More

  ಪ್ರತಿಯೊಬ್ಬರೂ ಮೌಢ್ಯಾಚರಣೆಯಿಂದ ಹೊರಬನ್ನಿ

  ಯಲಬುರ್ಗಾ: ಸಮ ಸಮಾಜದ ಒಳಿತಿಗಾಗಿ ಶ್ರಮಿಸಿದ ಬಸವಾದಿ ಶರಣರ ಆದರ್ಶ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದು ಗದಗ ಜಿಲ್ಲಾ ಬಸವಕೇಂದ್ರದ ಸಂಚಾಲಕ ಅಶೋಕ ಬರಗುಂಡಿ ಹೇಳಿದರು.

  ಅಂಕು ಡೊಂಕು ತಿದ್ದಲು ಬಸವಾದಿ ಶರಣರ ವಚನಗಳ ತಿಳಿಯಬೇಕು

  ತಾಲೂಕಿನ ಮರಕಟ್ ಗ್ರಾಮದಲ್ಲಿ ಲಿ.ಚಿದಾನಂದಪ್ಪ ಬಳ್ಳಾರಿ ಪುಣ್ಯಸ್ಮರಣೆ ಹಾಗೂ ಸದ್ಗುರು ಮಲ್ಲಿನಾಥ ಶರಣರ ಸ್ಮರಣಾರ್ಥ ಸೋಮವಾರ ಹಮ್ಮಿಕೊಂಡಿದ್ದ 179ನೇ ಮಾಸಿಕ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
  12ನೇ ಶತಮಾನದಲ್ಲಿ ಶಿವಶರಣರು ತಮ್ಮ ವಚನಗಳ ಮೂಲಕ ನಾಡಿನಲ್ಲಿ ಸಮಾನತೆ, ಸಾಮರಸ್ಯ, ಸಹಬಾಳ್ವೆಯ ಕ್ರಾಂತಿ ನಡೆಸಿದರು. ಆದರೆ ಈಗ ಕೇವಲ ಭಾಷಣಕ್ಕೆ ಸೀಮಿತವಾಗಿವೆ. ಮೌಢ್ಯಾಚರಣೆ, ಅನಾಚಾರ, ಜಾತೀಯತೆ ಹೆಚ್ಚಾಗಿದೆ. ಸಮಾಜದಲ್ಲಿನ ಅಂಕು ಡೊಂಕು ತಿದ್ದಲು ಬಸವಾದಿ ಶರಣರ ವಚನಗಳ ತಿಳಿಯಬೇಕು ಎಂದರು.

  ಇದನ್ನೂ ಓದಿ: ಬಸವಾದಿ ಶರಣರ ವಚನಗಳ ಸಾರ ತಿಳಿಯಿರಿ


  ಸುಳಕಲ್ ಬ್ರಹನ್ಮಠದ ಭುವನೇಶ್ವರ ತಾತ, ಶಿವನಾಗಯ್ಯ ಹಿರೇಮಠ ಮಾತನಾಡಿದರು. ಶ್ರೀ ವೀರೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಮಹಾದೇವಪ್ಪ ಚನ್ನಳ್ಳಿ, ವಿರೂಪಾಕ್ಷಪ್ಪ ರಾಯರಡ್ಡಿ, ಬಸವರಾಜ ಇಂಗಳದಾಳ, ಮರಕಟ್ ಬಸವಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ, ಗೌರವಾಧ್ಯಕ್ಷ ಹನುಮಗೌಡ ಬಳ್ಳಾರಿ, ವಿ.ಕೆ.ಕೆರಿಗೌಡ್ರ, ಪ್ರಕಾಶ ಅಸೂಂಡಿ, ರುದ್ರಪ್ಪ ಗೋರೆಬಾಳ, ನಾಗನಗೌಡ ಜಾಲಿಹಾಳ, ರೇಣುಕಪ್ಪ ಮಂತ್ರಿ, ಅಮರೇಶ ಗಡಿಹಳ್ಳಿ, ಬಾಲಪ್ಪ ಕರುವಿನ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts