Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ವೀರಶೈವ ಮಹಾಸಭಾ ಹುಟ್ಟೂರಲ್ಲೇ ಸಿಎಂ ಸವಾಲು!

Friday, 13.04.2018, 3:02 AM       No Comments

| ಶಿವಕುಮಾರ ಮೆಣಸಿನಕಾಯಿ ಬೆಂಗಳೂರು

ವೀರಶೈವ-ಲಿಂಗಾಯತ ಧರ್ಮ ವಿವಾದ ತಾರಕಕ್ಕೇರಿರುವ ಸಂದರ್ಭದಲ್ಲಿಯೇ ವೀರಶೈವ ಮಹಾಸಭಾ ಹುಟ್ಟೂರಿನಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ವಿಚಾರವಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಈಗಾಗಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದೆ. ಈ ಮಧ್ಯೆ ಮಹಾಸಭಾ ಉಗಮಗೊಂಡ ಬಾದಾಮಿಯಿಂದಲೇ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬ ವಿದ್ಯಮಾನ ಚರ್ಚೆಗೆ ಗ್ರಾಸವಾಗಿದೆ.

1904ರಲ್ಲಿ ಅಂದಿನ ವಿಜಯಪುರ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಶಿವಯೋಗ ಮಂದಿರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥೆಯನ್ನು ಹಾನಗಲ್ಲ ಗುರು ಕುಮಾರ ಸ್ವಾಮಿಗಳ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು. ಬಾದಾಮಿಯಿಂದ ಕೇವಲ 12 ಕಿಮೀ ದೂರದಲ್ಲಿರುವ ಶಿವಯೋಗ ಮಂದಿರ ಈವರೆಗೆ ಸರಿ ಸುಮಾರು 10 ಸಾವಿರ ಮಠಾಧೀಶರನ್ನು ತಯಾರು ಮಾಡಿದ ತರಬೇತಿ ಕೇಂದ್ರವಾಗಿದೆ. ಸದ್ಯ ರಾಜ್ಯದ ವೀರಶೈವ ಲಿಂಗಾಯತ ಮಠಗಳಲ್ಲಿರುವ ಬಹುತೇಕ ಪೀಠಾಧಿಪತಿಗಳು ಶಿವಯೋಗ ಮಂದಿರದಲ್ಲೇ ತರಬೇತಿ ಪಡೆದವರು. ಪಂಚಪೀಠಾಧಿಪತಿಗಳನ್ನು ಮೊದಲು ಮಾಡಿಕೊಂಡು ವಿರಕ್ತಮಠದ ಜಗದ್ಗುರುಗಳ ಪಟ್ಟದಲ್ಲಿ ಕುಳಿತಿರುವವರು ಶಿವಯೋಗ ಮಂದಿರದಿಂದ ಬಂದವರಾಗಿದ್ದಾರೆ. ಹಾಗೆಯೇ ಈಚೆಗೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಯಲ್ಲಿದ್ದ ಬಹುತೇಕ ಸ್ವಾಮೀಜಿಗಳು ಕೂಡ ಶಿವಯೋಗ ಮಂದಿರದ ವಿದ್ಯಾರ್ಥಿಗಳಾಗಿದ್ದಾರೆ.

ನಿರ್ಣಾಯಕ ಕೇಂದ್ರ

ಇನ್ನು ವೀರಶೈವ ಮಹಾಸಭಾ ಕೂಡ ಸ್ಥಾಪನೆಗೊಂಡದ್ದು ಶಿವಯೋಗ ಮಂದಿರದಲ್ಲಿ. ಈಗಲೂ ಸಹಿತ ಮಹಾಸಭಾ ತನ್ನ ಸಂಕಷ್ಟದ ಸಂದರ್ಭದಲ್ಲಿ ಪ್ರಮುಖ ಸಭೆ-ಚರ್ಚೆಗಳನ್ನು ನಡೆಸಬೇಕಾದರೆ ನೇರವಾಗಿ ಶಿವಯೋಗ ಮಂದಿರವನ್ನೇ ಆಶ್ರಯಿಸಿದೆ.

ವೀರಶೈವ-ಲಿಂಗಾಯತರೇ ಪ್ರಮುಖ

ಶಿವಯೋಗ ಮಂದಿರ ಇರುವ ಬಾದಾಮಿ ಕ್ಷೇತ್ರದಲ್ಲಿ 68 ಸಾವಿರ ವೀರಶೈವ ಲಿಂಗಾಯತರಿದ್ದು, ಬಹುಸಂಖ್ಯಾತ ಮತದಾರರೇ ಆಗಿದ್ದಾರೆ. 48 ಸಾವಿರ ಕುರುಬರು, 35 ಸಾವಿರ ದಲಿತರು, 21 ಸಾವಿರ ನಾಯಕ ಜನಾಂಗದವರು ಹಾಗೂ 12 ಸಾವಿರ ಮುಸ್ಲಿಮರು ಇದ್ದಾರೆ. ಇಂತಹ ಜಾತಿ ಲೆಕ್ಕಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವಿದ್ಯಮಾನ ಚರ್ಚೆ ಯಾಗುತ್ತಿದೆ.

ಶೀಘ್ರದಲ್ಲೇ ಬೃಹತ್ ಸಭೆ

ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಹೆಚ್ಚು ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕದಲ್ಲಿ ಧರ್ಮ ವಿಭಜನೆ ವಿಚಾರ ಅತ್ಯಂತ ಪ್ರಖರವಾಗಿ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಶಿವಯೋಗ ಮಂದಿರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿ, ಧರ್ಮ ವಿಭಜನೆಗೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. ‘ವಿಜಯವಾಣಿ’ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮಹಾಸಭಾ ಶೀಘ್ರದಲ್ಲೇ ಶಿವಯೋಗ ಮಂದಿರದಲ್ಲಿ ಬೃಹತ್ ಸಭೆ ನಡೆಸಲಿದೆ.

Leave a Reply

Your email address will not be published. Required fields are marked *

Back To Top