ಸಿಎಂ ಎಚ್​ಡಿಕೆ ಆಡಳಿತದ ಬಗ್ಗೆ ಬಿಜೆಪಿಯ ಟ್ವೀಟ್​ ಟೀಕೆ

ಬೆಂಗಳೂರು: ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಎಂಟು ತಿಂಗಳಾಗಿದ್ದರೂ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ, ಕೇವಲ ಸುಳ್ಳು ಭರವಸೆಗಳಿಂದಲೇ ಸರ್ಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರದ ದಿನಚರಿ ಬಗ್ಗೆ ಬಿಜೆಪಿ ವ್ಯಂಗ್ಯಭರಿತ ಟ್ವೀಟ್ ಮಾಡಿದೆ.

ಸಿಎಂ ಕುಮಾರಸ್ವಾಮಿ ವಿರುದ್ಧ ಸೋಮವಾರ ಮಾಡಿರುವ ವ್ಯಂಗ್ಯಭರಿತ ಟ್ವೀಟ್ ಹೀಗಿದೆ:

ಬೆಳಗ್ಗೆ: ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಟಿ.ವಿ. ಚಾನಲ್​ಗಳಲ್ಲಿ ಭರ್ಜರಿ ಪ್ರಚಾರ ಪಡೆಯುವುದು, ಬಳಿಕ ಬ್ರೇಕ್ ಫಾಸ್ಟ್ ಎಂಜಾಯ್ ಮಾಡುವುದು.
ಮದ್ಯಾಹ್ನ: ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡುವುದು.
ರಾತ್ರಿ: ಅಧಿಕಾರಕ್ಕಾಗಿ ತಮ್ಮ ತಮ್ಮಲ್ಲೇ ಕಚ್ಚಾಡಿಕೊಂಡು ಆರಾಮವಾಗಿ ನಿದ್ರಿಸುವುದು.
ಮರುದಿನ- ಪುನರಾವರ್ತನೆ.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುವಂತೆ ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಬಿಜೆಪಿ ಸಭೆಯಲ್ಲಿ ಸಲಹೆ ನೀಡಲಾಗಿದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)