ಜಾಲತಾಣದ ಪೋಸ್ಟ್​ ಪ್ರಯೋಜನಕ್ಕೆ ಬಾರದು! ನಟಿ ಪೂನಂ ಕೌರ್​ಗೆ ಫಿಲ್ಮಂ ಚೇಂಬರ್​ ಖಡಕ್​ ಎಚ್ಚರಿಕೆ

ಆಂಧ್ರಪ್ರದೇಶ: ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತನ್ನ ಕೆಲಸಗಳಿಂದಲೇ ಹೆಚ್ಚು ಗುರುತಿಸಿಕೊಂಡಿರುವ ಡ್ಯಾನ್ಸ್​ ಕೋರಿಯೋಗ್ರಾಫರ್ ಶೈಖ್ ಜಾನಿ ಬಾಷಾ ಅಲಿಯಾಸ್​ ಜಾನಿ ಮಾಸ್ಟರ್​ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಸದ್ಯ ಟಾಲಿವುಡ್​ ಅಂಗಳದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ.​ 21 ವರ್ಷದ ಅನಾಮಧೇಯ ಯುವತಿಯೊಬ್ಬಳು ತನ್ನ ಮೇಲೆ ಜಾನಿ ಮಾಸ್ಟರ್ ಎಂದೇ ಜನಪ್ರಿಯತೆ ಪಡೆದಿರುವ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ನರಸಿಂಗಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ನಟಿ ಪೂನಂ ಕೌರ್​ ಮಾಡಿದ ಆರೋಪಗಳಿಗೆ ಇದೀಗ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಖಡಕ್​ ಸಂದೇಶವೊಂದನ್ನು ರವಾನಿಸಿದೆ.

ಇದನ್ನೂ ಓದಿ: IND vs BAN: ಮೊದಲ ಟೆಸ್ಟ್​ನಿಂದ ಕುಲದೀಪ್​ ಔಟ್​! ರೋಹಿತ್​, ಗೌತಿ​ ವಿರುದ್ಧ ಮಾಜಿ ಕ್ರಿಕೆಟಿಗ ಗರಂ

ಜಾನಿ ಮಾಸ್ಟರ್​ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಸದ್ಯ ಟಾಲಿವುಡ್​ ಮಂದಿಯನ್ನು ತಲೆತಗ್ಗಿಸುವಂತೆ ಮಾಡಿದ್ದು, ಎರಡು ತೆಲುಗು ರಾಜ್ಯಗಳಲ್ಲಿ ದೊಡ್ಡ ಮಟ್ಟದ ಚರ್ಚೆಯೇ ಭುಗಿಲೆದ್ದಿದೆ. ಜನಸೇನಾ ಪಕ್ಷದಿಂದ ಜಾನಿಯನ್ನು ಕಿತ್ತುಬಿಸಾಡಿದ ಬೆನ್ನಲ್ಲೇ ನಿನ್ನೆ (ಸೆ.18) ಟಾಲಿವುಡ್ ಚಲನಚಿತ್ರ ವಾಣಿಜ್ಯ ಮಂಡಳಿ ಲೈಂಗಿಕ ಕಿರುಕುಳ ಪರಿಹಾರ ಸಮಿತಿ ಪತ್ರಿಕಾಗೋಷ್ಠಿ ನಡೆಸಿ, ವಿವಾದ ಇತ್ಯರ್ಥವಾಗುವವರೆಗೆ ಆತನನ್ನು ಡ್ಯಾನ್ಸರ್ ಅಸೋಸಿಯೇಶನ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವಂತೆ ಫೆಡರೇಶನ್‌ಗೆ ಎಚ್ಚರಿಸಿದೆ.

ಇನ್ನು ತಮ್ಮ ಸ್ಫೋಟಕ ಹೇಳಿಕೆಗಳಿಂದಲೇ ಹೆಸರುವಾಸಿಯಾಗಿರುವ ನಟಿ ಪೂನಂ ಕೌರ್​, ಜಾನಿ ಮಾಸ್ಟರ್​ ಹಾಗೂ ನಿರ್ದೇಶಕ ತ್ರಿವಿಕ್ರಮ್​ ವಿರುದ್ಧ ಮಾಡಿರುವ ಆರೋಪಗಳನ್ನು ಗಮನಿಸಿದ ಫಿಲಂ ಚೇಂಬರ್ ಕಾರ್ಯದರ್ಶಿ ದಾಮೋದರ್ ಪ್ರಸಾದ್, ಮಹಿಳಾ ಸುರಕ್ಷತೆ ವಿಚಾರದಲ್ಲಿ ಟಾಲಿವುಡ್ ಇತರ ಚಿತ್ರರಂಗಗಳಿಗಿಂತ ಮುಂದಿದ್ದು, ಕೆಲಸದ ಸ್ಥಳದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳವಾದರೆ ಖಂಡಿತ ನಾವು ಹಿರಿಯರನ್ನು ಪ್ರಶ್ನಿಸುತ್ತೇವೆ. ಸಮಿತಿಗೆ ವರದಿ ನೀಡದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಪುನಮ್ ಕೌರ್ ಮಂಡಳಿಗೆ ಬಂದು ದೂರು ನೀಡಬೇಕು. ಯಾರೇ ಎಷ್ಟೇ ಪ್ರಭಾವ ಬೀರಿದರೂ ಸಮಿತಿಯ ತನಿಖೆಯನ್ನು ಕಾನೂನಾತ್ಮಕವಾಗಿಯೇ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಈ ಮಗು ಈಗ ಪ್ಯಾನ್ ಇಂಡಿಯಾ ಹೀರೋಯಿನ್! ಸ್ಟಾರ್ ನಟನ 2ನೇ ಭಾವಿ ಪತ್ನಿ..ಯಾರು ನೆನಪಿಸಿಕೊಳ್ಳಿ..

ಜಾನಿ ಮಾಸ್ಟರ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಮಿತಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಈ ಪ್ರಕರಣದ ಸಮಿತಿಯ ವರದಿಯನ್ನು ಬಹಿರಂಗಪಡಿಸಬೇಕು. ಸರಕಾರದಿಂದ ಮಾರ್ಗಸೂಚಿ ಬಂದರೆ ಸಮಿತಿಗೆ ಹೆಚ್ಚಿನ ಬಲ ಬರಲಿದೆ ಎಂದು ಹೇಳಿದರು,(ಏಜೆನ್ಸೀಸ್).

INDvsBAN: ಕೊಹ್ಲಿ ವಿಕೆಟ್ ಕಬಳಿಸಲು ಈ ಮೂವರು ಬೌಲರ್​ಗಳಿಗೆ ಮಾತ್ರ ಸಾಧ್ಯ! ಏನಿವರ ವಿಶೇಷತೆ?

ಪ್ರಿಯಕರನ ಆ ಒಂದು ಕಂಡಿಷನ್​ಗೆ ಹೆದರಿ ಬ್ರೇಕಪ್​ ಮಾಡಿಕೊಂಡ ‘ಸೀತಾ ಮಹಾಲಕ್ಷ್ಮಿ’! 7 ತಿಂಗಳ ಹಿಂದಿನ ರಹಸ್ಯ ಬಯಲು

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…