ಕೋಕೋ ಗೌಫ್ ಡಬ್ಲ್ಯುಟಿಎ ಫೈನಲ್ಸ್ ಚಾಂಪಿಯನ್: ಶರಪೋವಾ ಬಳಿಕ ಪ್ರಶಸ್ತಿ ಗೆದ್ದ ಅತಿಕಿರಿಯ ಆಟಗಾರ್ತಿ

blank

ರಿಯಾಧ್: ಅಮೆರಿಕದ ಕೋಕೋ ಗೌಫ್ ಡಬ್ಲುಟಿಎ ಫೈನಲ್ಸ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕೋಕೋ ಗೌಫ್ ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಚೀನಾದ ಕ್ವಿನೆನ್ ಝೆಂಗ್ ಅವರನ್ನು 3-6, 6-4,7-6 (2) ಸೆಟ್‌ಗಳಿಂದ ಮಣಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಜಯಿಸಿದ್ದಾರೆ.

20 ವರ್ಷದ ಗೌಫ್ ಮೂರು ಗಂಟೆಗಳ ಕಠಿಣ ಹೋರಾಟದಲ್ಲಿ ಪ್ರಶಸ್ತಿ ಒಲಿಸಿಕೊಳ್ಳುವ ಮೂಲಕ ರಷ್ಯಾದ ಮರಿಯಾ ಶರಪೋವಾ ಬಳಿಕ ಈ ಸಾಧನೆ ಮಾಡಿದ ಕಿರಿಯ ಆಟಗಾರ್ತಿ ಎನಿಸಿದರು. 2004ರಲ್ಲಿ ಮರಿಯಾ ಶರಪೋವಾ 17ನೇ ವಯಸ್ಸಿನಲ್ಲೇ ಈ ಪ್ರಶಸ್ತಿ ಗೆದ್ದು ಅತಿಕಿರಿಯ ಆಟಗಾರ್ತಿ ಎನಿಸಿದ್ದರು. ಮೊದಲ ಸೆಟ್‌ನಲ್ಲಿ 3-6 ರಿಂದ ಹಿನ್ನಡೆ ಅನುಭವಿಸಿದ ಗೌಫ್ ನಂತರದ ಎರಡು ಸೆಟ್‌ಗಳಲ್ಲಿ 6-4, 7-6 ರಿಂದ ವಶಪಡಿಸಿಕೊಂಡರು.

ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ 5-3 ಗೇಮ್‌ಗಳಿಂದ ಹಿನ್ನಡೆಯಲ್ಲಿದ್ದ ಗ್ೌ ಪುಟಿದೇಳುವ ಮೂಲಕ ಟೈ ಬ್ರೇಕರ್‌ಗೆ ವಿಸ್ತರಿಸಿದರು. ಜತೆಗೆ 2014ರ ಬಳಿಕ ಚಾಂಪಿಯನ್ ಆದ ಮೊದಲ ಅಮೆರಿಕದ ತಾರೆ ಎನಿಸಿದರು. ಸೆರೇನಾ ವಿಲಿಯಮ್ಸನ್ ಹಿಂದಿನ ಸಾಧಕಿ. 19ನೇ ವಯಸ್ಸಿನಲ್ಲಿ ಯುಎಸ್ ಓಪನ್ ಜಯಿಸಿದ್ದ ಗೌಫ್, ೈನಲ್‌ಗೇರುವ ಮುನ್ನ ವಿಶ್ವ ನಂ.1, 2 ಆಟಗಾರ್ತಿಯರಾದ ಇಗಾ ಸ್ವಿಯಾಟೆಕ್, ಅರಿನಾ ಸಬಲೆಂಕಾ ಅವರನ್ನು ಮಣಿಸಿದ್ದರು. ಇದರೊಂದಿಗೆ ವರ್ಷಾಂತ್ಯದ ಡಬ್ಯುೃಟಿಎ ರ‌್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಡಬ್ಲ್ಯುಟಿಎ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಕೆನಡಾದ ಗೇಬ್ರಿಯೆಲಾ ಡಬ್ರೊವ್ಸ್ಕಿ ಮತ್ತು ನ್ಯೂಜಿಲೆಂಡ್‌ನ ಎರಿನ್ ರೌಟ್‌ಲಿಫ್ ಅವರು ಜೆಕ್ ಗಣರಾಜ್ಯದ ಕಟೆರಿನಾ ಸಿನಿಯಾಕೋವಾ ಮತ್ತು ಅಮೆರಿಕದ ಟೇಲರ್ ಟೌನ್‌ಸೆಂಡ್ ಅವರನ್ನು 7-5, 6-3 ಸೆಟ್‌ಗಳಿಂದ ಸೋಲಿಸಿದರು. ಇದರೊಂದಿಗೆ ಡಬಲ್ಸ್ ಪ್ರಶಸ್ತಿ ಗೆದ್ದ ಮೊದಲ ಕೆನಡಾ ಮತ್ತು ನ್ಯೂಜಿಲೆಂಡ್‌ನ ಆಟಗಾರ್ತಿಯರಾಗಿದ್ದಾರೆ.

Share This Article

ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information

ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…

ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್​ ಟ್ರಿಕ್​​ | Health Tips

ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…

ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips

ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…