ಖಾನಾಪುರ: ನನಗೆ ರಾಜಕೀಯ ಜನ್ಮ ನೀಡಿದ ಖಾನಾಪುರ ತಾಲೂಕಿನ ಜನತೆಗೆ ಸದಾ ಋಣಿ. ಒಮ್ಮೆ ಗೆದ್ದು ಮೂರು ಸಲ ಸೋತಿದ್ದರೂ ಇಲ್ಲಿಯ ಜನರು ತಮ್ಮ ಮೇಲೆ ಇಟ್ಟ ಪ್ರೀತಿ ಇಂದಿಗೂ ಕಡಿಮೆಯಾಗಿಲ್ಲ ಎಂದು ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಕರ ಹೇಳಿದರು.
ಪಟ್ಟನದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಖಾನಾಪುರದಿಂದ ರಾಜಕೀಯ ಜೀವನ ಪ್ರಾರಂಭಿಸಿ ನಾಲ್ಕು ಚುನಾವಣೆಗಳನ್ನು ಎದುರಿಸಿದ್ದು, ಕಳೆದ ಸಲ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕಾಂಗ್ರೆಸ್ ಶಾಸಕಿಯಾಗಿ ಸರ್ಕಾರದ ಗಮನಸೆಳೆದ ಫಲವಾಗಿ ತಾಲ್ಲೂಕಿಗೆ ಹೊಸ ಆಸ್ಪತ್ರೆ, ಬಸ್ ನಿಲ್ದಾಣ ಮತ್ತಿತರ ಕಾಮಗಾರಿಗಳು ಮಂಜೂರಾಗಿವೆ. ತಾಲ್ಲೂಕಿನಲ್ಲಿ ಸದ್ಯ ಬಿಜೆಪಿ ಶಾಸಕರಿದ್ದು, ಅವರು ಬಯಸಿದರೆ ಕ್ಷೇತ್ರದ ಅಭಿವೃದ್ಧಿಗಾಗಿ ಅವರಿಗೆ ಎಲ್ಲ ರೀತಿಯ ಸಹಾಯ ಸಹಕಾರ ಮಾಡಲು ಬದ್ಧ ಎಂದರು.
ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತದಾರರ ಆಶೀರ್ವಾದ ಮತ್ತು ಕಾಂಗ್ರೆಸ ಕಾರ್ಯಕರ್ತರ ಪರಿಶ್ರಮದಿಂದ ಅಲ್ಲಿಯ ಸಂಸದೆಯಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಕಾಂಗ್ರಸ್ ಕಾರ್ಯಕರ್ತರ ಪಕ್ಷ ಎಂದು ನನ್ನ ತಂದೆ ಸತೀಶ ಜಾರಕಿಹೊಳಿ ಅವರು ಯಾವಾಗಲೂ ಹೇಳುತ್ತಾರೆ. ಅವರಿಗೆ ಇಲ್ಲಿಯ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಉತ್ತಮ ಬಾಂಧವ್ಯವಿದೆ. ಇಲ್ಲಿಯ ಜನರು ನಮ್ಮ ತಂದೆಯ ಮೇಲೆ ಇಟ್ಟಿರುವ ಪ್ರೀತಿಗೆ ಹಾಗೂ ಸಹೋದರಿ ಡಾ.ಅಂಜಲಿ ನಿಂಬಾಳ್ಕರ ಅವರ ಆಗ್ರಹಕ್ಕೆ ಮಣಿದು ಸನ್ಮಾನ ಸ್ವೀಕರಿಸಲು ಇಲ್ಲಿಗೆ ಬಂದಿರುವೆ ಎಂದು ಹೇಳಿದರು.
ಹಳಿಯಾಳದ ಗೋಸಾವಿ ಮಠದ ಮಂಜುನಾಥ ಸರಸ್ವತಿ ಶ್ರೀಗಳು ಮತ್ತು ಅವರೊಳ್ಳಿ-ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವದೇವರು ಆಶೀರ್ವಚನ ನೀಡಿದರು. ಪಕ್ಷದ ಮುಖಂಡ ಮಹಾಂತೇಶ ರಾಹೂತ, ಮಹಾದೇವ ಕೋಳಿ, ಲಕ್ಷ್ಮಣ ಮಾದಾರ, ಸಿ.ಜಿ ವಾಲಿ ಮತ್ತಿತರರು ಮಾತನಾಡಿ ಉಭಯ ನಾಯಕಿಯರನ್ನು ಅಭಿನಂದಿಸಿದರು.
ಎನ್.ಐ ಕೊಡೊಳಿ, ಈಶ್ವರ ಘಾಡಿ, ರಾಜು ಖಾತೇದಾರ, ಸುರೇಶ ಜಾಧವ, ವಿವೇಕ ಕುರಗುಂದ, ವಾಸುದೇವ ಚೌಗುಲೆ, ಭರತೇಶ ತೋರೋಜಿ ಇತರರಿದ್ದರು.
ರಾಜಕೀಯ ಜನ್ಮ ನೀಡಿದ ಖಾನಾಪುರ ಜನತೆಗೆ ಋಣಿ; ಡಾ. ಅಂಜಲಿ ನಿಂಬಾಳ್ಕರ
Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…
ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…
ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…
ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach ) ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…
Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..
ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan) ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…