More

    ಮತಗಟ್ಟೆ ಗೋಡೆಗಳ ಮೇಲೆ ರಂಗು ರಂಗಿನ ಬಣ್ಣದ ಚಿತ್ತಾರ

    ಬಾಗಲಕೋಟೆ: ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ಜಿಲ್ಲೆಯಲ್ಲಿ ಮಾದರಿ, ಸಖಿ, ವಿಶೇಷ ಚೇತನರ ಸ್ನೇಹಿ, ಯುವ ಹಾಗೂ ಥೀಮ್ ಆಧಾರಿತ ಮತಗಟ್ಟೆಗಳನ್ನು ಸಜ್ಜುಗೊಳ್ಳುತ್ತಿವೆ ಎಂದು ಜಿಪಂ ಸಿಇಒ, ಜಿಲ್ಲಾ ಸ್ವೀಪ್ ಅಧ್ಯಕ್ಷ ಟಿ.ಭೂಬಾಲನ್ ತಿಳಿಸಿದ್ದಾರೆ.

    ಜಿಲ್ಲೆಯ ಏಳು ಮತಕ್ಷೇತ್ರಗಳಲ್ಲಿ ಒಟ್ಟು 19 ಮಾದರಿ ಮತಗಟ್ಟೆಗಳು, 13 ಸಖಿ (ಪಿಂಕ್) ಮತಗಟ್ಟೆಗಳು, 8 ಅಂಗವಿಕಲರ ಸ್ನೇಹಿ ಮತಗಟ್ಟೆಗಳು, 7 ಯುವ ಮತಗಟ್ಟೆಗಳು ಹಾಗೂ 4 ಥೀಮ್ ಆಧಾರಿತ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಬಣ್ಣ ಬಣ್ಣದ ಚಿತ್ತಾರ ಮೂಲಕ ಮತಗಟ್ಟೆಗಳನ್ನು ಶೃಂಗಾರಗೊಳಿಸಲಾಗುತ್ತಿದೆ. ತೇರದಾಳದ ಮತಗಟ್ಟೆ ಸಂಖ್ಯೆ 24 ರಲ್ಲಿ ಬನಹಟ್ಟಿಯಲ್ಲಿ ತಯಾರಾಗುವ ಸೀರೆಯ ಚಿತ್ರವನ್ನು ಗೋಡೆ ಮೇಲೆ ಮೂಡಿಸಿ ಮಾದರಿ ಮತಗಟ್ಟೆಯನ್ನಾಗಿ ರೂಪಿಸಲಾಗಿದೆ.
    ಮತದಾನದ ಪ್ರಮಾಣವನ್ನು ಶೇ.80 ಕ್ಕಿಂತಲೂ ಹೆಚ್ಚು ಮಾಡುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮಿತಿಯಿಂದ ಜಾಗೃತಿ ಮೂಡಿಸಲಾಗಿದೆ.

    ಇನ್ನು ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ಒಟ್ಟು 5 ಬಗೆಯ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮತಗಟ್ಟೆ ಗೋಡೆಗಳ ಮೇಲೆ ಬಗೆ ಬಗೆಯ ಚಿತ್ರಗಳ ಜತೆಗೆ ಮತದಾನದ ಜಾಗೃತಿ ಕುರಿತು ಘೋಷ ವಾಕ್ಯಗಳನ್ನು ಬರೆಯಲಾಗಿದೆ. ವಿಶೇಷ ಚೇತನ ಮತದಾರರನ್ನು ಆಕರ್ಷಿಸುವ ರಂಗು ರಂಗಿನ ಚಿತ್ತಾರದ ಚಿತ್ರಗಳು, ಪಿಂಕ್ ಬಣ್ಣದಿಂದ ಅಲಂಕೃತಗೊಂಡ ಸಖಿ ಮತಗಟ್ಟೆಗಳು ಎಲ್ಲರನ್ನು ಕೈ ಬೀಸಿ ಕರೆಯುವಂತಿವೆ.

