Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ವರ್ತಮಾನದ ಪ್ರಶ್ನೆಗೆ ಮಹಾಭಾರತ ಉತ್ತರ

Tuesday, 13.02.2018, 3:03 AM       No Comments

| ಡಾ. ಕೆ. ಎಸ್​. ನಾರಾಯಣಚಾರ್ಯ

ತನ್ನ ಹಿತವನ್ನೂ ಸಾಧಿಸದೆ, ಯಾರ ಮಾತನ್ನೋ ಕೇಳಿ, ದೋಷಪೂರ್ಣ ಕಾರ್ಯವನ್ನಾರಂಭಿಸುವವನೇ ಮೂರ್ಖ. ಅಯೋಗ್ಯರಲ್ಲಿ ವಿಶ್ವಾಸ ಇಡುವವನೂ, ಯೋಗ್ಯರನ್ನು ತಿರಸ್ಕರಿಸುವವನೂ ಮೂರ್ಖ. ಶಕ್ತಿಯಿಲ್ಲದೆಯೂ ಸಿಟ್ಟಿಗೇಳುವವನು, ತನ್ನಲ್ಲಿ ತಪ್ಪಿಟ್ಟುಕೊಂಡು ಇತರರನ್ನು ದೂಷಿಸುವವನು ಮೂರ್ಖ- ಇದು ವಿದುರನ ವಿವೇಕದ ಮಾತು. ಇದು ಸಾರ್ವಕಾಲಿಕವಾಗಿ ಅನ್ವಯಿಸುವ ಮಾತು.

ಇಲ್ಲೊಬ್ಬರು ಕೋರ್ಟುಗಳಿಂದ, ಹಿರಿಯರಿಂದ, ಅನುಭವಸ್ಥರಿಂದ ಛೀಮಾರಿ ಹಾಕಿಸಿಕೊಂಡೂ ಮೇಲಿಂದ ಮೇಲೆ ತಪು್ಪಗಳನ್ನೇ ಮಾಡುತ್ತ, ಸಮರ್ಥಿಸಿಕೊಳ್ಳುತ್ತ, ತಾವೂ ಹಳ್ಳಕ್ಕೆ ಬಿದ್ದು, ತಮ್ಮ ನೇತೃತ್ವದ ಸರ್ಕಾರ, ಪಕ್ಷಗಳನ್ನೂ ಅವನತಿಯತ್ತ ತಳ್ಳುತ್ತಿದ್ದಾರೆ. ಇಷ್ಟು ಸಾಲದೆಂಬಂತೆ, ಮಠಗಳನ್ನೂ, ಮಠಗಳು ನಡೆಸುವ ಸಂಸ್ಥೆಗಳನ್ನೂ, ಧರ್ವದಾಯ ದತ್ತಿಗಳನ್ನೂ, ದೇವಾಲಯಗಳನ್ನೂ, ಜೈನ, ಬೌದ್ಧ, ಸಿಖ್ ಜನಾಂಗಗಳ ಇಂಥ ಸಂಸ್ಥೆಗಳನ್ನೂ ಧಾರ್ವಿುಕದತ್ತಿ ಕಾಯ್ದೆಯಡಿ- ಏಜ್ಞಿಛ್ಠ ಉಛಟಡಿಞಛ್ಞಿಠಿ ಚ್ಞಛ Mzಚಜಿ ಇಲಾಖೆಗೆ ಸೇರಿಸಬೇಕೆಂದು, ನೆಪಕ್ಕೆ ಸಾರ್ವಜನಿಕ ಅಹವಾಲು ಕೇಳಲು ಸರ್ಕಾರ ಇತ್ತೀಚೆಗೆ ಪ್ರಕಟಣೆ ನೀಡಿತ್ತು. ಆದರೆ ಮಠ-ಮಾನ್ಯಗಳು ಮತ್ತು ಸಾರ್ವಜನಿಕ ವಲಯದಿಂದ ವ್ಯಕ್ತವಾದ ವಿರೋಧವನ್ನು ಕಂಡು ಸಂಬಂಧಿತ ಸುತ್ತೋಲೆಯನ್ನು ಅದು ಹಿಂಪಡೆಯಿತೆನ್ನಿ.

ಇವನ್ನೆಲ್ಲ ನೋಡುತ್ತಿದ್ದರೆ, ನನಗೆ ಮಹಾಭಾರತದ ಎರಡು ಪ್ರಸಂಗಗಳು ನೆನಪಾಗುತ್ತವೆ. ಮೊದಲನೆಯದು ಕರ್ಣಪರ್ವದ ವ್ಯಾಸಸೂಕ್ತಿ (ಕರ್ಣಪರ್ವ 69-52). ಪ್ರಸಂಗ ಹೀಗೆ- ಕರ್ಣನನ್ನು ಎದುರು ಕಂಡೂ, ಕೊಲ್ಲಲು ಯತ್ನಿಸದ ಅರ್ಜುನನನ್ನೂ, ಅವನ ಬಿಲ್ಲು ಗಾಂಡೀವವನ್ನೂ ಯುಧಿಷ್ಠಿರ ನಿಂದಿಸುತ್ತಾನೆ. ಗಾಂಡೀವವನ್ನು ಬೈದವನ ತಲೆ ತೆಗೆಯುವುದಾಗಿ ಹಿಂದೆ ಎಂದೋ ಪ್ರತಿಜ್ಞೆ ಮಾಡಿದ್ದ ಅರ್ಜುನ, ಅಣ್ಣನನ್ನೇ ಕೊಲ್ಲಲು ಬಿಲ್ಲೆತ್ತುತ್ತಾನೆ. ಆಗ ಕೃಷ್ಣ ಅರ್ಜುನನಿಗೆ ಹೇಳುವ ಮಾತು:

ದೃಢಪೂರ್ವಶ್ರುತೋ ಮೂರ್ಖಃ, ಧರ್ವಣಾಂ ಅವಿಶಾರದಃ |

ವೃದ್ಧಾನ್ ಅಪೃಚ್ಛನ್ ಸಂದೇಹಾನ್ ಅಂಧಃಶ್ವಭ್ರಮಿವ ಋಚ್ಛತಿ ||

‘ಒಮ್ಮೆ ಯಾರದೋ ಮಾತು ಕೇಳಿ, ಅದೇ ಸರಿಯೆಂದು ತೀರ್ವನಿಸಿ, ಅದನ್ನು ಪರಿಶೀಲಿಸದೆಯೇ ಮೊಂಡು ಹಿಡಿದ ಮೂರ್ಖನು ಸ್ವಯಂ ಧರ್ಮ ಏನೆಂದು ತಿಳಿಯದವನು, ಹಿರಿಯರನ್ನೂ ಕೇಳದೆ ಸಂದೇಹ ಪರಿಹಾರ ಮಾಡಿಕೊಳ್ಳದೆ, ಹಿಡಿದ ಮೊಂಡನ್ನೇ ನಂಬಿ ಹಳ್ಳಕ್ಕೆ ಕುರುಡ ಬೀಳುತ್ತಾನಲ್ಲ ಹಾಗೆ ಬೀಳಬಹುದೇ?’.

