ಮತ್ತೆ ಬನ್ನಿ ಕುಮಾರಸ್ವಾಮಿ: ಎಚ್​ಡಿಕೆ ಗ್ರಾಮವಾಸ್ತವ್ಯದ ಊರು ಹಿಂಗ್ಯಾಕಾಯ್ತು?

ರಾಯಚೂರು: ಎಚ್​.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ 2007ರಲ್ಲಿ ಆಗಿದ್ದಾಗ ಸಿಂಧನೂರು ತಾಲೂಕಿನ ಚಿತ್ರಾಲಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಹೂಡಿದ್ದರು. ಗ್ರಾಮದ ಯಲ್ಲಪ್ಪ ಎಂಬುವವರ ಮನೆಯಲ್ಲಿದ್ದು, ಊರಿನ ಸಮಸ್ಯೆಗಳನ್ನ ಪರಿಹರಿಸಿ, ಮೂಲಸೌಲಭ್ಯ ಒದಗಿಸುವ ಭರವಸೆಯನ್ನ ಸಿಎಂ ನೀಡಿದ್ದರು. ಆದರೆ, ಸುಮಾರು 10 ವರ್ಷ ಕಳೆದರೂ ಗ್ರಾಮದ ಚಿತ್ರಣ ಮಾತ್ರ ಹಾಗೇ ಇದೆ.

ಚಿತ್ರಾಲಿ ಗ್ರಾಮದಲ್ಲಿ ಇಂದಿಗೂ ಜನ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಕುಡಿಯೋಕೆ ಶುದ್ಧ ನೀರಿಲ್ಲದೇ ಪರದಾಡುತ್ತಿದ್ದಾರೆ. ಊರಿನಲ್ಲಿ ಚರಂಡಿಗಳು ನಿರ್ಮಾಣವಾಗಿಲ್ಲ. ಬಯಲು ಶೌಚಮುಕ್ತ ಗ್ರಾಮ ಮಾಡುತ್ತೇನೆ ಎಂಬ ಭರವಸೆಯೂ ಈಡೇರಿಲ್ಲ. ಊರಿಗೆ ಬಸ್​ಗಳಿಲ್ಲ. ಕುಮಾರಸ್ವಾಮಿಯವರು ಊರಿಗೆ ಬಂದು ಹೋದ ನಂತರವೂ ಗ್ರಾಮ ಅಭಿವೃದ್ಧಿಯ ಮುಖ ಕಂಡಿಲ್ಲ.

ಜನಪ್ರತಿನಿಧಿಗಳು, ಅಧಿಕಾರಿಗಳು ಊರಿಗೆ ಮೂಲ ಸೌಕರ್ಯಗಳನ್ನ ಒದಗಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈಗ ಕುಮಾರಸ್ವಾಮಿ ಮತ್ತೆ ಸಿಎಂ ಆಗಿದ್ದಾರೆ. ಈಗಲಾದರೂ ಚಿತ್ರಾಲಿಯ ಚಿತ್ರಣವನ್ನ ಬದಲಿಸಿ, ಸುವರ್ಣ ಗ್ರಾಮವನ್ನಾಗಿಸ್ತಾರಾ ಎಂಬುವುದು ಗ್ರಾಮಸ್ಥರ ನಿರೀಕ್ಷೆ.

ವಾರದ ಗಡುವು
ಚಿತ್ರಾಲಿ ಗ್ರಾಮದ ಸಮಸ್ಯೆಯನ್ನು ವಾರದ ಒಳಗೆ ಬಗೆಹರಿಸುವುದಾಗಿ ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಭರವಸೆ ನೀಡಿ, ದಿಗ್ವಿಜಯ ನ್ಯೂಸ್​ನಲ್ಲಿ ವಾರದ ಗಡುವು ಕೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *