ಸಿನಿಮಾ

ಹಿರಿಯರಿಗೆ ಪುಷ್ಪ ನಮನ ಸಲ್ಲಿಕೆ

ಮಡಿಕೇರಿ:

ದೇವಟ್‌ಪರಂಬ್ ಕೊಡವ ನರಮೇಧ ದುರಂತ ಸ್ಮಾರಕ ಸಮಾಧಿಯಲ್ಲಿ ಕೊಡವ ನ್ಯಾ?ನಲ್ ಕೌನ್ಸಿಲ್ ಸಂಘಟನೆ ಹಿರಿಯರಿಗೆ ಪು?್ಪ ನಮನ ಸಲ್ಲಿಸಿತು.

ಸಿಎನ್ ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ರಚಿಸಿ, ಕೊಡವ ಸ್ವಯಂ ಶಾಸನದ ಹಕ್ಕುಗಳನ್ನು ಮಾನ್ಯ ಮಾಡುವ ಮೂಲಕ “ಕೊಡವ ಕುಲ”ಅಥವಾ ಜನಾಂಗೀಯ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕದ ಹೊಸ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಸಂವಿಧಾನದ ಅಡಿಯಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವಯಂ ನಿರ್ಣಯ ಹಕ್ಕು ಪ್ರತಿಪಾದನೆ, ಕೊಡಗಿನ ಆದಿಮಸಂಜಾತ ಮೂಲನಿವಾಸಿ ಕೊಡವ ಜನಾಂಗವನ್ನು ನಮ್ಮ ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಸಾಂಪ್ರದಾಯಿಕ ಕಾಯ್ದೆಯಡಿ ಬರುವ ಜನಾಂಗೀಯ ಸಂಸ್ಕಾರ ಗನ್ ಹಕ್ಕುಗಳನ್ನು ಸಿಖ್ಖರ ಕಿರ್ಪಾನ್‌ಗೆ ಸಮಾನವಾಗಿ ನಮ್ಮ ಸಂವಿಧಾನದ ೨೫ ಮತ್ತು ೨೬ ನೇ ವಿಧಿಗಳ ಅಡಿಯಲ್ಲಿ ರಕ್ಷಿಸಬೇಕು. ೮ನೇ ಶೆಡ್ಯೂಲ್‌ನಲ್ಲಿ ಮಾತೃಭಾ?ೆ ಕೊಡವತಕ್ಕ್ ಸೇರಿಸಬೇಕು, ಸಂವಿಧಾನದ ೩೪೭, ೩೫೦, ೩೫೦ಎ ಮತ್ತು ೩೫೦ಎ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ ಪರಿಚಯಿಸಬೇಕು. ಕರ್ನಾಟಕದ ೩ನೇಯ ಅಧಿಕೃತ ರಾಜ್ಯ ಭಾ?ೆಯಾಗಿ ಕೊಡವ ತಕ್ಕ್ ಪರಿಗಣಿಸಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಿಎನ್‌ಸಿ ಮುಖಂಡ ನಾಚಪ್ಪ ಸರ್ಕಾರದ ಮುಂದೆ ಇಟ್ಟಿದ್ದಾರೆ.

ಸಿಎನ್‌ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಬೇಪಡಿಯಂಡ ಬಿದ್ದಪ, ಬೇಪಡಿಯಂಡ ದಿನು, ಆಳಮಂಡ ಜೈ, ಮಣವಟಿರ ಚಿಣ್ಣಪ್ಪ, ಪುದಿಯೋಕಡ ಕಾಶಿ, ಪಟ್ಟಮಾಡ ಅಶೋಕ್, ಪಟ್ಟಮಾಡ ತಿಮ್ಮಯ್ಯ, ಚೀಯೇಬೆರ ಸತೀಶ್ ಈ ಸಂದರ್ಭದಲ್ಲಿ ಇದ್ದರು.

Latest Posts

ಲೈಫ್‌ಸ್ಟೈಲ್