ಇಲ್ಲಿ ಮೂರ್ಖ ಲಕ್ಷಣಗಳು ಯಾವುವು? ನೋಡಿ- ಸ್ವಯಂ ಧರ್ಮಪ್ರಜ್ಞೆ ಇಲ್ಲದವನು, ಸಂದೇಹವೇ ಬಾರದಂತೆ ಮೊಂಡುಗ್ರಹಿಕೆಯವನು, ಯಾವ ಹಿರಿಯರ ಬುದ್ಧಿಮಾತನ್ನೂ ಕೇಳದವನು. ಕುರುಡ, ಹಳ್ಳಕ್ಕೆ ಬೀಳುವುದೇ ಶ್ರೇಯಸ್ಸು ಎಂದು ತಿಳಿದು ಬೀಳುವವನು. ಇಲ್ಲಿ ಕೃಷ್ಣ ಒಂದು ಕತೆ ಹೇಳುತ್ತಾನೆ. ಒಬ್ಬ ತಪಸ್ವಿ ಸತ್ಯವಾದಿಯೆಂದು ಪ್ರಸಿದ್ಧನಾದ. ಕೆಲವು ಸಾಧುಗಳು ಕಳ್ಳರ ಭಯದಿಂದ ತಪ್ಪಿಸಿಕೊಳ್ಳಲು ಅವನ ಆಶ್ರಮದತ್ತ ಬಂದು ಕಾಡಿನಲ್ಲಿ ಮರೆಯಾದರು. ಕಳ್ಳರು ಬೆನ್ನಟ್ಟಿಬಂದು ಈ ‘ಸತ್ಯವಾದಿ’ಯನ್ನು ಕೇಳಿದರು- ‘ಇತ್ತ ಬಂದವರು ಎತ್ತಹೋದರು?’ ಎಂದು. ಸತ್ಯವಾದಿ, ಅವರ ದಾರಿ ತೋರಿಸಿದ. ಕಳ್ಳರು ಬೆನ್ನಟ್ಟಿ ಹಿಡಿದು ಸಾಧುಗಳನ್ನು ಕೊಂದರು. ಪಾಪದ ಫಲವಾಗಿ ಈ ‘ಸತ್ಯವಾದಿ’ ನರಕಕ್ಕೇ ತಳ್ಳಲ್ಪಟ್ಟ. ಏಕೆ? ಹೇಳಿದ್ದು ಬರೀ ಸತ್ಯವಾದರೆ ಸಾಲದು, ಅಲ್ಲಿ ಲೋಕಹಿತವೂ, ಅಹಿಂಸೆಯೂ, ಪುಣ್ಯದ ಲಾಭವೂ ಇರಬೇಕು. ಹಾಗೆ ವಿಚಾರಿಸದೆ ಮಾಡಿದ್ದು ಮೂರ್ಖತನ ಎಂದು.

ಎರಡನೆಯ ಪ್ರಸಂಗ ವಿದುರನೀತಿಯದು. ಧೃತರಾಷ್ಟ್ರ, ಸ್ವಯಂ ಮೊಂಡ ಮೂರ್ಖನಾಗಿದ್ದು, ‘ಮೂರ್ಖ ಎಂದರೆ ಯಾರು?’ ಎಂದು ವಿದುರನನ್ನು ಕೇಳುತ್ತಾನೆ. ವಿದುರನ ಉತ್ತರ- ‘ತನ್ನ ಹಿತವನ್ನೂ ಸಾಧಿಸದೆ, ನಿಷ್ಪ ್ರೊಜಕವಾಗಿ, ಯಾರ ಮಾತನ್ನೋ ಕೇಳಿ, ದೋಷಪೂರ್ಣ ಕಾರ್ಯವನ್ನಾರಂಭಿಸುವವನೇ ಮೂರ್ಖ. ಸಣ್ಣ, ಬೇಗ ಕೈಗೂಡುವ ಕೆಲಸವನ್ನು ಎಳೆದಾಡುವವನೂ, ವಿಚಾರಿಸಿ ನಿಧಾನವಾಗಿ ಆರಂಭಿಸಬೇಕಾದ್ದನ್ನು ದುಡುಕಿ ಮಾಡುವವನೂ ಮೂರ್ಖ. ಅಯೋಗ್ಯರಲ್ಲಿ ವಿಶ್ವಾಸ ಇಡುವವನೂ, ಯೋಗ್ಯರನ್ನು ತಿರಸ್ಕರಿಸುವವನೂ ಮೂರ್ಖ. ಶಕ್ತಿಯಿಲ್ಲದೆಯೂ ಸಿಟ್ಟಿಗೇಳುವವನು, ತನ್ನಲ್ಲಿ ತಪ್ಪಿಟ್ಟುಕೊಂಡು ಇತರರನ್ನು ದೂಷಿಸುವವನು ಮೂರ್ಖ. ಧರ್ವರ್ಥಗಳಿಲ್ಲದ, ಸಾಧಿಸಲಾಗದ, ಸಾಧಿಸಬಾರದ ದುಷ್ಕಾರ್ಯಕ್ಕೆ ಕೈಹಾಕಿ ಭಂಗಪಡುವವನು ಮೂರ್ಖ. ಇಂಥ ಒಬ್ಬನು ಪಾಪ ಮಾಡಿದರೆ ಎಷ್ಟೋ ಜನಸಾಮಾನ್ಯರು ಕಷ್ಟ ಅನುಭವಿಸುತ್ತಾರೆ! ಆದರೆ ಅವರಿಗೆ ಪಾಪಫಲ ಬರುವುದಿಲ್ಲ. ಪಾಪಿ ಕರ್ತನಿಗೇ ದೋಷಫಲ ಅಂಟುತ್ತದೆ’ (33- 30ರಿಂದ 43 ಶ್ಲೋಕಗಳು, ಉದ್ಯೋಗಪರ್ವ).

