ಐಸಿಯುನಲ್ಲಿ ದೋಸ್ತಿ ಸರ್ಕಾರ: ಆಷಾಢ ಆಪರೇಷನ್​ಗೆ ಕೈ-ದಳ ತಳಮಳ, ಮುಂಬೈಗೆ ಭಿನ್ನರು, ಸ್ಪೀಕರ್ ಪಾತ್ರ ನಿರ್ಣಾಯಕ

Latest News

ಅಸಲಿ ಪೊಲೀಸರಿಗೆ ಸೆರೆಸಿಕ್ಕ ನಕಲಿ ಅಧಿಕಾರಿ: ಉದ್ಯಮಿಗೆ ಬೆದರಿಸಿ 24 ಲಕ್ಷ ರೂ. ಸುಲಿಗೆ, ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಬೆಂಗಳೂರು: ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಬೆದರಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಚ್​ಎಎಲ್...

ಯುವಕನ ಕೊಲೆ ಮಾಡಿದ್ದ ದಂಪತಿ ಬೆಳಗಾವಿಯಲ್ಲಿ ಸೆರೆ

ಆನೇಕಲ್: ಖಾಸಗಿ ಸಂಸ್ಥೆಯ ಉದ್ಯೋಗಿ ಭದ್ರಾವತಿಯ ಕಿರಣ್ ಕುಮಾರ್ (25) ಕೊಲೆ ಪ್ರಕರಣ ಭೇದಿಸಿರುವ ಜಿಗಣಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಾವಣಗೆರೆಯ ಸುರೇಖಾ (38)...

ತನ್ನದಲ್ಲದ ತಪ್ಪಿಗೆ ದಂಡ ಕಟ್ಟಿದ ಟೆಕ್ಕಿ: ನಕಲಿ ನಂಬರ್ ಪ್ಲೇಟ್ ಅಳವಡಿಸಿ 4 ವರ್ಷ ಕಾರು ಓಡಿಸಿದ್ದ, ಆರ್​ಟಿಒ ವಶದಲ್ಲಿ ಉದ್ಯಮಿ

ಬೆಂಗಳೂರು: ಪರಿಚಿತರೊಬ್ಬರ ಬೆನ್ಜ್ ಕಾರಿನ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು 7 ವರ್ಷಗಳಿಂದ 27 ಲಕ್ಷ ರೂ. ತೆರಿಗೆ ವಂಚಿಸಿ ಓಡಾಡುತ್ತಿದ್ದ ಮರ್ಸಿಡೀಸ್...

ಅಕ್ರಮ ಸಂಪತ್ತಿಗೆ ಅಧಿಕಾರಿಗಳ ಕಾವಲು

| ರಮೇಶ ದೊಡ್ಡಪುರ ಬೆಂಗಳೂರು ನಗರ ಪ್ರದೇಶದಲ್ಲಿ ವಸತಿ, ವಾಣಿಜ್ಯ ಪ್ರದೇಶಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ರಚಿಸಲಾಗಿರುವ ಕಾನೂನು ಪಾಲಿಸಿ ಅಕ್ರಮ ಕಟ್ಟಡಗಳಿಗೆ ಬ್ರೇಕ್ ಹಾಕಬೇಕಾದ...

ಪೊಲೀಸ್ ಠಾಣೆಗಳಲ್ಲಿ ದಲಿತರ ದಿನ ಆಚರಣೆ ಕಡ್ಡಾಯ: ಪ್ರತಿ ತಿಂಗಳ 2ನೇ ಭಾನುವಾರ ಕಡ್ಡಾಯ, ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಇಲಾಖೆ ಗರಂ

| ಕೀರ್ತಿನಾರಾಯಣ ಸಿ. ಬೆಂಗಳೂರು ದಲಿತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳ 2ನೇ ಭಾನುವಾರ ‘ದಲಿತರ...

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಕೆಡಹುವ ಪ್ರತಿಪಕ್ಷ ಬಿಜೆಪಿಯ ಪ್ರಯತ್ನ ನಿರ್ಣಾಯಕ ಘಟ್ಟ ತಲುಪಿದ್ದು, ಶುಕ್ರವಾರ ರಾತ್ರಿಯಿಂದೀಚೆಗೆ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ದೋಸ್ತಿ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್​ನ 12 ಅತೃಪ್ತ ಶಾಸಕರು ಬಂಡಾಯದ ಬಾವುಟ ಹಾರಿಸಿ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ.

