ನಮ್ಮ ರಾಜ್ಯದಲ್ಲಿ ಸಹಕಾರಿ ಆಂದೋಲನ ಸದೃಢವಾಗಿದೆ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಮತ

blank

ಬೆಂಗಳೂರು: ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿ ನೋಡಿದರೆ ನಮ್ಮ ರಾಜ್ಯದಲ್ಲಿ ಸಹಕಾರಿ ಆಂದೋಲನ ಸದೃಢವಾಗಿ ಬೆಳೆದಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಗುರುವಾರ ಸೆಂಟ್ರಲ್ ಕಾಲೇಜು ಆವರಣದಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ೭೧ ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರ ವಾರಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಸಹಕಾರಿ ಆಂದೋಲನ ಸರ್ಕಾರಗಳ ಆಂದೋಲನವಲ್ಲ ಬದಲಾಗಿ ಇದು ಸಹಕಾರಿಗಳ ಆಂದೋಲನವಾಗಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಸಹಕಾರಿ ಆಂದೋಲನದಲ್ಲಿ ಉತ್ತಮ ಕೆಲಸ ಮಾಡಲು ಹೋದಾಗ ಸಾಕಷ್ಟು ಅಡಚಣೆಗಳು ಬರುತ್ತವೆ. ನಾನು ಸಚಿವನಾದ ಮೇಲೆ ಸಹಕಾರ ಕ್ಷೇತ್ರದಲ್ಲಿ ಕೆಲವು ತಿದ್ದುಪಡಿಗಳನ್ನು ತಂದಿದ್ದೇನೆ. ಅದಕ್ಕೆ ರಾಜ್ಯಪಾಲರ ಅಂಕಿತ ಇನ್ನು ಬಿದ್ದಿಲ್ಲ. ಹಾಲು ಉತ್ಪಾದಕ ಸೊಸೈಟಿಗಳಲ್ಲಿ ಸ್‌ಟಾವೇರ್ ಅಳವಡಿಸಿದ ನಂತರ ಪ್ರತಿಯೊಬ್ಬ ರೈತರಿಗೆ ಒಂದು ಲೀಟರ್ ಕನಿಷ್ಠ ಒಂದೂವರೆ ರೂಪಾಯಿ ಹೆಚ್ಚಿಗೆ ಬರುತ್ತಿದೆ. ಈ ಹಿಂದೆ ಹಾಲಿನಲ್ಲಿ ಶೇ.೩.೫ ರಷ್ಟು ಕೊಬ್ಬಿನ ಅಂಶವಿದೆ ಎಂದು ರೈತರಿಗೆ ಕಡಿಮೆ ಹಣ ನೀಡಲಾಗುತ್ತಿತ್ತು. ಸ್‌ಟಾವೇರ್ ಅಳವಡಿಸಿ ಹಾಲು ಉತ್ಪಾದಕರಿಗೆ ನ್ಯಾಯವನ್ನು ಒದಗಿಸುವ ಕೆಲಸ ಮಾಡಲಾಗಿದೆ ಎಂದರು.

ಕೆಟ್ಟಕಾಲದಲ್ಲಿ ಮಂತ್ರಿಯಾಗಿದ್ದೇನೆ:
ನಾನು ಕೆಟ್ಟಕಾಲದಲ್ಲಿ ಮಂತ್ರಿಯಾಗಿದ್ದೇನೆ ಎಂದು ನನಗೆ ಅನಿಸುತ್ತದೆ. ಪ್ರತಿದಿನ ಸಹಕಾರ ಕ್ಷೇತ್ರದ ಸಂಘಗಳಲ್ಲಿ ಬಹಳಷ್ಟು ಹಣ ದುರುಪಯೋಗಗಳು ಆಗುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬರುತ್ತಿದ್ದು, ಇದರ ಬಗ್ಗೆ ನನಗೆ ವಿಷಾಧವಿದೆ. ಈ ಬಗ್ಗೆ ಏನು ಮಾಡಲಾಗದ ಅಸಹಾಯಕತೆಯಲ್ಲಿ ನಾವಿದ್ದೇವೆ ಎನ್ನುವಂತಾಗಿದೆ. ಈ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಆಡಳಿತ ಮಂಡಳಿಗಳು ಸಕ್ರಿಯವಾಗಿ ತಮ್ಮ ಜವಬ್ಧಾರಿಯನ್ನು ನಿರ್ವಹಿಸಿದ್ದೆ ಆಗಿದ್ದರೆ ಆ ರೀತಿಯ ಹಣದ ದುರುಪಯೋಗ ಆಗಲು ಸಾಧ್ಯವಾಗುತ್ತಿರಲಿಲ್ಲ. ಸಹಕಾರಿಗಳು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ಮಾಡಿ ಮಾದರಿಯಾಗಬೇಕು ಎಂದು ಕಿವಿ ಮಾತು ಹೇಳಿದರು.

ಎರಡು ಬಾರಿ ಮಾತ್ರ ಅವಕಾಶ:
ಅಮೆರಿಕಾದಲ್ಲಿ ಅಧ್ಯಕ್ಷರ ಹುದ್ದೆಗೆ ನಿಲ್ಲಲು ಕೇವಲ ಎರಡು ಬಾರಿ ಮಾತ್ರ ಅವಕಾಶವಿದೆ. ಅದೇ ರೀತಿ
ಸಹಕಾರ ಕ್ಷೇತ್ರದಲ್ಲಿಯೂ ಒಂದು ಹುದ್ದೆಗೆ ಎರಡೇ ಬಾರಿ ನಿಲ್ಲಲು ಅವಕಾಶ ಇರುವಂತೆ ಕಾನೂನು ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಎಲ್ಲ ಸಹಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದರೆ ಮುಂದಿನ ಅಧಿವೇಶನದಲ್ಲಿ ಇದನ್ನು ಮಂಡಿಸಿ ಜಾರಿಗೊಳಿಸಲಾಗುವುದು. ಇದರಿಂದ ಯುವಕರಿಗೆ ಅಥವಾ ಹೊಸಬರಿಗೆ ಹೆಚ್ಚು ಅವಕಾಶಗಳು ಸಿಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ, ಸಹಕಾರ ವಸತಿ ಮಹಾಮಂಡಳದ ಅಧ್ಯಕ್ಷ ಎಸ್.ಟಿ. ಸೋಮಶೇಖರ್, ಕೆ.ಎಂ.ಎ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಸಹಕಾರ ಸಂಘಗಳ ನಿಬಂಧಕರಾದ ಟಿ.ಎಚ್.ಎಂ.ಕುಮಾರ್ ಮತ್ತು ಪತ್ರಿಕೆ ಸಂಪಾದಕ ಎಂ.ಮಲ್ಲರಾಜ್ ಸೇರಿ ಮತ್ತಿತರರು ಇದ್ದರು.

 

Share This Article

ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information

ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…

ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್​ ಟ್ರಿಕ್​​ | Health Tips

ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…

ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips

ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…