ಮೈತ್ರಿ ಸರ್ಕಾರವನ್ನು ಕೊಂದು ಸಮಾಧಿ ಮಾಡಿದ್ದು ಕುಮಾರಸ್ವಾಮಿ, ಸಿದ್ದರಾಮಯ್ಯ: ಎಚ್​. ವಿಶ್ವನಾಥ್​

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಮುಗಿದ ಅಧ್ಯಾಯ. ಅದರ ಸಹಭಾಗಿ ಪಕ್ಷಗಳ ಮುಖಂಡರೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಎಂದು ಎಚ್​.ವಿಶ್ವನಾಥ್​ ಹೇಳಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಮುಖ್ಯಕಾರಣ ಅಂದು ಮುಖ್ಯಮಂತ್ರಿಯಾಗಿದ್ದ ಎಚ್​.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ. ಅವರಿಬ್ಬರೂ ಸೇರಿ ಮೈತ್ರಿಯನ್ನು ಕೊಂದು ಸಮಾಧಿ ಮಾಡಿದರು. ಈಗ ನೀ ಕೊಂದೆ, ನೀ ಕೊಂದೆ ಅಂತ ಆರೋಪ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಮೈತ್ರಿ ಸರ್ಕಾರ ಪತನವಾಗಿದ್ದಕ್ಕೆ ಸಂಬಂಧಿಸಿದಂತೆ ದೇವೇಗೌಡರ ಬಗ್ಗೆ ನಾನೇನೂ ಮಾತಾಡೋದಿಲ್ಲ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಇದರಲ್ಲಿ ಅವರ ಹೆಸರು ತರುವುದು ಸರಿಯಲ್ಲ ಎಂದು ಹೇಳಿದರು.