Friday, 16th November 2018  

Vijayavani

Breaking News

ತಬ್ಬಲಿ ಯುವತಿಗೆ ಮೆಡಿಕಲ್ ಸೀಟು ಕೊಡಿಸಿದ ಎಚ್​ಡಿಕೆ

Saturday, 11.08.2018, 3:03 AM       No Comments

ಬೆಂಗಳೂರು: ತಬ್ಬಲಿ ಯುವತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಜನತಾ ದರ್ಶನದಲ್ಲಿ ನೀಡಿದ್ದ ಭರವಸೆ ಈಡೇರಿದ್ದು, ಬೆಂಗಳೂರಿನ ಸಪ್ತಗಿರಿ ವೈದ್ಯ ಕಾಲೇಜಿನಲ್ಲಿ ಪ್ರವೇಶಕ್ಕೆ ಅವಕಾಶ ದೊರಕಿಸಿಕೊಟ್ಟಿದ್ದಾರೆ. ನವಲಗುಂದ ತಾಲೂಕು ಹಾಲಕಸಗಲ್​ನ ದಿವ್ಯರಾಣಿ, ತಾಯಿ-ತಂದೆ ಇಲ್ಲದ ಅನಾಥೆ. ಪಿಯುಸಿಯಲ್ಲಿ ಶೇ.82 ಅಂಕ, ನೀಟ್​ನಲ್ಲಿ 9 ಸಾವಿರ ರ‍್ಯಾಂಕಿಂಗ್ ಪಡೆದಿದ್ದ ಆಕೆಗೆ ವೈದ್ಯಳಾಗಬೇಕು ಎನ್ನುವ ಕನಸು. ಆದರೆ, ಬಡತನ ಕಾರಣಕ್ಕೆ ಅದು ಸಾಧ್ಯವಾಗಿರಲಿಲ್ಲ. ರೈತ ಸಂಘದ ಮಾಣಿಕ್ಯ ಎಂಬುವರು ದಿವ್ಯರಾಣಿಯನ್ನು ಜನತಾ ದರ್ಶನಕ್ಕೆ ಕರೆತಂದಿದ್ದರು.ವೈದ್ಯಕೀಯ ಸೀಟು ಕೊಡಿಸುವ ಭರವಸೆಯನ್ನು ಸಿಎಂ ನೀಡಿದ್ದರು. ಇದೀಗ ಆಕೆಗೆ ಸೀಟು ಲಭಿಸಿದ್ದು, ‘ವಿಜಯವಾಣಿ’ ಜತೆ ಖುಷಿ ಹಂಚಿಕೊಂಡಿದ್ದಾಳೆ. ‘ಸಪ್ತಗಿರಿ ಕಾಲೇಜಿಗೆ ಶನಿವಾರ ಸೇರಿಕೊಳ್ಳುತ್ತಿದ್ದೇನೆ. ನನ್ನಂಥ ಅನಾಥೆಗೆ ಮಾನವೀಯ ದೃಷ್ಟಿಯಿಂದ ಅವಕಾಶ ಕಲ್ಪಿಸಿದ ಸಿಎಂ ಕುಮಾರಸ್ವಾಮಿ ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಹಾರೈಸಿದ್ದಾಳೆ.

Leave a Reply

Your email address will not be published. Required fields are marked *

Back To Top