ಬೆಳಗಾವಿ: ನಗರ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಸಮಿತಿಯ ಸದಸ್ಯರುಗಳ ಸಭೆ ಗುರುವಾರ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕ ಆಸಿಫ್ ಉರ್ಫ್ ರಾಜು ಸೇಠ್ ವಹಿಸಿದ್ದರು, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ರವರು ಸ್ವಾಗತಿಸಿದರು, ಪ್ರಸ್ತಾವಿಕವಾಗಿ ಸಮಿತಿಯ ಸದಸ್ಯರಾದ ಎಫ ಹೆಚ್ ಜಕ್ಕಪ್ಪನವರ ಮಾತನಾಡಿದರು.
ಸಮಿತಿಯ ಸದಸ್ಯಮೋಹನ್ ಲಿಂಬಿಕಾಯಿ ಮಾತನಾಡಿ, ಹಲವಾರು ಬ್ಲಾಕ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಿಂದ ಮಾಹಿತಿಯನ್ನು ಪಡೆದರಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಡಿಯಲ್ಲಿ ಕಡ್ಡಾಯವಾಗಿ ಕಾಂಗ್ರೆಸ್ ಕಚೇರಿಯನ್ನು ಹೊಂದಬೇಕೆಂದು ಪಕ್ಷ ಬಯಸಿದ್ದು ಅದರಂತೆ ಎ ಐ ಸಿ ಸಿ ಅಧ್ಯಕ್ಷರ ಆದೇಶದ ಮೇರೆಗೆ ಕೆಪಿಸಿಸಿ ಅಧ್ಯಕ್ಷರು ಕಾರ್ಯೋನ್ಮುಖರಾಗಿದ್ದು ತಾವುಗಳು ಸಹಕರಿಸಬೇಕೆಂದು ಹೇಳಿದರು,
ಇದೇ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಚೇರ್ಮನ್ ಹಾಗೂ ಮಾಜಿ ಸಚಿವ ವೀರ್ ಕುಮಾರ್ ಪಾಟೀಲ್ ರವರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳು ಈ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿ ತಾವುಗಳು ಖುದ್ದಾಗಿ ಎಲ್ಲಾ ಬ್ಲಾಕುಗಳಿಗೆ ತೆರಳಿ ಕಟ್ಟಡ ಖರೀದಿಗೆ ಬೇಕಾದ ಜಾಗವನ್ನು ಪರಿಶೀಲಿಸಿ ಎಲ್ಲ ದಾಖಲೆಗಳೊಂದಿಗೆ ಮುಂದಿನ ಸಭೆಯಲ್ಲಿ ಸಮಿತಿಗೆ ಒಪ್ಪಿಸಬೇಕೆಂದು ಕೇಳಿಕೊಂಡರು,
ಸಭೆಯಲ್ಲಿ ಎಫ್ ಎಚ್ ಜಕ್ಕಪ್ಪನವರ ಶ್ರೀ ವಸಂತ ಲದವ ಶ್ರೀ ರಾಜಶೇಖರ್ ಮೆಣಸಿನಕಾಯಿ ಹಾಗೂ ಶ್ರೀಮತಿ ಗೀತಾ ಥವಂಶಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು, ಸಭೆಯಲಿ ಬೆಳಗಾವಿ ನಗರ ಹಾಗೂ ಜಿಲ್ಲಾ ಗ್ರಾಮೀಣ ವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಗಳು ಆಗಮಿಸಿದ್ದರು,