ಭ್ರಷ್ಟ ಅಧಿಕಾರಿಗಳನ್ನು ಬಳಸಿಕೊಂಡು, ಐಟಿ ದಾಳಿ ಮೂಲಕ ಮೋದಿ ಸರ್ಜಿಕಲ್​ ದಾಳಿ

>

ಬೆಂಗಳೂರು: ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುವ 24 ಗಂಟೆಗಳ ಮೊದಲೇ ದಾಳಿಗಳಾಗುವ ಸುಳಿವು ನೀಡಿದ್ದ ಸಿಎಂ ಎಚ್​.ಡಿ. ಕುಮಾರಸ್ವಾಮಿ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ಮಾಡಿದ್ದಾರೆ.

ಐಟಿ ಇಲಾಖೆಯನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಮುಕ್ತವಾಗಿ ಸರ್ಜಿಕಲ್​ ಸ್ಟ್ರೈಕ್​ ಮಾಡಿದ್ದಾರೆ. ಸಂವಿಧಾನಿಕ ಸ್ಥಾನದ ಆಮಿಷ ಒಡ್ಡಿ, ಭ್ರಷ್ಟ ಅಧಿಕಾರಿಯನ್ನು ಬಳಸಿಕೊಂಡು ಪ್ರಧಾನಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಎದುರಾಳಿಗಳನ್ನು ಬೆದರಿಸಲು ಸರ್ಕಾರಿ ಯಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

One Reply to “ಭ್ರಷ್ಟ ಅಧಿಕಾರಿಗಳನ್ನು ಬಳಸಿಕೊಂಡು, ಐಟಿ ದಾಳಿ ಮೂಲಕ ಮೋದಿ ಸರ್ಜಿಕಲ್​ ದಾಳಿ”

  1. ಯಾರ್ಯಾರು ಕುಮಾರಸ್ವಾಮಿ ಆಪೋಸ್ ಮಾಡ್ತಾರೆ ಅವರೆಲ್ಲ ಭ್ರಷ್ಟರು, ಇವರಿಗೆ ಸಪೋರ್ಟ್ ಮಾಡಿ CM ಮಾಡೋರು ಪುಣ್ಯಾತ್ಮರು !!!!
    ಕಣ್ಣೀರ್ ಸ್ವಾಮಿ ಕಥೆ ಮುಗಿಯುವ ಕಾಲ ಹತ್ತಿರ ಬಂದಿದೆ

Comments are closed.