ಕಾಫಿ ತೋಟಕ್ಕೆ ನುಗ್ಗಿದ ಕಾರು

ಆಲ್ದೂರು: ತುಡಕೂರು ಸಮೀಪದ ಪ್ಲಾಂಟರ್ ಕ್ಲಬ್ ಬಳಿ ಕಾಫಿ ತೋಟಕ್ಕೆ ಕಾರು ನುಗ್ಗಿದ್ದು, ಸಿನಿಮೀಯ ರೀತಿಯಲ್ಲಿ ಕಾರು ಚಾಲಕ ಪಾರಾಗಿದ್ದಾನೆ.

ಶೃಂಗೇರಿ ಬಳಿಯ ಸುಂಕರಡಿ ಗ್ರಾಮದ ನಿತೇಶ್ ಕೃಷ್ಣ ಶಿವರಾತ್ರಿ ಹಬ್ಬಕೆಂದು ಬೆಂಗಳೂರಿನಿಂದ ಶೃಂಗೇರಿಗೆ ಕಾರಿನಲ್ಲಿ ಬರುತ್ತಿದ್ದರು. ನಿಯಂತ್ರಣ ತಪ್ಪಿದ ಕಾರು ಸಿ.ಸುರೇಶ್ ಅವರ ಕಾಫಿ ತೋಟದ ಮುಂಭಾಗದ ಗೇಟ್​ಗೆ ಗುದ್ದಿ ತೋಟದೊಳಗೆ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಚಾಲಕ ಸೀಟ್​ಬೆಲ್ಟ್ ಧರಿಸಿದ್ದರಿಂದ ಏರ್​ಬ್ಯಾಗ್ ತೆರೆದುಕೊಂಡು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾದರು. ಕಾರು ಸುಮಾರು ನೂರು ಅಡಿ ತೋಟಕ್ಕೆ ಬಿದ್ದಿದ್ದರಿಂದ ಸಂಪೂರ್ಣವಾಗಿ ಜಖಂಗೊಂಡಿದೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</