿನ ವೇಳೆಯಲ್ಲಿ ಹಲವು ಅರಣ್ಯಗಳಿಗೆ ತೆರಳಿ ತಮ್ಮ ಮೆಚ್ಚಿನ ಫೋಟೋಗ್ರಫಿಯಲ್ಲಿ ಮುಳುಗುವ ಅವರು, ಅಲ್ಲಿ ತಾವು ತೆಗೆದ ಚಿತ್ರಗಳನ್ನು ಪ್ರದರ್ಶನದ ಮೂಲಕ ಮಾರಾಟ ಮಾಡಿ ವನ್ಯಜೀವಿ ಸಂರಕ್ಷಣಾ ನಿಧಿ, ಅರಣ್ಯ ಸಂರಕ್ಷಣೆ, ಅರಣ್ಯ ಇಲಾಖೆಗೆ ನೀಡಿದ್ದಾರೆ.

ಈ ನಡುವೆ ಅರಣ್ಯ ಇಲಾಖೆಗೆ ನೆರವು ನೀಡಲು ನಟ ದರ್ಶನ್​ ಅವರು ತಾವು ತೆಗೆದ ಆನೆಯ ಚಿತ್ರವನ್ನು ಮಾರಾಟಕ್ಕಿಟ್ಟಿದ್ದರು. ಇದನ್ನು ಹಾಸ್ಯ ನಟ ಚಿಕ್ಕಣ್ಣ ಅವರು 1 ಲಕ್ಷ ರೂ ನೀಡಿ ಖರೀದಿಸಿದ್ದಾರೆ. ಇದಕ್ಕೆ ನಟ ದರ್ಶನ್​ ಚಿಕ್ಕಣ್ಣನವರ ಸಾಮಾಜಿಕ ಕಳಕಳಿಗೆ ಸಂತಸ ವ್ಯಕ್ತ ಪಡಿಸಿದ್ದು, ತಮ್ಮ ಟ್ವೀಟರ್​ ಖಾತೆಯಲ್ಲಿ ಚಿಕ್ಕಣ್ಣ ಛಾಯಾಚಿತ್ರ ಕೊಳ್ಳುತ್ತಿರುವ ಫೋಟೊವನ್ನು ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ಒಂದು ಆನೆ, ಒಂದು ಹುಲಿಯನ್ನು ದತ್ತು ಪಡೆದಿದ್ದು ಎಲ್ಲಿರಿಗೂ ತಿಳಿದಿದೆ. ಈಗ ಹಾಸ್ಯ ನಟ ಚಿಕ್ಕಣ್ಣ ಕೂಡ ಮೈಸೂರಿನ ಮೃಗಾಲಯದಲ್ಲಿ ಚಿರತೆ ದತ್ತು ಪಡೆದಿದ್ದು, ಅದಕ್ಕೆ ಭೀಮಾ ಎಂದು ತಮ್ಮ‌ ತಂದೆಯ ಹೆಸರನ್ನಿಟ್ಟಿದ್ದು, ಪ್ರಾಣಿಗಳ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *