More

    ಗಾಂಧಿ ವಿರೋಧಿಗಳಿಗೆ ಅಧಿಕಾರ ಸಿಕ್ಕಿದೆ ಸಂಸತ್ ವಿಸರ್ಜನೆಗೆ ಒತ್ತಾಯ: ಚಿತ್ರದುರ್ಗದಲ್ಲಿ ಇಬ್ರಾಹಿಂ, ಉಗ್ರಪ್ಪ ಹೇಳಿಕೆ

    ಚಿತ್ರದುರ್ಗ:ದೇಶದ ಜನ ಗಾಂಧಿ ವಿರೋಧಿಗಳಿಗೆ ಅಧಿಕಾರ ಕೊಟ್ಟು ಪರಿತಪಿಸುತ್ತಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಆರೋಪಿಸಿದರು.
    ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಸಿಎಎ ಜಾರಿ ಮೂಲಕ ಕೇಂದ್ರ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದೆ. ಉದ್ಯೋಗ ಸೃಷ್ಟಿ ಬದಲು ಲಾಭದಲ್ಲಿರುವ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುತ್ತಿದೆ.

    ಸ್ವಾತಂತ್ರ್ಯ ಚಳವಳಿ ಮಾದರಿ ವಿದ್ಯಾರ್ಥಿಗಳಿಂದು,ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ಹೋರಾಟಕ್ಕೆ ಧುಮುಕುತ್ತಿದ್ದಾರೆ. ಆಡಳಿತ ವೈಫಲ್ಯವನ್ನು ಪ್ರಧಾನಿ ಹಾಗೂ ಗೃಹಸಚಿವರು ಮುಚ್ಚಿ ಹಾಕಿ, ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಮುಂದಾಗಿದೆ. ವಿಶ್ವದ ಯಾವುದೇ ದೇಶದಲ್ಲೂ ಧರ್ಮದ ಆಧಾರದಡಿ ಪೌರತ್ವ ಕೊಡುವ ಕಾನೂನು ಇಲ್ಲವೆಂದರು.

    ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಂದ ದೇಶದ ಅಭಿವೃದ್ಧಿ ಅಧೋಗತಿಗಿಳಿಯುತ್ತಿದೆ. ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ. ಸಿಎಎ ಜಾರಿ ತಪ್ಪು ಅಥವಾ ಸರಿ ಎನ್ನುವುದು ಜನತಾ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ. ಆದ್ದರಿಂದ ಕೇಂದ ಸರ್ಕಾರ ಸಂಸತ್ತನ್ನು ವಿಸರ್ಜಿಸಿ ಬ್ಯಾಲೇಟ್ ಪೇಪರ್ ಮೂಲಕ ಚುನಾವಣೆ ಎದುರಿಸಲಿ,ಆಗ ಜನ ಬಿಜೆಪಿಯನ್ನು ಬೆಂಬಲಿಸಿದರೆ ಆ ಪಕ್ಷದ ನಾಯಕರು ಹೇಳಿದಂತೆ ಕೇಳುವುದಾಗಿ ಸವಾಲು ಹಾಕಿದರು.
    ಯಡಿಯೂರಪ್ಪ ವಿರುದ್ಧವೇ ಸಂಚು

    ಕರ್ನಾಟಕಕ್ಕೆ ಬರಬೇಕಾದ 5600 ಕೋಟಿ ಜಿಎಸ್ ಟಿ ಹಣವನ್ನ ಕೇಂದ್ರ ಕೊಡುತ್ತಿಲ್ಲ, ಯಡಿಯೂರಪ್ಪ ಈಗ ರಾಜಾ ಇಲಿ ಆಗಿದ್ದಾರೆ, ಸಂಪುಟ ವಿಸ್ತರಿಸಲು ಅವರಿಗೆ ಸ್ವಾತಂತ್ರ್ಯವಿಲ್ಲದಂತಾಗಿದೆ. ಸಚಿವ ಸ್ಥಾನದ ವಿಚಾರ ಬಿಟ್ಟು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತಿಲ್ಲ. 2011ರಲ್ಲಿ ಯಾರು ಅವರನ್ನ್ನು ಕೆಳಗಿಸಿದ್ರೋ, ಅವರೇ ಈಗ ಮತ್ತೆ ಮೂಲೆಗುಂಪು ಮಾಡಲು ಸಂಚು ನಡೆಸಿದ್ದಾರೆ. ಆದ್ದರಿಂದ ನಿಷ್ಕ್ರಿಯ ಮುಖ್ಯಮಂತ್ರಿ ಎಂಬ ಹೆಸರು ಪಡೆಯುವ ಮೊದಲು ಯಡಿಯೂರಪ್ಪರ ಬಿಜೆಪಿ ಹೈಕಮಾಂಡ್ ವಿರುದ್ಧ ಸಿಡಿದು ನಿಂತು ರಾಜ್ಯದ ಅಭಿವೃದ್ಧಿಗೆ ಮುಂದಾಗಲಿ ಎಂದರು. ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಅಧ್ಯಕ್ಷ ಫಾತ್ಯರಾಜನ್, ಕಾರ‌್ಯಾಧ್ಯಕ್ಷ ಶಿವುಯಾ ದವ್,ಬಾಲಕೃಷ್ಣ,ಜಿಪಂ ಸದಸ್ಯ ಆರ್.ನರಸಿಂಹರಾಜ,ಮಧುಸೂದನ್ ಮೊದಲಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts