ಸಿಎಂ ಸಿದ್ದರಾಮಯ್ಯ ಜನ್ಮ ದಿನಾಚರಣೆ

ಚಿಕ್ಕಮಗಳೂರು: ರಾಜ್ಯದ ಮುಖ್ಯಮಂತ್ರಿ ಹಾಗೂ ಅಹಿಂದಾ ನಾಯಕ ಸಿದ್ದರಾಮಯ್ಯ ಅವರ ೭೭ನೇ ಜನ್ಮ ದಿನದ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿ ಸಮೀಪ ಗಣಪತಿ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಸಿದ್ದರಾಮಯ್ಯ ಅವರಿಗೆ ದೀರ್ಘಾಯುಷ್ಯ ಲಭಿಸಲಿ ಎಂದು ಪ್ರಾರ್ಥಿಸಿದರು.

ಈ ವೇಳೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ರೈತರು, ಅಲ್ಪಸಂಖ್ಯಾತರು ಹಾಗೂ ದೀನದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಿದ್ದರಾಮಯ್ಯ ಅವರು ವೈಯಕ್ತಿಕ ಬದುಕಿಗಿಂತ ರಾಜ್ಯದ ಜನತೆಯ ಹಿತವನ್ನು ಕಾಪಾಡುವಲ್ಲಿ ಹೋರಾಡಿ, ನುಡಿದಂತೆ ನಡೆದ ಅಪರೂಪದ ನಾಯಕರು ಎಂದು ಹೇಳಿದರು.
ದೇಶದ ಯಾವುದೇ ರಾಜ್ಯಗಳಲ್ಲಿ ಘೋಷಿಸದ ಪಂಚ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತರುವ ಮೂಲಕ ಬಡವರ ಏಳಿಗೆಗೆ ದುಡಿದಿದ್ದಾರೆ. ಸಿದ್ದರಾಮಯ್ಯ ಇಡೀ ದೇಶದಲ್ಲೇ ಮೆಚ್ಚಿನ ಮುಖ್ಯಮಂತ್ರಿ ಎಂಬ ಹೆಸರು ಪಡೆದುಕೊಂಡಿರುವ ರಾಜಕಾರಣಿ ಎಂದು ಬಣ್ಣಿಸಿದರು.
ರಾಜ್ಯದ ಬಡವರ ಸಂಕಷ್ಟವನ್ನು ಹಿಂದಿನಿAದಲೂ ಅರಿತಿದ್ದ ಸಿದ್ದರಾಮಯ್ಯ ಅವರು ರಾಜ್ಯಸರ್ಕಾರ ರಚನೆಗೊಂಡ ಕೇವಲ ತಿಂಗಳಲ್ಲಿ ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಉಚಿತ ಪ್ರಯಣ ಹಾಗೂ ಅನ್ನ ಭಾಗ್ಯವನ್ನು ಕರುಣಿಸಿ ಮನೆಮಗನಂತೆ ಸೇವೆ ಸಲ್ಲಿಸಿರುವ ನಾಯಕರನ್ನು ಎಂದಿಗೂ ಜನತೆ ಮರೆಯುವುದಿಲ್ಲ ಎಂದು ತಿಳಿಸಿದರು.
ಈ ನಡುವೆ ವಿರೋಧ ಪಕ್ಷದ ಮುಖಂಡರುಗಳು ದಿನದಿಂದ ದಿನಕ್ಕೆ ಸುಳ್ಳು ಆರೋಪವೆಸಗಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಅಧಿವೇಶನದಲ್ಲೂ ಸುಳ್ಳಿನ ಆರೋಪವಿಟ್ಟು ಸಭೆಯನ್ನು ನಡೆಸಲು ಬಿಡುತ್ತಿಲ್ಲ. ಆದರೆ ವಿರೋಧಿಗಳು ಸುಳ್ಳಿನ ಸರಮಾಲೆ ಹೊತ್ತಿರುವ ಕಾರಣ ಅವರ ಷಡ್ಯಂತ್ರದ ಆಸೆಗೆ ತಣ್ಣಿರು ಬೀಳಲಿದೆ ಎಂದು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಜಾತ್ಯಾತೀತ ನಿಲುವು, ಬಡವರ ಪರ ಕಾಳಜಿ ಹೊಂದಿರುವ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶತಾಯುಷಿಗಳಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ. ಮುಂದಿನ ದಿನದಲ್ಲೂ ಜನಪರ ಸೇವೆ ಒದಗಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಶುಭ ಕೋರಿದರು.
ಸಿದ್ದರಾಮಯ್ಯನವರ ಏಳಿಗೆ ಸಹಿಸಿಕೊಳ್ಳದೇ ಕೆಲವರು ಸುಖಸುಮ್ಮನೆ ಆರೋಪ, ಟೀಕೆ-ಟಿಪ್ಪಣಿಗಳು ಮಾಡುತ್ತಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ಕಿವಿಕೊಡದೇ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು, ಗ್ಯಾರಂಟಿಗಳನ್ನು ಸಮಾಜಕ್ಕೆ ಮುಟ್ಟಿಸುವ ರೀತಿಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ, ನಗರಸಭೆ ಸದಸ್ಯ ಲಕ್ಷö್ಮಣ್, ಮುಖಂಡರಾದ ಕೆ.ಎಸ್.ಶಾಂತೇಗೌಡ, ಪುಟ್ಟೇಗೌಡ, ಕೆ.ವಿ.ಮಂಜುನಾಥ್, ಮಲ್ಲೇಶ ಸ್ವಾಮಿ, ಆನ್ಸರ್‌ಆಲಿ, ಪ್ರಕಾಶ್ ರೈ, ವಾಸೀಮ್, ಮಧು, ಸಂತೋಷ್ ಲಕ್ಯಾ ಮತ್ತಿತರರಿದ್ದರು.

Share This Article

ಮನೆಯಲ್ಲಿ ಗುಲಾಬಿ ಗಿಡ ಬೆಳೆಸುತ್ತಿದ್ದೀರಾ? ಈ ವಾಸ್ತು ನಿಯಮಗಳು ಕಡ್ಡಾಯ!

ಬೆಂಗಳೂರು: ಸಾಮಾನ್ಯವಾಗಿ ನಮ್ಮ ಹಿತ್ತಲಿನಲ್ಲಿ ಹಲವು ಬಗೆಯ ಗಿಡಗಳನ್ನು ಬೆಳೆಸುತ್ತೇವೆ. ಗುಲಾಬಿ ಗಿಡಗಳನ್ನು ಇಷ್ಟಪಡದವರೇ ಇಲ್ಲ.…

ನೈಲ್ ಪಾಲಿಶ್ ಬಳಸಿದ್ರೆ ಬರುತ್ತೆ ಕ್ಯಾನ್ಸರ್! ಯುವತಿಯರೇ ಎಚ್ಚರ

 ಬೆಂಗಳೂರು:  ಮಹಿಳೆಯರು ತಮ್ಮ ಕೈ ಮತ್ತು ಪಾದದ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಲು ಇಷ್ಟಪಡುತ್ತಾರೆ.  ವಿಶೇಷ…

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…