ಏಕಃ ಪಾಪಾನಿ ಕುರುತೇ ಫಲಂ ಭುಕ್ತೋ ಮಹಾಜನಃ |

ಭೋಕ್ತಾರೋ ವಿಪ್ರಮುತ್ಯಂತೇ ಕರ್ತಾ ದೋಷೇಣ ಲಿಪ್ಯತೇ ||

‘ಒಬ್ಬನು ಬಿಟ್ಟ ಬಾಣವು ಒಬ್ಬನನ್ನೇ ಕೊಲ್ಲಬಹುದು, ಅಥವಾ ಗುರಿಯೇ ತಪ್ಪಬಹುದು. ಆದರೆ ಬುದ್ಧಿ ಇದೆಯೆಂದು ಅಹಂಕಾರದಿಂದ ಬೀಗುವ ದಡ್ಡನು, ಬುದ್ಧಿಜೀವಿಯು ಬಿಟ್ಟ ಅವಿವೇಕಶರವು ರಾಷ್ಟ್ರವನ್ನೇ ಕೊಲ್ಲುತ್ತದೆ’.

ಏಕಂ ಹನ್ಯಾತ್ ನವಾ ಹನ್ಯಾತ್ ಇಷುಮುಕ್ತೋ ಧನುಷ್ಮತಾ |

ಬುದ್ಧಿಃ ಬುದ್ಧಿಮತೋತ್ಸ ೃ್ಟಾ ಹನ್ಯಾತ್ ರಾಷ್ಟ್ರಂ ಸರಾಜಕಂ || (43)

ಮೊದಲನೆಯ ಕರ್ಣಪರ್ವ ಪ್ರಸಂಗದಲ್ಲಿ, ಅರ್ಜುನನೇ ಯುಧಿಷ್ಠಿರನನ್ನು ಕೊಂದಿದ್ದರೆ, ಕೌರವರ ಕೆಲಸವನ್ನೇ ಮಾಡಿದಂತಾಗಿ ಪಾಂಡವರೇ ಸೋಲುತ್ತಿದ್ದರು! ಅರ್ಜುನನ ಪ್ರತಿಜ್ಞೆಗೆ ಆಗ ಅರ್ಥವೇನಿತ್ತು? ಶತ್ರುಸಂಹಾರಕ್ಕೆ ಎತ್ತಬೇಕಾದ್ದನ್ನು, ಪ್ರತಿಜ್ಞೆಯ ಹಿಂದೆ-ಮುಂದೆ ವಿಚಾರಿಸದೆ, ಪ್ರತಿಜ್ಞೆಯ ಮಿತಿ, ವ್ಯಾಪ್ತಿ ನೋಡದೆ ಅಣ್ಣನನ್ನೇ ಕೊಂದಿದ್ದರೆ ಅರ್ಜುನ ‘ದೃಢಪೂರ್ವಶ್ರುತಮೂರ್ಖ’ ಆಗುತ್ತಿದ್ದ. ಹಾಗೆಂದರೇನು? ಹೇಳುತ್ತೇನೆ. ‘ಪೂರ್ವಶ್ರುತ’ ಎಂದರೆ ಪೂರ್ವಗ್ರಹಪೀಡೆ ಎನ್ನಬಹುದು. ಒಬ್ಬನಿಗೆ ಸಮಾಜದ ಬಗ್ಗೆ, ಸಮಾಜವಾದದ ಬಗ್ಗೆ, ಧರ್ಮನಿರಪೇಕ್ಷತಾ ವಾದದ ಬಗ್ಗೆ ಒಂದು ಕಲ್ಪನೆ ಯಾವಾಗಲೋ ಬರುತ್ತದೆ. ಅದು ರಷ್ಯಾ ಮೂಲವೋ, ಚೀನಾ ಮೂಲವೋ, ಬುದ್ಧಿಜೀವಿ ಗೆಳೆಯರ ಒಡನಾಟದಿಂದಲೋ ಹೇಗಾದರಿರಲಿ ಹತ್ತುತ್ತದೆ ಎನ್ನಿ. ಅವನು ಕಾಲಕಾಲಕ್ಕೆ ಅದರ ಪರಿಶೀಲನೆ ಮಾಡಬೇಡವೇ? ಮೂಲಚಿಂತನೆಯ ದೋಷ ಅರಿಯಬೇಡವೇ? ಸ್ವಯಂ ಬುದ್ಧಿಯಿಲ್ಲವಾದರೆ ‘ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ನೋಡುತಂ’ ಎಂಬ ಸೋಮೇಶ್ವರ ಶತಕದಂತೆ ಹಿರಿಯರನ್ನು ಕೇಳಿ, ಓದಿ, ಸರಿ-ತಪು್ಪ ನಿಶ್ಚಯಿಸಿಕೊಳ್ಳಬೇಕು. ಈಗ ಜಯಪ್ರಕಾಶರು ಇಲ್ಲ. ಅವರ ಸಮಾಜವಾದ ಇಲ್ಲ. ವಿನೋಬಾಜೀ ಅವರ ‘ಸವೋದಯ’ ಪೊಳ್ಳೆಂದು ಜನ ಕೈಬಿಟ್ಟಿದ್ದಾರೆ. ‘ನೆಹರುಯಿಸಂ’ ಸತ್ತಿದೆ. ಪಟೇಲರು ಈಗ ಇಲ್ಲ. ಸಮತಾವಾದ ರಷ್ಯಾ, ಚೀನಾಗಳಲ್ಲಿ ಸತ್ತು, ಹೂತಿದ್ದಾಗಿದೆ. ಇಲ್ಲೇಕೆ ಬ್ಯಾಂಡು ಬಾರಿಸುತ್ತೀರಿ, ಅಯ್ಯನವರೇ?

ಅರಮನೆ ಸರ್ಕಾರೀಕರಣಕ್ಕೆ ಯತ್ನಿಸಿ, ಕೋರ್ಟು ತೀರ್ಪಿತ್ತಿತಲ್ಲ. ಮಹಿಷಾಸುರ ಪೂಜಕರ ಆಶೀರ್ವಾದ ನಿಮ್ಮನ್ನು ಕಾಪಾಡಲಾರದು. ಅಯ್ಯಾ! ಲಿಂಗಾಯತ-ವೀರಶೈವರ ನಡುವೆ ಒಡಕು ತರಲು ಯತ್ನಿಸಿ ಹತಾಶರಾದಿರಿ. ಕನಕ ಗೋಪುರ ಪ್ರಸಂಗದಲ್ಲಿ ತಪಸ್ವಿಗಳ ಶಾಪ ತಟ್ಟಿತು. ಹಿಂದೆ ಭಾಜಪದ ವಿ.ಎಸ್. ಆಚಾರ್ಯರು ಅರ್ಚಕರ ವರ್ಗಾವಣೆಯ ಅವಿವೇಕದ ಆದೇಶಕ್ಕೆ ಮುಂದಾಗಿದ್ದರು. ನಾನು ಆಗಣ ಮುಜ್ರಾಯಿ ಮಂತ್ರಿಗೆ ಕರೆಸಿ ಉಪದೇಶಿಸಿದೆ. ಅದು ನಿಂತಿತು. ಈಗ ಬರುತ್ತೀರಾ? ಉಪದೇಶಿಸಲೇ? ಬೇಡ ಬಿಡಿ. ನೀವು ಬರುವುದಿಲ್ಲ. ಉಡುಪಿಗೆ ಹೋದರೂ ತಪಸ್ವಿಗಳನ್ನು ಭೇಟಿಯಾಗುವುದಿಲ್ಲ. ‘ದೃಢಪೂರ್ವಶ್ರುತ ಮೂರ್ಖತ್ವ’ ಅದು. ಧರ್ಮಸ್ಥಳಕ್ಕೆ ಹೋದರೂ ಮೀನು ತಿಂದು ಹೋಗುತ್ತೀರಿ. ಅದು ಅಭ್ಯಾಸದ ಮೊಂಡುತನ. ಬೇರೆ ಎಷ್ಟೋ ವಿಧ ಮೊಂಡು. ಸುತ್ತ ಇರುವವರು ಯಾರು? ಎಲ್ಲ ನಿಮ್ಮಂತಹವರೇ. ಅಯ್ಯಾ, ನಿಮ್ಮ ಎಲ್ಲ ನಡತೆಯೂ ಹಾಸ್ಯಾಸ್ಪದವಾಗಿದೆ. ಹೊರಗಿನ ಜಗತ್ತಿನ ಸ್ಪಂದನೆಯ ಅರಿವೂ ಇಲ್ಲದ, ಟೆನಿಸನ್ ಆಂಗ್ಲಕವಿಯ ಔಟಠ್ಠಿಠ ಉಚಠಿಛ್ಟಿಠನಂತೆ, ಕಚ್ಝಚ್ಚಛಿ ಟ್ಛ ಅಠಿ ಕವನದ ಕನಸುಗಾರ್ತಿಯಂತೆ, ಗಾಳಿಯಲ್ಲಿ ಸೆಕ್ಯೂಲರ್ ಸೋಷಲಿಸ್ಟ್ ಡೆಮಾಕ್ರಸಿಯ ಕನಸುಗಾಣುತ್ತ ನಿದ್ರಿಸುತ್ತೀರಿ! ಅರ್ಜುನನ ಪ್ರತಿಜ್ಞೆಯ ನೆನಪಾದ್ದು ನಿಮ್ಮ ಸೋಷಲಿಸಂ ಪ್ರೇಮದ ಕುರುಡಿನ ಹಠ ನೋಡಿ. ಅಲ್ಲರೀ! ಸುಬ್ರಮಣಿಯನ್ ಸ್ವಾಮಿಯವರು ಉಚ್ಚ ನ್ಯಾಯಾಲಯದಲ್ಲಿ ಕೇಸು ಹಾಕಿದ್ದಾರೆ- ‘ಧರ್ವತೀತವೆಂದು ಘೋಷಿಸಿಕೊಂಡ ಸರ್ಕಾರಗಳು, ಧರ್ಮಸಂಸ್ಥೆಗಳಲ್ಲಿ ತಲೆತೂರಿಸುವುದು ಪ್ರಾಥಮಿಕ ಹಕ್ಕು ಉಲ್ಲಂಘನೆ, ಸಾಂವಿಧಾನಿಕ ಹಕ್ಕು ಮೊಟಕು, ನಾಶ, ಖ್ಝಿಠ್ಟಿಚ ್ಖ್ಟಠ ಎಂದು ತೀರ್ಪನೀಡಿ’ ಅಂತ. ವಿಚಾರಣೆಗೆ ಇನ್ನೂ ಬಂದಿಲ್ಲ. ಈ ‘ಮುಜ್ರಾಯಿ’ ಎಂಬುದು ಮೈಸೂರು ಮಹಾರಾಜರ ಕಾಲದಲ್ಲಿ ‘ಅರಮನೆಯ ರಕ್ಷಣೆಗೆ ದೇವಾಲಯಾದಿಗಳು ಸೇರಿ ಉಳಿಯಲಿ’ ಅಂತ ಬಂದದ್ದು. ಅರಮನೆಯೊಳಗೇ ಐದಾರು ದೇವಾಲಯ ಎದ್ದದ್ದು, ರಾಜರು ದುಡ್ಡು ತಿನ್ನಲಿಲ್ಲ. ‘ದೇವಾಲಯ ರಕ್ಷಿತವಾಗಲಿ, ದೇಣಿಗೆಗಳು ಸಾರ್ಥಕವಾಗಲಿ, ಉಪದ್ರವ ಬೇರೆಯವರಿಂದ ಬೇಡ’ ಅಂತ. ಈಗ ನೀವು ಮಾಡುತ್ತಿರುವುದು ತದ್ವಿರುದ್ಧ!

