ಸಿಎಂ ಎಚ್​.ಡಿ.ಕುಮಾರಸ್ವಾಮಿಯಿಂದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಕ್ಷೀರಾಭಿಷೇಕ, ಪೂರ್ಣಾಹುತಿ ಹೋಮ

ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹಿನ್ನೆಲೆ ತಮ್ಮ ಮಗ, ತಂದೆಯ ಗೆಲುವಿಗಾಗಿ ಸಿಎಂ ಕುಮಾರಸ್ವಾಮಿ ಅವರಿಂದ ದೇವಸ್ಥಾನ ಭೇಟಿ, ಪೂಜೆ ಪುನಸ್ಕಾರ ಕಾರ್ಯಗಳು ಬಿಡುವಿಲ್ಲದೆ ನಡೆಯುತ್ತಿವೆ. ಇಂದು ಬೆಳಗ್ಗೆ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಈಗ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಕ್ಷೀರಾಭಿಷೇಕ ಹಾಗೂ ಪೂರ್ಣಾಹುತಿ ಹೋಮ ನಡೆಸಿದರು.

ಲೋಕಸಭಾ ಚುನಾವಣೆಯಲ್ಲಿ ತಂದೆ, ಮಗನ ಗೆಲುವಿಗಾಗಿ ಪೂರ್ಣಾಹುತಿ ಹೋಮ ಆಯೋಜಿಸಿದ್ದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ಭಾಗವಹಿಸಿದ್ದಾರೆ. ಪೂಜೆಯ ಹಿನ್ನೆಲೆ ಭಕ್ತರಿಗೆ ದೇವಸ್ಥಾನದ ಒಳಗಡೆ ಪ್ರವೇಶ ನಿಷೇಧಿಸಲಾಗಿದೆ.

ನಿನ್ನೆ ಇದೇ ದೇವಸ್ಥಾನದಲ್ಲಿ ಸಚಿವ ರೇವಣ್ಣ ಹೋಮವನ್ನ ನೆರವೇರಿಸಿದ್ದರು. ಇಂದು ಅದೇ ಹೋಮದ ಅಂತಿಮ ಪೂರ್ಣಾಹುತಿ ಹೋಮದಲ್ಲಿ ಸಿಎಂ ಮತ್ತು ದೇವೆಗೌಡರು ಭಾಗಿಯಾಗಿದ್ದಾರೆ. ಈ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಗನ ಗೆಲುವಿಗಾಗಿ ಸಿಎಂ ಅವರು ಭಾರೀ ತಲೆಕೆಡೆಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *