More

  ಎನ್‌ಇಪಿ ಜಾರಿಗೆ ಆಗ್ರಹಿಸಿ 1 ಕೋಟಿ ಸಹಿ ಸಂಗ್ರಹ: ಡಾ.ಈ.ಸಿ. ನಿಂಗರಾಜ್ ಗೌಡ

  ಮೈಸೂರು: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಗೆ ಪರ್ಯಾಯವಾಗಿ ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಎನ್‌ಇಪಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ 1 ಕೋಟಿ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ ಎಂದು ಪೀಪಲ್ಸ್ ಫಾರ್ ಕರ್ನಾಟಕ ಎಜುಕೇಷನ್ ಜಿಲ್ಲಾ ಸಂಚಾಲಕ ಡಾ.ಈ.ಸಿ. ನಿಂಗರಾಜ್‌ಗೌಡ ಹೇಳಿದರು.

  ಎನ್‌ಇಪಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂಬ ಏಕೈಕ ಕಾರಣಕೋಸ್ಕರ ರಾಜ್ಯದಲ್ಲಿ ಎನ್‌ಇಪಿ ರದ್ದುಗೊಳಿಸಿ ರಾಜ್ಯ ಶಿಕ್ಷಣ ನಿತಿ ಜಾರಿಗೊಳಿಸುವುದು ಸರಿಯಲ್ಲ. ಎನ್‌ಇಪಿಯನ್ನು ಎಸಿ ರೂಂನಲ್ಲಿ ಕುಳಿತ ರಚಿಸಿದ್ದಲ್ಲ, ಸತತ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿ ಎಲ್ಲ ರಾಜ್ಯಗಳಿಂದ ಅಭಿಪ್ರಾಯ ಪಡೆದು ರಚಿಸಲಾಗಿದೆ. ಆದರೆ, ರಾಜಕೀಯ ಕಾರಣಕೋಸ್ಕರ ಎನ್‌ಇಪಿ ರದ್ದುಗೊಳಿಸುವುದು ಸರಿಯಲ್ಲ. ಹೀಗಾಗಿ ರಾಜ್ಯದಲ್ಲಿ ಈಗಾಗಲೇ ಸಹಿ ಸಂಗ್ರಹ ಅಭಿಯಾನ ಪ್ರಾರಂಭಗೊಂಡಿದ್ದು, ನ.30ರವರೆಗೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ರಾಜ್ಯ ಸರ್ಕಾರ ಎನ್‌ಇಪಿ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚಿಸದೆ ಏಕಾಏಕಿ ರದ್ದುಗೊಳಿಸುತ್ತಿರುವುದು ಏತಕ್ಕೆ? ಕೇವಲ ರಾಜಕೀಯ ಅಸ್ತ್ರವಾಗಿ ರಾಜ್ಯ ಸರ್ಕಾರ ಎನ್‌ಇಪಿಯನ್ನು ಬಳಸುತ್ತಿದೆಯೇ? ಬಡ ಪ್ರತಿಭಾವಂತ ಮಕ್ಕಳು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಬೇಡವೇ ಎಂದು ಪ್ರಶ್ನಿಸಿದರು.

  ಕಸ್ತೂರಿ ರಂಗನ್ ಅಧ್ಯಕ್ಷತೆಯ ಎನ್‌ಇಪಿ ಸಮಿತಿಯು ವೈಜ್ಞಾನಿಕ ತಳಹದಿ ಮೇಲೆ ಎನ್‌ಇಪಿಯನ್ನು ಸಿದ್ಧಪಡಿಸಿದೆ. ಈ ಮೊದಲಿನ ಶಿಕ್ಷಣ ನೀತಿಯಲ್ಲಿದ್ದ ಲೋಪದೋಷ ಸರಿಪಡಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಜ್ಞಾನ ಮತ್ತು ಕೌಶಲದಲ್ಲಿ ಭಾರತವನ್ನು ನಂ.1 ಸ್ಥಾನದಲ್ಲಿರಿಸುವ ಉದ್ದೇಶವನ್ನು ಎನ್‌ಇಪಿ ಹೊಂದಿದೆ ಎಂದರು.

  ಸುದ್ದಿಗೋಷ್ಠಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಪ್ರೊ.ಜಿ.ಸಿ. ರಾಜಣ್ಣ, ಜಾನಪದ ವಿಶ್ವ ವಿದ್ಯಾಲಯ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಕೆ. ವಸಂತಕುಮಾರ್ ಹಾಗೂ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts