Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ವಿಜಯವಾಣಿ, ದಿಗ್ವಿಜಯ ಅಪೇಕ್ಷೆಗೆ ಸ್ಪಂದನೆ

Friday, 06.07.2018, 3:06 AM       No Comments

ಬೆಂಗಳೂರು: ಬಜೆಟ್​ನಲ್ಲಿ ಜನಾಭಿಪ್ರಾಯಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದ ವಿಜಯವಾಣಿ, ದಿಗ್ವಿಜಯ ನ್ಯೂಸ್ 24ಗಿ7 ಕಳಕಳಿಗೆ ಕುಮಾರಸ್ವಾಮಿ ಬಜೆಟ್​ನಲ್ಲಿ ಸ್ಪಂದನೆ ದೊರೆತಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಸರ್ಕಾರಿ ಶಾಲೆಗಳಲ್ಲಿ ಬಯೋಮೆಟ್ರಿಕ್ ಸೌಲಭ್ಯ ಅಳವಡಿಕೆ, ಇಸ್ರೇಲ್ ಮಾದರಿ ಕೃಷಿಗೆ ಆದ್ಯತೆ, ವೃದ್ಧಾಪ್ಯ ವೇತನ ಹೆಚ್ಚಳದಂತಹ ಓದುಗರ ಬೇಡಿಕೆಗೆ ಸಿಎಂ ಮನ್ನಣೆ ನೀಡಿದ್ದಾರೆ. ಜನರ ದೃಷ್ಟಿಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಹೇಗಿರಬೇಕು ಎಂಬ ಬಗ್ಗೆ ‘ಬಜೆಟ್ ನಿರೀಕ್ಷೆ, ಜನರ ಅಪೇಕ್ಷೆ’ ಶೀರ್ಷಿಕೆಯಡಿ ವಿಜಯವಾಣಿ ಹಾಗೂ ದಿಗ್ವಿಜಯ 24ಗಿ7 ನ್ಯೂಸ್ ಜನರಿಂದಲೇ ಅಭಿಪ್ರಾಯ, ಸಲಹೆ ಆಹ್ವಾನಿಸಿ ಮಾಹಿತಿ ಕ್ರೋಡೀಕರಿಸಿತ್ತು. ಅದಕ್ಕೆ ‘ಮುಖ್ಯಮಂತ್ರಿಗಳೇ ನಮಗಿವು ಬೇಕು!’ ಎಂಬ ಪುಸ್ತಕ ರೂಪ ಕೊಟ್ಟು ಮುಖ್ಯಮಂತ್ರಿಗಳಿಗೂ ತಲುಪಿಸಿತ್ತು. ಆ ಕಾರ್ಯವೀಗ ಸಾರ್ಥಕವಾಗಿದೆ. ವಿಜಯವಾಣಿ ಹಾಗೂ ದಿಗ್ವಿಜಯ 24ಗಿ7 ನ್ಯೂಸ್ ಫೋನ್-ಇನ್​ಗೆ ಆಗಮಿಸಿದ್ದ ಸಿಎಂ, ‘ಜನರ ಹಾಗೂ ಪತ್ರಿಕೆಯ ನಿರೀಕ್ಷೆ ಹುಸಿಗೊಳಿಸಲಾರೆ’ ಎಂದು ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.

ಫೋನ್ ಇನ್ ಪ್ರಸ್ತಾಪಕ್ಕೆ ಆದ್ಯತೆ

‘ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಬಜೆಟ್​ನಲ್ಲಿ ಏನು ಪರಿಹಾರ ಸಿಗಲಿದೆ?’ ಎಂದು ಜೂ.29ರಂದು ನಡೆದ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಫೋನ್-ಇನ್ ಕಾರ್ಯಕ್ರಮದ ವೇಳೆ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ಕುಮಾರಸ್ವಾಮಿ, ಎಲಿವೇಟೆಡ್ ಕಾರಿಡಾರ್ ಮತ್ತು ಪೆರಿಫೆರಲ್ ರಿಂಗ್​ರಸ್ತೆ ಯೋಜನೆ ಜಾರಿಗೆ ಸಂಬಂಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಬಜೆಟ್​ನಲ್ಲೂ ಘೋಷಿಸುತ್ತೇನೆ ಎಂದು ಭರವಸೆ ನೀಡಿದ್ದರು.

ಪತ್ರಿಕೆ ವಿತರಕರಿಗೆ ಬೆಂಬಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್​ನಲ್ಲಿ ದಿನಪತ್ರಿಕೆ ಹಂಚುವವರ ಕ್ಷೇಮ ನಿಧಿಗಾಗಿ 2 ಕೋಟಿ ರೂ. ಘೋಷಿಸಿದ್ದರು. ಅದನ್ನು ಮುಂದುವರಿಸುವಂತೆಯೂ ವಿಜಯವಾಣಿ ಎಚ್ಡಿಕೆ ಎದುರು ಮನವಿ ಇಟ್ಟಿತ್ತು. ಸಿದ್ದರಾಮಯ್ಯ ಬಜೆಟ್​ನ ಎಲ್ಲ ಯೋಜನೆಗಳನ್ನು ಮುಂದುವರಿಸುವುದಾಗಿ ಕುಮಾರಸ್ವಾಮಿ ಈ ಬಜೆಟ್​ನಲ್ಲಿ ಘೋಷಿಸಿದ್ದಾರೆ. ದಿನಪತ್ರಿಕೆ ಹಂಚುವವರ ಕ್ಷೇಮನಿಧಿ ಪ್ರಸ್ತಾಪ ಬಜೆಟ್ ಘೋಷಣೆಗಷ್ಟೆ ಸೀಮಿತವಾಗಲು ಬಿಡದೆ, ಅದು ಅನುಷ್ಠಾನ ಆಗುವವರೆಗೂ ವಿಜಯವಾಣಿ ಫಾಲೋ-ಅಪ್ ಮಾಡಲಿದೆ.

ಈಡೇರಿದ ಇತರೆ ಭರವಸೆಗಳು

 • ಸೌರಶಕ್ತಿ ಬಳಕೆ ಹಾಗೂ ಅದರ ಸಂಶೋಧನೆಗೆ ಒತ್ತು ನೀಡುವಂತೆ ಮ್ಯಾಗ್ಸೆಸೆ ಪುರಸ್ಕೃತ ಡಾ.ಹರೀಶ್ ಹಂದೆ ಸಲಹೆ ನೀಡಿದ್ದರು.
 • ರಾಮನಗರದಲ್ಲಿ ಫಿಲ್ಮ್ ಇನ್ಸ್​ಟಿಟ್ಯೂಟ್ ನಿರ್ವಿುಸುವಂತೆ ಹಿರಿಯ ನಟ ಅಶೋಕ್ ಕೋರಿದ್ದರು.
 • ಇಸ್ರೇಲ್ ಮಾದರಿ ಕೃಷಿಗೆ ಒತ್ತು ನೀಡುವಂತೆ ಚಾಮರಾಜನಗರದ ಕೃಷಿತಜ್ಞ ಡಾ.ಎಸ್. ಬಿಸಲಯ್ಯ, ತಲಕಾಡು ಸಮುದಾಯ ಆರೋಗ್ಯ ಕೇಂದ್ರದ ಶುಶ್ರೂಷಕ ಎಂ. ಮಂಜುನಾಥ್ ಮುಂತಾದವರು ಕೇಳಿದ್ದರು.
 • ವೃದ್ಧಾಪ್ಯ ವೇತನ ಹೆಚ್ಚಿಸುವಂತೆ ಸಮಾಜ ಸೇವಕ ಶಿವಣ್ಣ, ಬೆಂಗಳೂರಿನ ಚಂದ್ರಶೇಖರ ಅವರು ಕೇಳಿದ್ದರು.
 • ಮಾತೃಪೂರ್ಣ ಯೋಜನೆ ಪರಿಪೂರ್ಣವಾಗಿಸಿ ಮುಂದುವರಿಸುವಂತೆ ಬೆಂಗಳೂರ ಗ್ರಾಮಾಂತರ ಜಿ.ಪಂ. ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ, ತಲಕಾಡು ಸಮುದಾಯ ಆರೋಗ್ಯ ಕೇಂದ್ರದ ಶುಶ್ರೂಷಕ ಎಂ. ಮಂಜುನಾಥ್ ಕೋರಿದ್ದರು.
 • ರೇಷ್ಮೆ ಕೈಗಾರಿಕೆ ಪ್ರೋತ್ಸಾಹಿಸುವಂತೆ ರಾಮನಗರದ ರೀಲರ್ ಸಯದ್ ಜಿಯಾವುಲ್ಲಾ, ಚನ್ನಪಟ್ಟಣದ ರೈತಮುಖಂಡ ಸಿ. ಪುಟ್ಟಸ್ವಾಮಿ ಮನವಿ ಮಾಡಿದ್ದರು.
 • ಯುವಜನತೆ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳುವಂತೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಜಿಲ್ಲೆಗೊಂದು ತರಬೇತಿ ಕೇಂದ್ರ ಆರಂಭಿಸಿ, ಉದ್ಯೋಗಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ರಾಮನಗರ ಖಾಸಗಿ ಕಂಪನಿ ಉದ್ಯೋಗಿ ಕಿರಣ್ ಬಿಳಗುಂಬ, ಕೊಪ್ಪಳ ಎಸ್​ಎಫ್​ಐ ಜಿಲ್ಲಾಧ್ಯಕ್ಷ ಅಮರೇಶ ಕಡಗದ ವಿನಂತಿಸಿದ್ದರು.
 • ಗಡಿಭಾಗದ ಕನ್ನಡ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಲು ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದರಾಮ ಕಲ್ಮಠ ಮನವಿ ಮಾಡಿಕೊಂಡಿದ್ದರು.
 • ತೆಂಗಿನ ಕೃಷಿ, ತೆಂಗು ಉದ್ಯಮವನ್ನು ಪ್ರೋತ್ಸಾಹಿಸುವಂತೆ ತುಮಕೂರಿನ ನಮ್ಮ ತೆಂಗು ಉತ್ಪಾದಕರ ಒಕ್ಕೂಟದ ಸಿಇಒ ಅಣೇಕಟ್ಟೆ ವಿಶ್ವನಾಥ್ ಬೇಡಿಕೆ ಇಟ್ಟಿದ್ದರು.
 • ಉಡುಪು ವಲಯಕ್ಕೆ ಹೆಚ್ಚು ಒತ್ತು ನೀಡಿ, ಹೊಸ ಜವಳಿ ನೀತಿ ಘೊಷಿಸುವಂತೆ ಮಾಜಿ ಶಾಸಕ ಮಲ್ಲಿಕಾರ್ಜುನ ಬಿನ್ನಿ, ಜವಳಿ ಉದ್ಯಮಿ ಅಥಣಿ ವೀರಣ್ಣ ಮತ್ತಿತರರು ಕೋರಿದ್ದರು.
 • ಮಂಡ್ಯ ಜಿಲ್ಲೆಯ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕೆ.ಆರ್. ಪೇಟೆ ರೈತ ಮುಖಂಡ ಜಗಣ್ಣ ಬೇಡಿಕೆ ಇಟ್ಟಿದ್ದರು.
 • ಸರ್ಕಾರಿ ಶಾಲೆಯಲ್ಲಿ ಬಯೋಮೆಟ್ರಿಕ್ ಸಾಧನ ಅಳವಡಿಸುವ ಸಲಹೆಯನ್ನು ಬಾಗಲಕೋಟೆ ಸೂಳೇಬಾವಿಯ ಶಿಕ್ಷಕ ವಿ. ಅಶೋಕ್ ಬಳ್ಳಾ ಕೋರಿದ್ದರು.
 • ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವಂತೆ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿ ಎಂ. ರಂಜಿತಾ ಮನವಿ ಮಾಡಿದ್ದರು.
 • ಅನ್ನದಾತನ ಉಳಿವಿಗೆ ಸೂಕ್ತ ಯೋಜನೆಗಳನ್ನು ರೂಪಿಸುವಂತೆ ಬಾದಾಮಿಯ ಅಮೃತ ಮೋ ಕಲಾಲ ಕೋರಿದ್ದರು.

Leave a Reply

Your email address will not be published. Required fields are marked *

Back To Top