ಸರ್ಕಾರ ಬೀಳಿಸಲು 300 ಕೋಟಿ ವ್ಯಯಿಸುತ್ತಿದ್ದಾರೆ ಬಿಎಸ್‌ವೈ: ರೇವಣ್ಣ ಆರೋಪ

ಹಾಸನ: ಸಮ್ಮಿಶ್ರ ಸರ್ಕಾರವನ್ನು ಸರ್ಕಾರ ಬೀಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು 300 ಕೋಟಿ ರೂ. ವ್ಯಯಿಸುತ್ತಿದ್ದಾರೆ ಎಂದು ಸಚಿವ ಎಚ್‌.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಯಡಿಯೂರಪ್ಪ ಅವರು ಕಳೆದ ಆರು ತಿಂಗಳಿನಿಂದ ಸರ್ಕಾರ ಅತಂತ್ರ ಮಾಡಲು ಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಅವರದು ವ್ಯರ್ಥ ಪ್ರಯತ್ನ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಯಡಿಯೂರಪ್ಪಗೆ ದೈವಬಲ ಇಲ್ಲ. ಸರ್ಕಾರವನ್ನು ಬೀಳಿಸಲು ಯಡಿಯೂರಪ್ಪ ಅವರು 300 ಕೋಟಿ ಹಣ ಸಂಗ್ರಹಿಸಿ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು,

ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ

ನಾಳೆ ಸಂಜೆ ಹಾಸನ ಹೊರವಲಯದ ಹಾಸನ – ಬೇಲೂರು ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಿಎಂ, ಜೆಡಿಎಸ್ ಶಾಸಕರು ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೂ ಭಾಗಿಯಾಗಲಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಹಾಸನ ಡೇರಿಗೆ 5.65 ಕೋಟಿ ಆದಾಯ

ಹಾಸನ ಡೇರಿಯಲ್ಲಿ ವಾರ್ಷಿಕ ಒಟ್ಟು 5 ಕೋಟಿ 65 ಲಕ್ಷ ಆದಾಯ ಬಂದಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)