ಸಾಲ ಮನ್ನಾ ಶ್ವೇತಪತ್ರ ಹೊರಡಿಸಲಿ

ಯಾದಗಿರಿ: ಎಚ್.ಡಿ.ಕುಮಾರಸ್ವಾಮಿ ಸಿಎಂ ಆದ ತಕ್ಷಣ ಘೋಷಿಸಿದ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ಸಾಲ ಮನ್ನಾದಿಂದ ಇದುವರೆಗೆ ಯಾವೊಬ್ಬ ರೈತರಿಗೆ ಅನುಕೂಲವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ದೂರಿದರು.

ಶಹಾಪುರ ತಾಲೂಕಿನ ಕೆಲ ಬ್ಯಾಂಕುಗಳಿಂದ ರೈತರ ಸಾಲ ಮನ್ನಾ ಹಣ ಸರ್ಕಾರಕ್ಕೆ ವಾಪಸ್ ಹೋಗಿರುವ ಬಗ್ಗೆ ತನಿಖೆ ಮಾಡುವುದರ ಜತೆಗೆ ಸಾಲ ಮನ್ನಾ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಶಹಾಪುರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆಯೋ ಇಲ್ಲವೋ ಎಂಬ ಬಗ್ಗೆ ಜನತೆ ಭ್ರಮನಿರಸನಗೊಂಡಿದ್ದಾರೆ. ಇನ್ನು ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಜನತೆ ದಂಗೆ ಏಳದಂತೆ ತಡೆಯಲು ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಎಂಬ ದೊಂಬರಾಟಕ್ಕೆ ಮುಂದಾಗಿದ್ದಾರೆ. ಇಂಥ 100 ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಜನತೆ ಸಾಕಷ್ಟು ಬುದ್ಧಿವಂತರಿದ್ದು, ಈ ಸರ್ಕಾರದಲ್ಲಿ ನಡೆಯುತ್ತಿರುವ ನಾಟಕವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಸರ್ಕಾರ ಯಾವುದೇ ಕ್ಷಣದಲ್ಲಿ ಪತನಗೊಳ್ಳಲಿದ್ದು, 105 ಸ್ಥಾನ ಪಡೆದಿರುವ ಬಿಜೆಪಿ ಸಕರ್ಾರ ರಚನೆ ಡುವ ದಿನ ದೂರವಿಲ್ಲ ಎಂದ ಶೆಟ್ಟರ್, ಜಿಂದಾಲ್ಗೆ ಸರ್ಕಾರ ಈಗಾಗಲೇ 11400 ಎಕರೆ ಭೂಮಿ ನೀಡಿದೆ. ಇದೀಗ 3600 ಎಕರೆ ಲೀಜ್ ಕಂ ಸೇಲ್ ಆಧಾರದ ಮೇಲೆ ನೀಡಿದ್ದು ನಿಜ. ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂಬ ಷರತ್ತಿನ ಮೇಲೆ ಭೂಮಿ ನೀಡಿದ್ದರೂ ಜಿಂದಾಲ್ ಷರತ್ತು ಪಾಲಿಸಿಲ್ಲ. ಅಲ್ಲದೆ ಕೊಟ್ಟ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಷರತ್ತಿಗೂ ಬೆಲೆ ನೀಡಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಡಾ.ಮಲ್ಲಣ್ಣಗೌಡ ಉಕ್ಕಿನಾಳ, ಡಾ.ಚಂದ್ರಶೇಖರ ಸುಬೇದಾರ್, ಅಡಿವೆಪ್ಪ ಜಾಕಾ ಇತರರಿದ್ದರು.

Leave a Reply

Your email address will not be published. Required fields are marked *