More

  ರೆಡಿ ಟು ಡ್ರಿಂಕ್ ಚಹಾ ಉದ್ಯಮ ಮೂಲಕ ಭಾರತೀಯ ಮಾರುಕಟ್ಟೆಗೆ ಬಂದ ಕೋಕಾ ಕೋಲಾ…

  ನವದೆಹಲಿ: ವಿಶ್ವದ ಪ್ರಮುಖ ತಂಪು ಪಾನೀಯ ಕಂಪನಿಗಳಲ್ಲಿ ಒಂದಾಗಿರುವ ಕೋಕಾ-ಕೋಲಾ ಭಾರತದ ಚಹಾ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಕೋಕಾ-ಕೋಲಾ ಭಾರತದಲ್ಲಿ ರೆಡಿ ಟು ಡ್ರಿಂಕ್ ಟಿ ಎಂಬ ಹೆಸರಿನಲ್ಲಿ ಚಹಾ ಪಾನೀಯಗಳನ್ನು ಮಾರಾಟ ಮಾಡುವುದಾಗಿ  ನವೆಂಬರ್ 23ರಂದು ಘೋಷಿಸಿದೆ.

  ಐಸ್ಡ್ ಗ್ರೀನ್ ಟೀ ಉತ್ಪನ್ನವಾದ ಹಾನೆಸ್ಟ್ ಟೀ ಬ್ರ್ಯಾಂಡ್ ಅನ್ನು ಕೋಕಾ-ಕೋಲಾ ಅಂಗಸಂಸ್ಥೆಯು ಮಾರುಕಟ್ಟೆಗೆ ಪರಿಚಯಿಸಿದೆ. ಕೋಕಾ ಕೋಲಾದ ಅಂಗಸಂಸ್ಥೆಯಾದ ಹಾನೆಸ್ಟ್ ಈ ಆರ್ಗ್ಯಾನಿಕ್ ಗ್ರೀನ್ ಟೀ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೋಲ್ಕತಾ ಮೂಲದ ಲಕ್ಷ್ಮೀ ಟೀ ಕೋ ಪ್ರೈ ಲಿ ಸಂಸ್ಥೆಗೆ ಸೇರಿದ ಮಕೈಬರಿ ಟೀ ಎಸ್ಟೇಟ್​ನಲ್ಲಿ ಬೆಳೆಯಲಾಗುವ ಚಹಾವನ್ನು ಹಾನೆಸ್ಟ್ ಟೀ ಉತ್ಪನ್ನಕ್ಕೆ ಬಳಸಲಾಗುತ್ತಿದೆ. ರೆಡಿ ಟು ಡ್ರಿಂಕ್ ಟಿಗಳನ್ನು ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಲಕ್ಷ್ಮೀ ಟೀ ಕಂಪನಿ ಮತ್ತು ಕೋಕ ಕೋಲಾ ನಡುವೆ ನಿನ್ನೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ  ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.

  ಕೋಲ್ಕತ್ತಾ ನಗರದಲ್ಲಿ ನಡೆದ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯ (ಬಿಜಿಬಿಎಸ್) ಏಳನೇ ಆವೃತ್ತಿಯಲ್ಲಿ ಎರಡು ಕಂಪನಿಗಳ ನಡುವೆ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕೋಕಾ-ಕೋಲಾ ಇಂಡಿಯಾದ ನೈಋತ್ಯ ಏಷ್ಯಾದ ಹಿರಿಯ ಅಧಿಕಾರಿಯೊಬ್ಬರು ಈ ಬಿಡುಗಡೆಯ ಹಿಂದಿನ ಆಲೋಚನೆಯು ಚಹಾ ಪಾನೀಯವನ್ನು ಗ್ರಾಹಕರಿಗೆ ನೀಡುವುದಾಗಿದೆ ಎಂದು ಹೇಳಿದರು. ನವೆಂಬರ್ 22ರಂದು ಮುಕ್ತಾಯಗೊಂಡ ಬೆಂಗಾಲ್ ಗ್ಲೋಬಲ್ ಬಿಸಿನೆಸ್ ಸಮಿಟ್ 2023ಯಲ್ಲಿ ಈ ಉತ್ಪನ್ನವನ್ನು ಬಿಡುಗಡೆ ಮಾಡಲಾಯಿತು.

  ಕೋಕಾ-ಕೋಲಾ ಚಹಾದ ಪ್ಲೇವರ್​ಗಳು: ಐಸ್ಡ್ ಗ್ರೀನ್ ಟೀ, ನಿಂಬೆ-ತುಳಸಿ ಮತ್ತು ಮಾವಿನ ರೂಪಾಂತರಗಳಲ್ಲಿ ಬರುತ್ತದೆ. ಬಾಟಲ್​ನಲ್ಲಿ ಬರುವ ತಂಪಗಿನ ಗ್ರೀನ್ ಚಹಾ ಉತ್ಪನ್ನವು ಲೆಮನ್ ತುಳಸಿ ಮತ್ತು ಮ್ಯಾಂಗೋ ಈ ಎರಡು ಫ್ಲೇವರ್​ಗಳಲ್ಲಿ ಲಭ್ಯ ಇರುತ್ತದೆ. 

  ಕೋಕಾ ಕೋಲಾ ಇಂಡಿಯಾ ಮತ್ತು ನೈರುತ್ಯ ಏಷ್ಯಾದ ಹೈಡ್ರೇಶನ್, ಕಾಫಿ ಮತ್ತು ಟೀ ವಿಭಾಗದ ಮಾರ್ಕೆಟಿಂಗ್ ಡೈರಕೆಕ್ಟರ್ ಕಾರ್ತಿಕ್ ಸುಬ್ರಮಣಿಯನ್ ಮಾತನಾಡಿ, “ನಮ್ಮ ಹೊಸ ರೆಡಿ-ಟು ಡ್ರಿಂಕ್ ಐಸ್ಡ್ ಗ್ರೀನ್ ಟೀ ಅನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ. ರೆಡಿ ಟು ಡ್ರಿಂಕ್ ಐಸ್ಡ್ ಗ್ರೀನ್ ಟೀ ಬಿಡುಗಡೆ ಮಾಡಲು ಖುಷಿಯಾಗಿದೆ. ಗ್ರೀನ್ ಟೀ ಆಧಾರಿತ ಪಾನೀಯದ ಅದ್ಭುತ ರುಚಿಯ ಅನುಭವವನ್ನು ಗ್ರಾಹಕರಿಗೆ ಒದಗಿಸುತ್ತಿದ್ದೇವೆ ಎಂದು ಹೇಳುತ್ತಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts