ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ತಪಾಸಣೆ

ಬಣಕಲ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ಎಲ್ಲ್ಲ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ಸರ್ಕಾರಿ ಅಧಿಕಾರಿ, ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ತಪಾಸಣಾ ತಂಡ ರಚಿಸಲಾಗಿದ್ದು 8 ಗಂಟೆಗಳ ಕಾಲ ಒಂದು ತಂಡ ಕಾರ್ಯ ನಿರ್ವಹಿಸುವಂತೆ 3 ತಂಡಗಳನ್ನು ರಚಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ದಕ್ಷಿಣ ಕನ್ನಡಕ್ಕೆ ಹೋಗಿ ಬರುವ ವಾಹನಗಳನ್ನು ತಪಾಸಣೆ ಮಾಡಿ ವಿಳಾಸ, ವಾಹನ ಸಂಖ್ಯೆಯನ್ನು ನಮೂದಿಸಲಾಗುತ್ತಿದೆ. ಸಿಆರ್​ಪಿಎಫ್ ತುಕ್ಕಡಿ ಸ್ಥಳದಲ್ಲಿದೆ.

ಚೆಕ್​ಪೋಸ್ಟ್ ಬಳಿ ತಪಾಸಣೆಯ ಟೆಂಟ್ ನಿರ್ವಿುಸಲಾಗಿದ್ದು ಚುನಾವಣೆ ಮುಗಿಯುವವರೆಗೂ ತಪಾಸಣೆ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಬಣಕಲ್ ಪಿಎಸ್​ಐ ಗೋಪಾಲ್ ಎಂ, ಫಲ್ಗುಣಿ ಗ್ರಾಪಂ ಪಿಡಿಒ ಕವೀಶ್, ಕಾರ್ಯದರ್ಶಿ ಯತೀಶ್, ಪೋಲಿಸ್ ಸಿಬ್ಬಂದಿ ಯೋಗೀಶ್, ಅರಣ್ಯ ರಕ್ಷಕ ಹೇಮಂತ್ ಇದ್ದರು