    ಭಾರತ ದೇಶದಂತಹ ಬೃಹತ್ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಅಚ್ಚುಕಟ್ಟಾಗಿ ಸಂಘಟಿಸುವುದು ಒಂದು ಸವಾಲಿನ ಕೆಲಸ. ಮತದಾರರಲ್ಲಿ ಜಾಗೃತಿ ಮೂಡಿಸಲು ಭಾರತ ಚುನಾವಣಾ ಆಯೋಗ ಹಲವು ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತ ಬಂದಿದೆ. ಆ ಮಾರ್ಗದಲ್ಲಿಯೇ ಜಿಲ್ಲಾ ಸ್ವೀಪ್ ಸಮಿತಿಯ ಮತ್ತೊಂದು ಅದ್ಬುತ ಕಲ್ಪನೆ ಇದಾಗಿದೆ. ಎಲ್ಲರನ್ನು ಒಳಗೊಳ್ಳುವಿಕೆಯ ಮಂತ್ರ ಈ ವಿಶೇಷ ಮತಗಟ್ಟೆಗಳ ಸ್ಥಾಪನೆ ಹಿಂದೆ ಇದೆ. ಮತದಾರರನ್ನು ಮತಗಟ್ಟೆಯ ಕಡೆ ಸೆಳೆದು ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಟಿ.ಭೂಬಾಲನ್ ತಿಳಿಸಿದ್ದಾರೆ.

    ಮಾದರಿ ಮತಗಟ್ಟೆ

    ಮುಧೋಳ ಕ್ಷೇತ್ರದ ಲಕ್ಷಾನಟ್ಟಿ (ಮ.ಸಂ208), ಶಿರೋಳ (ಮ.ಸಂ.24), ತೇರದಾಳ ಕ್ಷೇತ್ರದಲ್ಲಿ ಬನಹಟ್ಟಿ (ಮ.ಸಂ.120), ಆಸಂಗಿ (ಮ.ಸಂ.41), ತೇರದಾಳ ನಗರ (ಮ.ಸಂ.24), ಜಮಖಂಡಿ ಕ್ಷೇತ್ರದಲ್ಲಿ ಜಮಖಂಡಿ ನಗರ (ಮ.ಸಂ.142), ಹಿರೇಪಡಸಲಗಿ (ಮ.ಸಂ.56), ಬೀಳಗಿ ಕ್ಷೇತ್ರದಲ್ಲಿ ಯಡಹಳ್ಳಿ (ಮ.ಸಂ.40), ಹೆರಕಲ್ (ಮ.ಸಂ.145), ತೆಗ್ಗಿ (ಮ.ಸಂ.48), ಕೊರ್ತಿ ಆರ್‌ಸಿ (ಮ.ಸಂ.21), ಬಾದಾಮಿ ಕ್ಷೇತ್ರದಲ್ಲಿ ಹಂಸನೂರ (ಮ.ಸಂ.84), ಬಾದಾಮಿ (ಮ.ಸಂ.171), ಬಾಗಲಕೋಟೆ ಮತಕ್ಷೇತ್ರದಲ್ಲಿ ಬೇವಿನಮಟ್ಟಿ (ಮ.ಸಂ.194), ಬಿಲ್‌ಕೆರೂರ (ಮ.ಸಂ.43), ಬಾಗಲಕೋಟೆ (ಮ.ಸಂ.80), ಹುನಗುಂದ ಕ್ಷೇತ್ರದಲ್ಲಿ ಕರಡಿ (ಮ.ಸಂ.45), ಇಳಕಲ್ಲ (ಮ.ಸಂ.158), ಸೂಳಿಭಾವಿ (ಮ.ಸಂ.100).

    ಸಖಿ (ಪಿಂಕ್) ಮತಗಟ್ಟೆ

    ಮುಧೋಳ ಮತಕ್ಷೇತ್ರದ ಮಾಲಾಪುರ (ಮ.ಸಂ.47), ತೇರದಾಳ ಕ್ಷೇತ್ರದಲ್ಲಿ ಮಹಾಲಿಂಗಪುರ (ಮ.ಸಂ.191), ಚಿಮ್ಮಡ (ಮ.ಸಂ.174), ಜಮಖಂಡಿ ಕ್ಷೇತ್ರದಲ್ಲಿ ಜಮಖಂಡಿ (ಮ.ಸಂ.179), ಹುಲ್ಯಾಳ (ಮ.ಸಂ.209), ಬೀಳಗಿ ಕ್ಷೇತ್ರದಲ್ಲಿ ಬೀಳಗಿ (ಮ.ಸಂ.76), ಅನಗವಾಡಿ ಆರ್.ಸಿ (ಮ.ಸಂ.138), ಬಾದಾಮಿ ಮತಕ್ಷೇತ್ರದಲ್ಲಿ ಬಾದಾಮಿ (ಮ.ಸಂ.163), ಖಾನಾಪುರ ಎಸ್.ಪಿ (ಮ.ಸಂ.104), ಬಾಗಲಕೋಟೆ ಮತಕ್ಷೇತ್ರದಲ್ಲಿ ಬೇವಿನಮಟ್ಟಿ (ಮ.ಸಂ.193), ಬಾಗಲಕೋಟೆ (ಮ.ಸಂ.79), ಹುನಗುಂದ ಕ್ಷೇತ್ರದಲ್ಲಿ ಇಳಕಲ್ಲ (ಮ.ಸಂ.160), ಗುಡೂರ ಎಸ್.ಸಿ (ಮ.ಸಂ.213).

    ಅಂಗವಿಕಲರ ಸ್ನೇಹಿ ಮತಗಟ್ಟೆ

    ಮುಧೋಳ ಕ್ಷೇತ್ರದ ಇಂಗಳಗಿ (ಮ.ಸಂ.133), ತೇರದಾಳ ಕ್ಷೇತ್ರದ ಯರಗಟ್ಟಿ (ಮ.ಸಂ.168), ಜಮಖಂಡಿ ಕ್ಷೇತ್ರದ ಕಡಪಟ್ಟಿ (ಮ.ಸಂ.192), ಬೀಳಗಿ ಕ್ಷೇತ್ರದ ಬೀಳಗಿ (ಮ.ಸಂ.88), ಬಾಡಗಂಡಿ (ಮ.ಸಂ.73), ಬಾದಾಮಿ ಕ್ಷೇತ್ರದ ಬಾದಾಮಿ (ಮ.ಸಂ.145), ಬಾಗಲಕೋಟೆ ಕ್ಷೇತ್ರದ ಬಾಗಲಕೋಟೆ (ಮ.ಸಂ.117), ಹುನಗುಂದ ಕ್ಷೇತ್ರದ ಹುನಗುಂದ (ಮ.ಸಂ.78).

    ಯುವ, ಥೀಮ್ ಆಧಾರಿತ ಮತಗಟ್ಟೆ :

    ಮುಧೋಳ ಕ್ಷೇತ್ರದ ಬೆಳಗಲಿ (ಮ.ಸಂ.1), ಮುಗಳಖೋಡ (ಮ.ಸಂ.50), ತೇರದಾಳ ಕ್ಷೇತ್ರದ ತಮದಡ್ಡಿ (ಮ.ಸಂ.31), ಜಮಖಂಡಿ ಕ್ಷೇತ್ರದ ಜಮಖಂಡಿ (ಮ.ಸಂ.157), ಜಮಖಂಡಿ (ಮ.ಸಂ.145), ಬೀಳಗಿ ಕ್ಷೇತ್ರದ ಬೀಳಗಿ (ಮ.ಸಂ.85), ಬಾದಾಮಿ ಕ್ಷೇತ್ರದ ಗುಳೇದಗುಡ್ಡ (ಮ.ಸಂ.44), ಪಟ್ಟದಕಲ್ಲ (ಮ.ಸಂ.134), ಬಾಗಲಕೋಟೆ ಮತಕ್ಷೇತ್ರದ ಬಾಗಲಕೋಟೆ (ಮ.ಸಂ.179), ಮುಚಖಂಡಿ (ಮ.ಸಂ.187), ಹುನಗುಂದ ಕ್ಷೇತ್ರದ ಇಳಕಲ್ಲ (ಮ.ಸಂ.175).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts