More

    ಜಿಲ್ಲಾಧಿಕಾರಿ ಭವನ ಎದುರು ಕೊಡವ ನ್ಯಾಷನಲ್ ಕೌನ್ಸಿಲ್ ಸತ್ಯಾಗ್ರಹ

    ಮಡಿಕೇರಿ: ಕೊಡವ ರೇಸ್‌ಗೆ ಸಂಬಂಧಿಸಿದ ೯ ಪ್ರಧಾನ ಹಕ್ಕೊತ್ತಾಯ ಪರಿಗಣನೆಗೆ ಒತ್ತಾಯಿಸಿ ಮಂಗಳವಾರ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ನಂದಿನೆರವಂಡ ನಾಚಪ್ಪ ಕೊಡವ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಭವನ ಎದುರು ಪ್ರತಿಭಟನೆ ನಡೆಯಿತು.

    ವಿಶ್ವ ಆದಿಮಸಂಜಾತ ಮೂಲ ವಂಶಸ್ಥ ಸಮುದಾಯದ ಹಕ್ಕುಗಳ ಅಂತರರಾಷ್ಟ್ರೀಯ ದಿನಾಚರಣೆ ಅಂಗವಾಗಿ ಸತ್ಯಾಗ್ರಹ ನಡೆಯಿತು. ರಾಜ್ಯಾಂಗದ ೩೨ನೇ ವಿಧಿ ಅನ್ವಯ ತಿದ್ದುಪಡಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಆಗ್ರಹಿಸಿದರು. ತಮ್ಮ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಗಣ್ಯರಿಗೆ ಕಳುಹಿಸಿಕೊಡಲಾಯಿತು.

    ಕೊಡವ ಸಾಂಪ್ರದಾಯಿಕ ಜನ್ಮಭೂಮಿ ಘೋಷಿಸಬೇಕೆಂಬ ಪ್ರಮುಖ ಬೇಡಿಕೆಯೊಂದಿಗೆ ೯ ಬೇಡಿಕೆ ಮುಂದಿಡಲಾಗಿದೆ. ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶರೀನ್, ಪಟ್ಟಮಾಡ ಕುಶ, ಮಂದಪಂಡ ಮನೋಜ್, ನಂದಿನೆರವಂಡ ವಿಜು, ಅರೆಯಡ ಗಿರೀಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts