ತೆರಿಗೆ ಹೆಚ್ಚಿಸಿದ್ದರೂ ಪಕ್ಕದ ರಾಜ್ಯಕ್ಕಿಂತ ನಮ್ಮಲ್ಲಿ ಪೆಟ್ರೋಲ್​ ಬೆಲೆ ಕಡಿಮೆ ಇದೆ: ಎಚ್​ಡಿಕೆ

ಹುಬ್ಬಳ್ಳಿ: ನಮ್ಮ ರಾಜ್ಯದಲ್ಲಿ ಪೆಟ್ರೋಲ್​, ಡೀಸೆಲ್​ ಮೇಲಿನ ತೆರಿಗೆ ಹೆಚ್ಚಿಸಿದ್ದರೂ ಪಕ್ಕದ ರಾಜ್ಯಕ್ಕಿಂತ ಕಡಿಮೆ ಬೆಲೆ ಇರಲಿದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದಾಗ ತೆರಿಗೆ ಇಳಿಸಿದ್ದೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತೈಲ ದರದ ಮೇಲಿನ ತೆರಿಗೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ವಿಧಾನಸೌಧದ ವೆಸ್ಟ್ ಗೇಟ್ ಬಳಿ ಜಪ್ತಿ ಮಾಡಲಾದ ಲಕ್ಷಾಂತರ ರೂಪಾಯಿ ಪ್ರಕರಣಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ. ಈ ವಿಚಾರದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಐಟಿ ದಾಳಿಗೆ ಪ್ರಚಾರ ಬೇಡ
ಸಿನಿಮಾ ನಟರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಕ್ಕೆ ದೊಡ್ಡಮಟ್ಟದ ಪ್ರಚಾರ ಕೊಡೋದು ಸರಿಯಲ್ಲ. ಹಲವು ತಿಂಗಳಿಂದ ತಯಾರಿ ಮಾಡಿಕೊಂಡು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್)

One Reply to “ತೆರಿಗೆ ಹೆಚ್ಚಿಸಿದ್ದರೂ ಪಕ್ಕದ ರಾಜ್ಯಕ್ಕಿಂತ ನಮ್ಮಲ್ಲಿ ಪೆಟ್ರೋಲ್​ ಬೆಲೆ ಕಡಿಮೆ ಇದೆ: ಎಚ್​ಡಿಕೆ”

Leave a Reply

Your email address will not be published. Required fields are marked *