ಯಶಸ್ವಿ ಧಾರಾವಾಹಿ ಅಗ್ನಿಸಾಕ್ಷಿಯಿಂದ ಸಿದ್ಧಾರ್ಥ್​ ಅಲಿಯಾಸ್​ ವಿಜಯ್​ ಸೂರ್ಯ ಹೊರಬರಲು ಕಾರಣ ಇಲ್ಲಿದೆ…

ಬೆಂಗಳೂರು: ರಾತ್ರಿ 8 ಗಂಟೆಯಾದರೆ ಸಾಕು ಕರ್ನಾಟಕದ ಬಹುತೇಕ ಮನೆಗಳ ಟಿವಿಯಲ್ಲಿ ಕೇಳಿಬರುವುದು ಒಂದೇ ಪದ, ಅದು ‘ಅಗ್ನಿಸಾಕ್ಷಿ’. ಎಷ್ಟರ ಮಟ್ಟಿಗೆ ಈ ಧಾರವಾಹಿ ಕನ್ನಡಿಗರ ಜನಮನದಲ್ಲಿ ಉಳಿದುಬಿಟ್ಟಿದೆ ಎಂದರೆ, ಟ್ರೋಲ್​ ಪೇಜ್​ಗಳಲ್ಲಿಯೂ ಇದರ ಜಾಡು ಕಾಣಸಿಗುತ್ತದೆ. ವಿಶೇಷ ಎಂದರೆ ಈ ಧಾರವಾಹಿ 5 ವರ್ಷ ಪೂರೈಸಿರುವುದು ಖಷಿಯ ವಿಚಾರವಾದರೆ, ಯಾವ ಜೋಡಿಗಾಗಿ ಧಾರವಾಹಿಯನ್ನು ತಪ್ಪದೇ ನೋಡುತ್ತಿದ್ದರೋ ಅವರಿಗೆ ದುಃಖದ ವಿಚಾರವು ಕಾದಿದೆ.

ಹೌದು, ಕಲರ್ಸ್​ ಕನ್ನಡದಲ್ಲಿ ಮೂಡಿಬರುತ್ತಿರುವ ಯಶಸ್ವಿ ಧಾರವಾಹಿಗಳಲ್ಲಿ ಒಂದಾದ ಅಗ್ನಿಸಾಕ್ಷಿಯ ಕೇಂದ್ರ ಬಿಂದು ಸಿದ್ಧಾರ್ಥ್​(ವಿಜಯ್​ ಸೂರ್ಯ) ಹಾಗೂ ಸನ್ನಿಧಿ(ವೈಷ್ಣವಿ) ಅವರನ್ನು ತೆರೆಯ ಮೇಲಲ್ಲ ನಿಜವಾಗಿಯೂ ಜೋಡಿಯಾಗಿಬಿಡಿ ಎಂದು ಎಷ್ಟೋ ಅಭಿಮಾನಿಗಳು ಆಗ್ರಹ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಹಿಟ್​ ಆಗಿದ್ದ ತೆರೆಯ ಮೇಲಿನ ಜೋಡಿ ಬೇರೆಯಾಗುವ ಸಮಯ ಬಂದಿದೆ.

ಧಾರವಾಹಿಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯ ಸೂರ್ಯ ಅಲಿಯಾಸ್​​ ಸಿದ್ಧಾರ್ಥ್​ ಅವರು ಇನ್ಮುಂದೆ ಅಗ್ನಿಸಾಕ್ಷಿಯಲ್ಲಿ ಕಾಣಸಿಗುವುದಿಲ್ಲ. ಏಕೆಂದರೆ, ಧಾರಾವಾಹಿಗಾಗಿ ವಿಜಯ್ ಸೂರ್ಯ 5 ವರ್ಷ ಒಪ್ಪಂದ ಕೂಡ ಮಾಡಿಕೊಂಡಿದ್ದರು. ಈಗ ಅಗ್ರಿಮೆಂಟ್ ಅವಧಿ ಕೂಡ ಮುಗಿದಿರುವ ಕಾರಣ ವಿಜಯ್ ಧಾರಾವಾಹಿಯಿಂದ ಹೊರಬರಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ವಿಜಯ್ ಸೂರ್ಯ ನಟಿಸಿದ ಸಿದ್ಧಾರ್ಥ್ ಪಾತ್ರ ಕೂಡ ಕೊನೆಯಾಗುತ್ತಿದೆ ಎನ್ನಲಾಗಿದೆ.

ಕಳೆದ ಫೆಬ್ರವರಿಯಲ್ಲಿ ವಿಜಯ್ ಸೂರ್ಯ ಚೈತ್ರ ಎಂಬುವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗಾಗಿ ಧಾರಾವಾಹಿಯಿಂದ ಹೊರಬಂದು ಕುಟುಂಬದ ಜತೆ ಸ್ವಲ್ಪ ಕಾಲ ಕಳೆಯಬೇಕು ಎಂಬುದು ವಿಜಯ್​ ಸೂರ್ಯ ಆಸೆ ಎಂದು ಹೇಳಲಾಗುತ್ತಿದೆ.

ಕರ್ನಾಟಕ ಅತಿ ಹೆಚ್ಚು ರೇಟಿಂಗ್​ ಹೊಂದಿರುವ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾಗಿ ನಿಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ ವಿಜಯ ಸೂರ್ಯ ಅವರಿಗೆ ಕಲರ್ಸ್​ ಕುಟುಂಬದಿಂದ ಧನ್ಯವಾದಗಳು. ಮುಂದಿನ ನಿಮ್ಮ ಎಲ್ಲ ಪ್ರಾಜೆಕ್ಟ್​ಗಳಿಗೆ ಶುಭವಾಗಲಿ ಎಂದು ಕಲರ್ಸ್​ ಕನ್ನಡ ವಾಹಿನಿ ಶುಭ ಹಾರೈಸಿದೆ. (ದಿಗ್ವಿಜಯ ನ್ಯೂಸ್​)

With Great Devotion, Fervor And Gaiety, With Rays Of Joy And Hope , Wish You all a Happy Makar Sankranti from Agnisakshi 😀

Vijay Suriya -The Agnisakshi hero ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜನವರಿ 14, 2016

:* ಬಲೇ ಅಪರೂಪ ನಮ್ ಜೋಡಿ

Agnisaakshi Colors ಕನ್ನಡ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಮೇ 4, 2019

Awesome team

Agnisaakshi Colors ಕನ್ನಡ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಮಾರ್ಚ್ 24, 2018

:* :* :* Traditional look

Agnisaakshi Colors ಕನ್ನಡ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಮಾರ್ಚ್ 21, 2018

Agnisaakshi Colors ಕನ್ನಡ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಫೆಬ್ರವರಿ 9, 2018

One Reply to “ಯಶಸ್ವಿ ಧಾರಾವಾಹಿ ಅಗ್ನಿಸಾಕ್ಷಿಯಿಂದ ಸಿದ್ಧಾರ್ಥ್​ ಅಲಿಯಾಸ್​ ವಿಜಯ್​ ಸೂರ್ಯ ಹೊರಬರಲು ಕಾರಣ ಇಲ್ಲಿದೆ…”

  1. ಶ್ರೀ ವಿಜಯ ಸೂರ್ಯ ಅವರಿಗೆ ಶುಭವಾಗಲಿ.

Leave a Reply

Your email address will not be published. Required fields are marked *