ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach ) ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು ಓಡಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಮನೆ ಸ್ವಚ್ಛಗೊಳಿಸುವಾಗ ಜಿರಳೆಗಳೂ ಹೊರಬರುತ್ತವೆ. ಬಹುತೇಕ ಪ್ರತಿಯೊಂದು ಮನೆಯಲ್ಲೂ ಜಿರಳೆಗಳ ಸಮಸ್ಯೆ ಇರುತ್ತವೆ. ಅವುಗಳಿಂದ ಪಾರಾಗಲು ಇಂದು ನಾವು ನಿಮಗೆ ಕೆಲವು ಸಲಹೆಗಳನ್ನು ಹೇಳಲಿದ್ದೇವೆ.
ಮನೆ ಸ್ವಚ್ಛಗೊಳಿಸುವಾಗ ನೀವು ಒಂದು ಬಕೆಟ್ ನೀರಿನಲ್ಲಿ ಒಂದು ಚಮಚ ವಿನೆಗರ್ ಮತ್ತು ಎರಡು ಚಮಚ ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ. ಇದರ ನಂತರ ಒಂದು ಟೀಚಮಚ ಪಾತ್ರೆ ತೊಳೆಯುವ ದ್ರವವನ್ನು ಸೇರಿಸಿ. ಈಗ ನೀವು ಮನೆಯನ್ನು ಸ್ವಚ್ಛಗೊಳಿಸಬಹುದು. ಇದು ಜಿರಳೆಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ ನಿಮ್ಮ ಶುಚಿಗೊಳಿಸುವಿಕೆಯನ್ನು ಸುಲಭಗೊಳಿಸುತ್ತದೆ.
ರಾತ್ರಿ ಮಲಗುವ ಮುನ್ನ ಬೇವಿನ ಪುಡಿ ಅಥವಾ ಬೇವಿನ ಎಣ್ಣೆಯನ್ನು ಜಿರಳೆಗಳು ಓಡಾಡುವ ಜಾಗದಲ್ಲಿ ಹಾಕಿ. ಇದರ ವಾಸನೆಯನ್ನು ತಡೆಯಲಾರದೇ ಜಿರಳೆಗಳು ಮನೆಯಿಂದ ಹೊರಗೆ ಹೋಗುತ್ತವೆ.
ಜಿರಳೆಗಳು ಓಡಾಡುವ ಸ್ಥಳದಲ್ಲಿ ಲವಂಗ ಇಟ್ಟರೆ ಸಾಕು. ಈ ಲವಂಗದ ವಾಸನೆಗೆ ಜಿರಳೆ ಓಡಿ ಹೋಗುತ್ತದೆ.
ಜಿರಳೆಗಳು ಅಡ್ಡಾಡಿದ ಜಾಗದಲ್ಲಿದ್ದ ಆಹಾರ ಸೇವಿಸಬಾರದು. ಏಕೆಂದರೆ ಇದರಿಂದ ನಾನಾ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಸಾಂಬಾರ ಪದಾರ್ಥವು ಜಿರಳೆಯನ್ನು ದೂರವಿಡುವುದು. ಇದರ ಘಾಟು ಪರಿಮಳವು ಕೀಟಗಳು ಮತ್ತು ಜಿರಳೆಯನ್ನು ದೂರವಿಡುವುದು. ಹೀಗಾಗಿ ನೀವು ದಾಲ್ಚಿನ್ನಿಯ ಹುಡಿ ಮಾಡಿಕೊಂಡು ಅದನ್ನು ಜಿರಳೆ ಮತ್ತು ಕೀಟಗಳು ಬರುವ ಜಾಗಕ್ಕೆ ಸಿಂಪಡಣೆ ಮಾಡಿ.