ದೇವಾಲಯ ಹುಂಡಿಗಳಿಗೇ ಕನ್ನಹಾಕುವವರು ದೇವರಕ್ಷಕರೋ? ಭಕ್ತರೋ? 2019ರಲ್ಲಿ ಲೋಕಸಭಾ ಚುನಾವಣೆ ಅಥವಾ ಏಪ್ರಿಲ್-ಮೇನಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಈ ಎಲ್ಲ ಕಸರತ್ತು ಎಂದು ಜನ ಭಾವಿಸುವುದಿಲ್ಲವಾ? ಹಿಂದೆ ದೇವರಾಜ ಅರಸರು ಪ್ರಸಿದ್ಧ ಎಲ್ಲಮ್ಮ ಗುಡ್ಡಕ್ಕೆ, ವೀರನಾರಾಯಣ ದೇವಳಾದಿಗಳಿಗೆ ಕೈಹಾಕಿದ್ದೂ ಹೀಗೆಯೇ ಅಲ್ಲವೇ? ಅದು ನಿಮಗೆ ಪೂರ್ವನಿದರ್ಶನ ಆಗಿರಲು ಸಾಕು. ಧರ್ಮನಿರಪೇಕ್ಷರು ಬಾಯಿಮುಚ್ಚುವಂತೆ, ಈಗ ಹಿಂದೂ ಮುಖಂಡರು ಸಂಘಟಿತರಾಗದೆ ಉಳಿಗಾಲವಿಲ್ಲ! ಇಲ್ಲಿ ಕ್ರೖೆಸ್ತ ಮುಸಲ್ಮಾನರ ಚರ್ಚು-ಮಸೀದಿಗಳೇಕೆ ನಿಮ್ಮ ವ್ಯಾಪ್ತಿಯಲ್ಲಿ ಬರಲಿಲ್ಲ? ಆಹಾ! ಅಲ್ಲಿದೆ ಗುಟ್ಟು! ಅಹಿಂದದ ಪ್ರೇರಕರೇ ಅವರೆಂದ ಬಳಿಕ, ಅವರ ವೋಟು ಗಿಟ್ಟಿಸಲು ನಿಮಗೆ ‘ಹೈಕಮಾಂಡ್’ನಿಂದ ಪ್ರೇರಣೆ, ಪೋಷಣೆ ಬಂದಿರಲು ಸಾಕು. ಅವರ ತೃಪ್ತಿಯಲ್ಲಿ ನಿಮ್ಮ ಬಾಳುವೆ! ಹೌದೆ? ಮತ್ತೆ ‘ಮೃದುಹಿಂದುತ್ವ’ ನಾಟಕ ಏಕೆ? ನೀವೇ ‘ನಿಜಹಿಂದೂ’ ಎನ್ನುತ್ತೀರಲ್ಲ? ತಪು್ಪ ತಿಳಿದ ಮೇಲೆ ಮಾರೀಚನೂ ರಾವಣನಿಗೆ ಹೇಳಿದ- ‘ಒಬ್ಬನ ಪಾಪದಿಂದ ರಾಷ್ಟ್ರಗಳೇ ಸಾಯುತ್ತವೆ’ ಅಂತ. ಹಾವು ಕೊಲ್ಲಲು ಹೋಗಿ, ಅದು ಹೊಕ್ಕ ಮಡುವಿನ ಮೀನುಗಳನ್ನೆಲ್ಲ ಕೊಂದಂತೆ ಆಗುತ್ತದೆ, ಎಂದನಲ್ಲ? ಕರ್ನಾಟಕ ಮಡುವಾಗಬೇಕೆ? ನಾವು ಮೀನಾಗಬೇಕೆ? ಏನಿರಯ್ಯ ಈಗಣ ರಂಪಾಟ, ರಾದ್ಧಾಂತ?.

