ಜನಾನೇ ಇಲ್ವಲ್ರಿ ಏನ್​ ಮಾತಾಡೋದು: ಸಚಿವರ ಮೇಲೆ ಸಿಎಂ ಗರಂ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಅರಣ್ಯ ಸಚಿವ ರಮಾನಾಥ್ ರೈ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು.

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಚಿವ ರಮಾನಾಥ್​ ರೈ ಅವರನ್ನು ತರಾಟೆಗೆ ತೆಗೆದುಕೊಂಡರು. ಇದೇನ್ರಿ ಕಾರ್ಯಕ್ರಮದಲ್ಲಿ ಜನರೇ ಇಲ್ವಲ್ಲಾ ಜನರನ್ನ ಕರೆಸುವುದರ ಬದಲು ಮಕ್ಕಳನ್ನ ಕರೆಸಿದ್ದೀರಲ್ಲ ಅಂತಾ ಸಿಎಂ ಕೋಪಗೊಂಡರು.

ಜನರೇ ಇಲ್ವಲ್ಲಾ ಏನು ಮಾತಾಡೋದು. ಎಂದು ಕಾರ್ಯಕ್ರಮದ ಆಯೋಜಕರ ವಿರುದ್ಧವೂ ಅಸಮಧಾನಗೊಂಡ ಸಿಎಂ ಸಿದ್ದು, ಇದೇನಾ ಕಾರ್ಯಕ್ರಮ ಆಯೋಜನೆ ಮಾಡುವ ರೀತಿ ಅಂತ ಕಿಡಿಕಾರಿದರು. ಸಿಎಂ ಸಿಟ್ಟಿಗೆ ನಗುತ್ತಲೇ ನಿಂತ ಸಚಿವ ರಾಮಾನಾಥ್ ರೈ ಏನೂ ಮಾತನಾಡದೇ ಸೈಲೆಂಟಾಗೆ ನಿಂತಿದ್ರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *