Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ನನ್ನ ಹೆಚ್ಚು ಕಾಳಜಿ ರಾಜ್ಯದ ಅಭಿವೃದ್ಧಿ ಫಿಟ್​ನೆಸ್​ಗೆ, ನಿಮ್ಮ ಬೆಂಬಲವಿರಲಿ: ಪ್ರಧಾನಿಗೆ ಸಿಎಂ ಪ್ರತಿಕ್ರಿಯೆ

Wednesday, 13.06.2018, 10:51 AM       No Comments

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್​ನೆಸ್​ ಸವಾಲನ್ನು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಸ್ವೀಕರಿಸಿದ್ದು, ತನ್ನ ಆರೋಗ್ಯಕ್ಕಿಂತ ರಾಜ್ಯದ ಅಭಿವೃದ್ಧಿ ಎಂಬ ಫಿಟ್​ನೆಸ್​ ಮುಖ್ಯ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿದ್ದಾರೆ.

ಬುಧವಾರ ಬೆಳಗ್ಗೆಯಷ್ಟೇ ಪ್ರಧಾನಿ ಮೋದಿ ಅವರು ತಮ್ಮ ಫಿಟ್​ನೆಸ್​ ಕುರಿತಾದ ವಿಡಿಯೋ ಬಿಡುಗಡೆ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸವಾಲೆಸೆದಿದ್ದರು.

ರಾಜ್ಯದ ಅಭಿವೃದ್ಧಿ ಫಿಟ್​ನೆಸ್​ ಮುಖ್ಯ
ಇದಕ್ಕೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಎಚ್​ಡಿಕೆ ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿರುವ ಪ್ರಧಾನಿ ಅವರನ್ನು ನಾನು ಗೌರವಿಸುತ್ತೇನೆ. ಪ್ರತಿಯೊಂದಕ್ಕೂ ದೈಹಿಕ ಸಾಮರ್ಥ್ಯ ಬಹಳ ಮುಖ್ಯ ಎಂಬುದನ್ನು ನಾನು ನಂಬಿದ್ದೇನೆ. ಯೋಗ ನನ್ನ ಪ್ರತಿನಿತ್ಯ ವ್ಯಾಯಾಮದ ಬಹುಮುಖ್ಯ ಭಾಗವಾಗಿದೆ. ಆದರೂ ನಾನು ನನ್ನ ರಾಜ್ಯದ ಅಭಿವೃದ್ಧಿ ಎಂಬ ಫಿಟ್​ನೆಸ್​ ಬಗ್ಗೆ ಕಾಳಜಿ ವಹಿಸುತ್ತೇನೆ. ಅದಕ್ಕೆ ನಿಮ್ಮ ಬೆಂಬಲ ಬೇಕಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top