ರಾಮಾಯಣವೂ ನೆನಪಾಗುತ್ತದೆ. ಮೂಲಬಲ- ್ಟಠಛ್ಟಿಡಛಿಛ ್ಛrಛಿಠ- ಕೂಡ ನಾಶವಾದ ಮೇಲೆ, ತನ್ನವರು ಎಲ್ಲ ಸತ್ತಮೇಲೆ ರಾವಣ ಸೀತೆಯನ್ನೇ ಕೊಲ್ಲಲು ಬಿಚ್ಚುಗತ್ತಿ ಹಿಡಿದು ಅಶೋಕವನದತ್ತ ಓಡುತ್ತಾನೆ. ಅಂದು ಫಾಲ್ಗುಣ ಶುದ್ಧ ಚತುರ್ದಶೀ, ಕಾಳರಾತ್ರಿ. ‘ಅನರ್ಥಕ್ಕೆಲ್ಲ ಸೀತೆಯೇ ಕಾರಣ’ ಎಂಬುದು ಆಗ ‘ದೃಢಪೂರ್ವಶ್ರುತ’ ರಾವಣನ ಗ್ರಹಿಕೆ! ತಾನು ಕದ್ದುತಂದದ್ದಲ್ಲ ಎಂಬ ಆತ್ಮಸಮರ್ಥನೆ! ಆಗ ಮಹಾಪಾರ್ಶ್ವನೆಂಬ ಮಂತ್ರಿ ಬುದ್ಧಿಹೇಳಿ ಬಿಡಿಸುತ್ತಾನೆ- ‘ನಾಳೆ ಅಮಾವಾಸ್ಯೆ, ಜಯ ಖಂಡಿತ’ ಅಂತ. ‘ಯಾರಿಗೆ ಜಯ?’ ಅಂತ ಆತನು ಹೇಳಲಿಲ್ಲ. ಆ ಅಮಾವಾಸ್ಯೆಯೇ ರಾವಣ ಸತ್ತ. 2018ರ ಚುನಾವಣೆ ಎಂಬುದು ಒಂದು ಅಮಾವಾಸ್ಯೆ. ಯಾವ ರಾವಣನ ಸೋಲೋ? ಲೋಕ ಎದುರುನೋಡುತ್ತಿದೆ.

