ಡಾಂಬರ್ ತ್ಯಾಜ್ಯ ಸಮಸ್ಯೆಗಿಲ್ಲ ನಿಯಂತ್ರಣ

ವಿಜಯವಾಣಿ ಸುದ್ದಿಜಾಲ ಸುರತ್ಕಲ್

20 ದಿನಗಳಿಂದ ಸುರತ್ಕಲ್ ಗುಡ್ಡೆಕೊಪ್ಲ, ತಣ್ಣೀರುಬಾವಿ ಬೈಕಂಪಾಡಿ ಪಣಂಬೂರು ಸಮುದ್ರ ಕಿನಾರೆಗಳಲ್ಲಿ ಸಂಗ್ರಹವಾಗಿ ಸುದ್ದಿಯಾಗಿದ್ದ ಡಾಂಬರು ತ್ಯಾಜ್ಯ ಸಂಗ್ರಹ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.
ಶನಿವಾರ ಪಣಂಬೂರು ಬೀಚ್‌ನಲ್ಲಿ ಅಪಾರ ಪ್ರಮಾಣದ ಡಾಂಬರು ತೀರಕ್ಕೆ ಬಂದು ಅಪ್ಪಳಿಸಿತ್ತು. ಭಾನುವಾರ ಹೊಸಬೆಟ್ಟು ಗುಡ್ಡೆಕೊಪ್ಪದಿಂದ ತಣ್ಣೀರುಬಾವಿವರೆಗೂ ಡಾಂಬರು ಸಂಗ್ರಹವಾಗಿದೆ. ಇದರಿಂದ ಮೀನುಗಳು ಕರಾವಳಿಗೆ ಬರುವುದಿಲ್ಲ ಎಂಬುದು ಮೀನುಗಾರರ ದೂರು. ಸಮುದ್ರತೀರಕ್ಕೆ ತೆರಳಿದಲ್ಲಿ ಕಾಲಿಗೆ, ಪಾದರಕ್ಷೆಗೆ ಡಾಂಬರು ಅಂಟಿಕೊಳ್ಳುತ್ತದೆ ಎನ್ನುತ್ತಾರೆ ಸಮುದ್ರ ತೀರಕ್ಕೆ ತೆರಳಿದವರು. ಸಮಸ್ಯೆ ಬಗ್ಗೆ ವಿಜಯವಾಣಿಯಲ್ಲಿ ಹಲವು ಬಾರಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ತನಿಖೆಗೆ ಸಚಿವ ಖಾದರ್ ಆದೇಶ: ಪ್ರಸ್ತುತ ಭಾರಿ ಪ್ರಮಾಣದಲ್ಲಿ ಡಾಂಬರು ತ್ಯಾಜ್ಯ ಸಂಗ್ರಹದಿಂದ ಈ ಭಾಗದ ಸಮುದ್ರ ತೀರ ಪೂರ್ಣ ಪ್ರಮಾಣದಲ್ಲಿ ಮಲಿನವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸಲು ಆದೇಶಿಸುತ್ತೇನೆ ಎಂದು ಉಸ್ತುವಾರಿ ಸಚಿವ ಯು.ಟಿ.ಖಾದರ್ ಭಾನುವಾರ ವಿಜಯವಾಣಿಗೆ ತಿಳಿಸಿದ್ದಾರೆ.

ಈ ಬಗ್ಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಂದ ವಿವರ ಪಡೆಯುತ್ತೇನೆ. ಡಾಂಬರು ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸಬೇಕು. ಇದಕ್ಕೆ ಕಾರಣ ಏನೆಂದು ತಿಳಿದುಕೊಳ್ಳಬೇಕು.
– ಶರತ್ ಗುಡ್ಡೆಕೊಪ್ಪ, ಮೀನುಗಾರರ ಮುಖಂಡ

Leave a Reply

Your email address will not be published. Required fields are marked *