ಬೆಂಬಲ ಹಿಂಪಡೆದ ಪಕ್ಷೇತರ ಶಾಸಕ ನಾಗೇಶ್​ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ

ಕೋಲಾರ: ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದ ಶಾಸಕ ಎಚ್​.ನಾಗೇಶ್​ ಅವರನ್ನು ಮುಳಬಾಗಿಲು ಕ್ಷೇತ್ರದ ಜನತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಓಟು ಹಾಕಿದ್ದೇ ವೇಸ್ಟ್​ ಆಯಿತು, ಮತ್ತೊಮ್ಮೆ ಚುನಾವಣೆಯಲ್ಲಿ ನಿಂತು ಠೇವಣಿ ಉಳಿಸಿಕೊಳ್ಳಿ ನೋಡೋಣ, ರಾಜೀನಾಮೆ ನೀಡಿ, ಜನರ ಮರ್ಯಾದೆ ಹರಾಜು ಹಾಕಿದ್ದೀರಿ ಎಂಬಂಥ ಕಾಮೆಂಟ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೇಸ್​ಬುಕ್​ನಲ್ಲಿ ಎಚ್​.ನಾಗೇಶ್​ ವಿರುದ್ಧ ಕೀಳುಮಟ್ಟದ ಶಬ್ದ ಪ್ರಯೋಗ ಮಾಡಿ ಆಕ್ರೋಶ ಹೊರಹಾಕಲಾಗಿದ್ದು, ಕ್ಷೇತ್ರದ ಅಭಿವೃದ್ಧಿ ಬಿಟ್ಟು ಕುದುರೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದೀರಿ ಎಂದು ಆರೋಪಿಸಿದ್ದಾರೆ.

2 Replies to “ಬೆಂಬಲ ಹಿಂಪಡೆದ ಪಕ್ಷೇತರ ಶಾಸಕ ನಾಗೇಶ್​ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ”

  1. ಕೊತ್ತೂರು ಮಂಜುನಾಥ್ ಕೃಪಾಕಟಾಕ್ಷದಿಂದ ಮುಳಬಾಗಿಲು ತಾಲ್ಲೂಕು ಶಾಸಕರಾಗಿರುವ ನಾಗೇಶ್ ರವರೇ ನೀವು ಯಾರು ಎಂಬುದು ತಾಲ್ಲೂಕಿನ ಜನತೆಗೆ ಗೊತ್ತೇ ಇಲ್ಲ .ಈ ದಿನ ಕೇವಲ ಹಣಕ್ಕಾಗಿ ಊಸರವಳ್ಳಿ ತರ ತಾಲ್ಲೂಕಿನ ಜನತೆಗೆ ದ್ರೋಹ ಬಗೆಯುತ್ತೀದ್ದೀರ.ಆತ್ಮ ವಿಮಶೆ೯ ಮಾಡಿಕೊಳ್ಳಿ.

Comments are closed.