ಅಯ್ಯಾ! ಇನ್ನಾದರೂ ಹಿಂದೂಪ್ರೀತಿ ಸಂಪಾದಿಸಲು ಏನನ್ನಾದರೂ ಮಾಡಿ. ಅನ್ವಾರ್ ಮಾನಿಪ್ಪಾಡಿಯವರ ವರದಿಯಂತೆ ‘ವಕ್ಪ್’ ಆಸ್ತಿಯಲ್ಲಿ ಯಾರ್ಯಾರು ಎಷ್ಟು ತಿಂದರೋ ಅವರನ್ನು ಮೊದಲು ದಂಡಿಸಿ, ಖಛ್ಚಿuಚ್ಟ ಇಛಿಛಛ್ಞಿಠಿಜಿಚ್ಝಠ ಭದ್ರಪಡಿಸಿ; ‘ಹಿಂದೂ’ ಎಂದು ಬೊಗಳೆ ಹೊಡೆಯುತ್ತ ‘ನಾನೂ ರಾಮಭಕ್ತ, ನನ್ನ ಹೆಸರಲ್ಲೂ ರಾಮ ಇದ್ದಾನೆ’ ಅಂತ ಹೇಳಿ ವಂಚಿಸಬೇಡಿ. ನಿಮಗೆ ವೈಷ್ಣವದೀಕ್ಷೆ ಕೊಡಲು ಪೇಜಾವರರು ಮುಂದಾದಾಗ, ‘ನಾನೇನೂ ವಿಷ್ಣುಭಕ್ತನಲ್ಲ, ರಾಮಭಕ್ತನಲ್ಲ, ಶೈವ’ ಎಂದಿರಲ್ಲ? ಈಗ ನೀವು ಶೈವರೂ ಅಲ್ಲ, ವೈಷ್ಣವರೂ ಅಲ್ಲ, ಹಿಂದೂ ಅಲ್ಲ. ಅಹಿಂದ, ಎಲ್ಲಾ ಬಯಲಾಯ್ತು. ದಂಡನೀಯರು ನಿಮ್ಮಲ್ಲೇ ಬಹಳ ಇದ್ದಾರೆ. ನೀವು ಯಾರನ್ನೂ ದಂಡಿಸುವುದಿಲ್ಲ. ನಾನು ಬರೆದು ಬರೆದು ಕೈಸೋತಿದೆ. ನಿಮಗೆ ಸದನುಷ್ಠಾನ ಸಂಕಲ್ಪ ಬರುವಂತೆ ಕಾಣುತ್ತಿಲ್ಲ. ಸಾಮಾಜಿಕರಾದರೂ ಎಚ್ಚೆತ್ತುಕೊಳ್ಳಲಿ ಎಂಬ ಆಸೆಯಿಂದ ಬರೆಯಬೇಕಾಗಿದೆ. ಈಗ ನಿಮ್ಮ ದೋಸ್ತಿಗಳು-ರಾಮದಾಸ್, ಭಗವಾನ್ ಇನ್ನಿತರರು- ಯಾರೂ ಕಾಪಾಡಲಾರರು. ಕಾಲ ಮುಗಿದವರನ್ನು ನಂಬಬೇಡಿ. ಇನ್ನಾದರೂ ಸದ್ಬುದ್ಧಿ ಬರಲಿ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top