ಭಾಷಣದ ವೇಳೆ ಕಾಂಗ್ರೆಸ್​ ಕಾರ್ಯಕರ್ತ ಮಾತನಾಡಿದಕ್ಕೆ ಕೋಪಗೊಂಡ ಮುಖ್ಯಮಂತ್ರಿ

ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರದ ವೇಳೆ ಕಾಂಗ್ರೆಸ್​ ಕಾರ್ಯಕರ್ತನೊಬ್ಬನ ಮೇಲೆ ಸಿಎಂ ಕುಮಾರಸ್ವಾಮಿ ಗರಂ ಆದ ಘಟನೆ ಕೆ.ಆರ್.ನಗರದ ಸಾತಿ ಗ್ರಾಮದಲ್ಲಿ ನಡೆದಿದೆ.

ಭಾಷಣದ ವೇಳೆ ಕೈ ಕಾರ್ಯಕರ್ತ ಮಾತನಾಡಿದ್ದಕ್ಕೆ ಗರಂ ಆದ ಸಿಎಂ, ಇಲ್ಲೇನು ಜಾತಿ ರಾಜಕಾರಣ ಮಾಡೋಕೆ ಬರಬೇಡಿ ಎಂದಿರುವ ಅವರು ಮೊದಲು ಈ ಜಾತಿ ರಾಜಕಾರಣ ಬಿಡಿ ಎಂದು ಆ ಕಾರ್ಯಕರ್ತನಿಗೆ ಗದರಿದ್ದಾರೆ.

ಕೆ.ಆರ್.ನಗರದ ನಾರಾಯಣಪುರದಲ್ಲಿ ಸಿಎಂ ಪ್ರಚಾರದ ವೇಳೆ ನಿಖಿಲ್ ಎಲ್ಲಿದೀಯಪ್ಪಾ ಅಂತ ಟ್ರೋಲ್ ಮಾಡ್ತಾರೆ. ಈ ಕುರಿತು ಕುಮಾರಣ್ಣ ಮಾತಾಡಬೇಕೆಂದು ಗ್ರಾಮದ ಯುವಕ ಒತ್ತಾಯಿಸಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಎಚ್​ಡಿಕೆ ಕೆಲ ಕೆಟ್ಟ ಅಭಿರುಚಿ ಉಳ್ಳವರು ಹೀಗೆ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು. ನಿಖಿಲ್ ಎಲ್ಲಿದೀಯಪ್ಪಾ ಅಂದರೆ ನೀವು ನಮ್ಮ ಹೃದಯದಲ್ಲಿದ್ದಾರೆ ಅಂತ ಹೇಳಿ ಎಂದರು.

ಪ್ರಚಾರದ ವೇಳೆ ಕೆ.ಆರ್.ನಗರದ ಕತ್ತಿ ಗ್ರಾಮದಲ್ಲಿ ಸಿಎಂ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿದ ಅವರು ನನ್ನ ಮಗ ಅಂತ ಮತ ಹಾಕಬೇಡಿ, ನಿಮ್ಮ ಮನೆ ಮಗ ಎಂದು ಮತ ಹಾಕಿ ಎಂದರು.(ದಿಗ್ವಿಜಯ ನ್ಯೂಸ್​)