More

    ಅಕಾಲಿಕ ಮಳೆಗೆ ಅರಳಿದ ಕಾಫಿ ಹೂವು

    ಬಾಳೆಹೊನ್ನೂರು: ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಕೆಲ ಪ್ರದೇಶಗಳ ಕಾಫಿ ತೋಟಗಳಲ್ಲಿ ಕಾಫಿ ಹೂವು ಅರಳಿದ್ದು ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ.

    ಹುಯಿಗೆರೆ, ಕುಂದೂರು, ಬಿಕ್ಕರಣೆ, ಸಾರಗೋಡು ಮುಂತಾದೆಡೆ ಹವಾಮಾನ ವೈಪರೀತ್ಯದ ಪರಿಣಾಮ ಮಳೆ ಸುರಿದಿದ್ದು, ಕಾಫಿ ಹಣ್ಣು ಕೊಯ್ಲು ಮಾಡುವ ಸಮಯದಲ್ಲಿಯೇ ಅಕಾಲಿಕವಾಗಿ ಹೂವು ಅರಳಿವೆ. ಕಾಫಿ ಹೂವು ಅರಳಿರುವುದರಿಂದ ಹೇಗೆ ಕೊಯ್ಲು ಮಾಡುವುದು ಎನ್ನುವ ಚಿಂತೆ ಕಾಡತೊಡಗಿದೆ.

    ಕಾಫಿ ಕೊಯ್ಲು ಮಾಡಲು ಹೋದರೆ ಮುಂದಿನ ಬಾರಿಯ ಫಸಲಿಗೂ ಹೊಡೆತ ಬೀಳಲಿದೆ. ಕಾಫಿ ಕೊಯ್ಲು ಮಾಡದಿದ್ದರೆ ಈ ಬಾರಿಯ ಬೆಳೆಯೂ ನಷ್ಟವಾಗಲಿದೆ.

    ಸಾಧಾರಣವಾಗಿ ಈ ಭಾಗಗಳಲ್ಲಿ ಫೆಬ್ರವರಿ-ಮಾರ್ಚ್​ನಲ್ಲಿ ಕಾಫಿ ತೋಟಗಳಲ್ಲಿ ಕಾಫಿ ಹಣ್ಣು ಕೊಯ್ಲು ಆದ ನಂತರ ಕೃತಕವಾಗಿ ನೀರು ಹಾಯಿಸಿ ತೋಟಗಳಲ್ಲಿ ಕಾಫಿ ಹೂವು ಅರಳಿಸಿ ಮುಂದಿನ ಬಾರಿಯ ಫಸಲಿಗೆ ತಯಾರು ಮಾಡಲಾಗುತ್ತಿತ್ತು.

    ಈಗ ಬಿಟ್ಟಿರುವ ಹೂವು ಮುಂದಿನ ಮಳೆಗಾಲ ಅಥವಾ ಅಕ್ಟೋಬರ್-ಸೆಪ್ಟೆಂಬರ್ ವೇಳೆಗೆ ಕಾಯಿ ಕಟ್ಟದೆ ಸಂಪೂರ್ಣವಾಗಿ ಉದುರಿ ಹೋಗಲಿದ್ದು, ಮುಂದಿನ ಬಾರಿಯ ಫಸಲು ಕಡಿಮೆಯಾಗುವುದು ನಿಶ್ಚಿತ.

    ಈ ಬಾರಿ ಮಲೆನಾಡಿನ ಹಲವೆಡೆ ಅತಿವೃಷ್ಟಿ ಪರಿಣಾಮವಾಗಿ ಕಾಫಿ ತೋಟಗಳು ಹಾಗೂ ಬೆಳೆ ನಷ್ಟವಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಫಸಲು ಗಣನೀಯವಾಗಿ ಇಳಿಕೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts