ಕ್ರೖೆಸ್ತ ಪಾದ್ರಿ ಸಜೀವ ದಹನಕ್ಕೆ ಯತ್ನ

ತರೀಕೆರೆ: ಪಟ್ಟಣದ ಕೋಡಿಕ್ಯಾಂಪ್ ಬಡಾವಣೆಯಲ್ಲಿ ಕಾರಿನಲ್ಲಿ ಮಲಗಿದ್ದ ಪಟ್ಟಣದ ಕ್ರೖೆಸ್ತ ಪಾದ್ರಿಯೊಬ್ಬರನ್ನು ಸಜೀವ ದಹಿಸುವ ದುಷ್ಕರ್ವಿುಗಳ ಯತ್ನ ವಿಫಲವಾಗಿದೆ.

ಕೋಡಿಕ್ಯಾಂಪನ್​ನ ಪಾದ್ರಿ ಎಂ.ಎ.ಪೌಲೋಸ್ ಅವರು ಚರ್ಚ್ ನಿರ್ವಣಕ್ಕೆ ಕಬ್ಬಿಣದ ಸರಳುಗಳನ್ನು ಖರೀದಿಸಿ ತಂದು ಮನೆ ಆವರಣದಲ್ಲಿ ಹಾಕಿದ್ದರು. ಇಲ್ಲಿ ಕಳ್ಳರ ಹಾವಳಿ ಹೆಚ್ಚಾಗಿರುವುದರಿಂದ ಅವುಗಳನ್ನು ಕಾಯಲು ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನಲ್ಲೇ ಮಲಗಿದ್ದರು.

ಪಾದ್ರಿ ಎಂ.ಎ.ಪೌಲೋಸ್ ಕಾರಿನಲ್ಲಿ ಮಲಗಿರುವುದನ್ನು ದೃಢಪಡಿಸಿಕೊಂಡ ದುಷ್ಕರ್ವಿುಗಳು ಬುಧವಾರ ತಡರಾತ್ರಿ 1 ಗಂಟೆಗೆ ಕಾರಿನ ಕೆಳಭಾಗದಲ್ಲಿ ಅನುಪಯುಕ್ತ ವಸ್ತುಗಳ ಸಹಾಯದಿಂದ ಬೆಂಕಿ ಹಚ್ಚಿ ಸಜೀವವಾಗಿ ದಹಿಸಲು ಯತ್ನಿಸಿದ್ದಾರೆ. ಶಾಖ ಬಲಗೈಗೆ ಸೋಕಿದ ಕೂಡಲೇ ಎಚ್ಚರಗೊಂಡ ಎಂ.ಎ.ಪೌಲೋಸ್ ಕಾರಿನಿಂದ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ತಕ್ಷಣವೆ ಮನೆಯಲ್ಲಿದ್ದವರೆಲ್ಲ ಸೇರಿ ಕಾರಿಗೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಗಾಯಾಳು ಪೌಲೋಸ್ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.

ದುಷ್ಕರ್ವಿುಗಳು ಪಾದ್ರಿ ಅವರ ಮೇಲಿನ ವೈಯಕ್ತಿಕ ದ್ವೇಷದಿಂದ ಹತ್ಯೆ ಮಾಡಲು ಬಂದವರೇ ಅಥವಾ ಕಬ್ಬಿಣ ಕಳವು ಮಾಡಲು ಬಂದವರೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *