More

  ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ಹಣಕ್ಕೆ ಬೇಡಿಕೆ; ಪ್ರಕರಣ ದಾಖಲು

  ಹಾವೇರಿ: ಇಲ್ಲಿಯ ಹಾವೇರಿ ಡಿಸಿ ಹೆಸರಿನಲ್ಲಿ ಫೆಸ್‌ಬುಕ್ ಪೇಜ್ ತೆರೆದು ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
  ಪ್ರಕರಣದ ಕುರಿತು ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಹದೇವಪ್ಪ ವೀರಪ್ಪ ಬೂದಿಹಾಳ ಪೊಲೀಸರಿಗೆ ದೂರು ನೀಡಿದ್ದಾರೆ.
  ಯಾರೋ ಅಪರಿಚಿತ ವ್ಯಕ್ತಿ ಹಾವೇರಿ ಡಿಸಿ ಹೆಸರಿನಲ್ಲಿ ಫೆಕ್ ಫೆಸ್‌ಬುಕ್ ಖಾತೆ ತೆರೆದಿದ್ದಾನೆ. ಅದರ ಮೂಲಕ ಶಿವಕುಮಾರ ಹುರಕಡ್ಲಿ ಎಂಬುವರಿಗೆ ಮೇಸೆಜ್ ಕಳುಹಿಸಿ 20 ಸಾವಿರ ರೂ. ಕೇಳಿದ್ದಾನೆ. ಕೂಡಲೇ ಎಚ್ಚೆತ್ತ ಶಿವಕುಮಾರ ಜಿಲ್ಲಾಡಳಿತ ಕಚೇರಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾನೆ. ಅಧಿಕಾರಿಗಳು ಇದು ನಕಲಿ ಎಂದು ತಿಳಿದು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  See also  ನಾವೀನ್ಯತೆ, ಪೇಟೆಂಟ್ ಇದ್ದಾಗ ಜಾಗತಿಕ ಸ್ಪರ್ಧೆ ಸಾಧ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts