ಯಾರು ಏನೇ ಬಿರುದು ಕೊಟ್ಟರೂ ಅದರಿಂದ ನಾವು ಮೆರೆಯೋಕೆ ಆಗುತ್ತಾ?: ದರ್ಶನ್​ಗೆ ಸಿಎಂ ಟಾಂಗ್​

ಬೆಂಗಳೂರು: ನಟ ದರ್ಶನ್​ ವಿರುದ್ಧ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಗರಂ ಆಗಿದ್ದಾರೆ. ಯಾರು ಏನೇ ಬಿರುದು ಕೊಟ್ಟರೂ ಅದರಿಂದ ನಾವು ಮೆರೆಯೋಕೆ ಆಗುತ್ತಾ? ಎಂದು ಟಾಂಗ್​ ನೀಡಿದ್ದಾರೆ.

ಡಿ ಬಾಸ್ ಬಿರುದು ಅಭಿಮಾನಿಗಳು ಕೊಟ್ಟಿರುವ ಭಿಕ್ಷೆ ಎಂಬ ದರ್ಶನ್ ಹೇಳಿಕೆ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ಡಿ‌ ಬಾಸ್ ಎಂದು ನಾಲ್ಕೈದು ಅಭಿಮಾನಿಗಳು ಮಾತ್ರ ಕೊಟ್ಟಿರುವುದು. ಆರೂವರೆ ಕೋಟಿ ಜನರು ಬಿರುದು ಕೊಟ್ಟಿದ್ದಾರಾ? ಈಗ ನನ್ನ ಮಗನಿಗೂ ಕೂಡ ಯುವರಾಜ ಎಂದು ಬಿರುದು ಕೊಟ್ಟಿದ್ದಾರೆ. ಅವನು ಈಗ ಯುವರಾಜನಾ? ನಾಲ್ಕು ಜನ ಅಭಿಮಾನಿಗಳು ಕೊಟ್ಟಿರುವ ಬಿರುದನ್ನು ಇಟ್ಟುಕೊಂಡು ನಾವೇನೋ ದೊಡ್ಡದಾಗಿ ಮೆರೆಯೋಕೆ ಆಗುತ್ತಾ? ಎಂದು ಟೀಕಿಸಿದರು.

ಮಂಡ್ಯದಲ್ಲಿ ನಿಖಿಲ್ ಗೆಲ್ಲಿಸಿದರೆ ಅಂಬರೀಷ್​ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಇದನ್ನು ಹೋಗಿ ಅವರನ್ನೇ ಕೇಳಿ ಎಂದರು. ಅಂಬರೀಷ್​​ ಹೆಸರನ್ನು ಉಪಯೋಗಿಸಿಕೊಳ್ಳುತ್ತಿರುವುದು ಸುಮಲತಾ. ನಾನು ಎಲ್ಲಾದರೂ ಅಂಬರೀಷ್​ ಹೆಸರು ಬಳಸಿದ್ದೀನಾ? ನಾನು ದುಡಿಮೆಯ ಹೆಸರಿನಲ್ಲಿ ಮತ ಕೇಳುತ್ತಿರುವುದು ಎಂದು ತಿರುಗೇಟು ನೀಡಿದರು. (ದಿಗ್ವಿಜಯ ನ್ಯೂಸ್​)

2 Replies to “ಯಾರು ಏನೇ ಬಿರುದು ಕೊಟ್ಟರೂ ಅದರಿಂದ ನಾವು ಮೆರೆಯೋಕೆ ಆಗುತ್ತಾ?: ದರ್ಶನ್​ಗೆ ಸಿಎಂ ಟಾಂಗ್​”

  1. ಬಿದುದು ಕೊಡೋದು ಜನರು, ನೀವಲ್ಲ ಸ್ವಾಮಿ .
    ದರ್ಶನ ಮತ್ತು ಯಶ್ ಕಷ್ಟ ಪಟ್ಟು ಬೆಳೆದು , ನಿರ್ಮಾಪಕರನ್ನ ಬೆಳೆಸಿರೋ ಕಲಾವಿದರು .

    ಅವರ ಚಲನಚಿತ್ರಗಳಿಗೆ ಜನ ಕ್ಯೂ ಅಲ್ಲಿ ಇರ್ತಾರೆ ದುಡ್ಡು ಕೊಟ್ಟು ನೋಡೋಕೆ.

    ನಿಮ್ಮ ಮಗನ ಚಿತ್ರಕ್ಕೆ ಬಿಟ್ಟಿ ticket distribution ಮಾಡಿದಂಗ್ ಅಲ್ಲ ಸ್ವಾಮಿ ಇದು.

Comments are closed.