ಕೆಲ ದಿನಗಳ ಹಿಂದೆ ಶಾಸಕ ಆನಂದ ಸಿಂಗ್ ರಾಜೀನಾಮೆ ನೀಡಿದಾಗಲೇ ಹತ್ತಕ್ಕೂ ಹೆಚ್ಚು ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಾರೆಂಬ ಸುದ್ದಿ ಹರಿದಾಡಿ ತಣ್ಣಗಾಗಿತ್ತು. ಆದರೆ ಶನಿವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್​ನ ಒಂಬತ್ತು ಹಾಗೂ ಜೆಡಿಎಸ್​ನ ಮೂವರು ಶಾಸಕರು ಬೆಳಗ್ಗೆಯೇ ವಿಧಾನಸಭಾಧ್ಯಕ್ಷರ ಕಚೇರಿಗೆ ಬಂದು ಅವರ ಗೈರುಹಾಜರಿಯಲ್ಲಿ ವಿಧಾನಸಭೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಿ.ಆರ್. ವಾಲಾಗೂ ರಾಜೀನಾಮೆಯ ಮಾಹಿತಿ ನೀಡುವುದರೊಂದಿಗೆ ಎಲ್ಲ ಪ್ರಹಸನಗಳಿಗೂ ಒಂದೇ ಬಾರಿ ತೆರೆ ಎಳೆಯುವ ಪ್ರಯತ್ನ ನಡೆಸಿದರು.

ಬಿಜೆಪಿ 2 ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿ ಕೈ ಸುಟ್ಟುಕೊಂಡಿತ್ತು. ಆದ್ದರಿಂದಲೇ ಎಚ್ಚರಿಕೆಯ ಹೆಜ್ಜೆಯನ್ನಿಟ್ಟ ಪರಿಣಾಮ 3ನೇ ಪ್ರಯತ್ನ ಫಲಿಸಿದೆ. ರಾಜೀನಾಮೆ ನೀಡಿದ ಎಲ್ಲ ಶಾಸಕರು ಶನಿವಾರ ಸಂಜೆ ವೇಳೆಗೆ ಬಿಜೆಪಿ ಮುಖಂಡರೊಂದಿಗೆ ಎರಡು ವಿಶೇಷ ವಿಮಾನಗಳ ಮೂಲಕ ಮುಂಬೈಗೆ ತೆರಳಿದರು.

ನಾಳೆ ದೆಹಲಿಗೆ: ರಾಜೀನಾಮೆ ಕೊಟ್ಟ ಬೆಂಗಳೂರು ನಗರದ ನಾಲ್ಕು ಶಾಸಕರನ್ನು ಹೊರತುಪಡಿಸಿ ಉಳಿದೆಲ್ಲ ಶಾಸಕರು ಸದ್ಯ ಮುಂಬೈಗೆ ತೆರಳಿ ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸೋಮವಾರ ಅವರನ್ನು ದೆಹಲಿಗೆ ಕರೆದೊಯ್ದು ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.

ಸಿಎಂ ರಾಜೀನಾಮೆ?: ಸರ್ಕಾರ ಉಳಿಸಿಕೊಳ್ಳುವುದು ಕಷ್ಟವೆಂಬ ತೀರ್ವನಕ್ಕೆ ಬಂದಿರುವ ಸಿಎಂ ತಾವಾಗಿಯೇ ರಾಜೀನಾಮೆ ನೀಡುತ್ತಾರೆಂಬ ವದಂತಿಗಳಿವೆ. ಆದರೆ ಅದಕ್ಕೂ ಮುನ್ನ ಕೊನೆಯ ಪ್ರಯತ್ನ ಮಾಡಿ ಆ ನಂತರ ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿ ರಾಜೀನಾಮೆ ನೀಡಬಹುದೆಂದು ಹೇಳಲಾಗುತ್ತಿದೆ. ಅಮೆರಿಕ ಪ್ರವಾಸದಲ್ಲಿರುವ ಸಿಎಂ ಭಾನುವಾರ ರಾತ್ರಿ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಕೈ ಪಡೆ ಕೊನೆಯ ಯತ್ನ: ಅಧಿಕಾರಕ್ಕೆ ಆಸೆಪಟ್ಟ ಶಾಸಕರತ್ತ ಉದಾಸೀನ ಮಾಡಿದ್ದರಿಂದ ಬೆಲೆತೆತ್ತ ಕಾಂಗ್ರೆಸ್ ಈಗ ಸರ್ಕಾರ ಉಳಿಸಿಕೊಳ್ಳುವ ಕೊನೆಯ ಪ್ರಯತ್ನ ಮಾಡುತ್ತಿದೆ. ಪಕ್ಷದ ಮುಖಂಡರ ನಡುವಿನ ವೈಮನಸ್ಸಿನಿಂದಾಗಿ ಶಾಸಕರು ಅಸಮಾಧಾನ ಗೊಂಡಿದ್ದರು. ಇತ್ತೀಚೆಗೆ ಸಂಪುಟಕ್ಕೆ ಪಕ್ಷೇತರರನ್ನು ಸೇರ್ಪಡೆ ಮಾಡಿಕೊಂಡಿದ್ದರಿಂದ ಶಾಸಕರು ಸಹಜವಾಗಿ ಸಿಡಿದ್ದೆದರು. ಈಗ ಕಾಂಗ್ರೆಸ್ ನಾಯಕರು ಅತೃಪ್ತರನ್ನು ಸಂರ್ಪಸುವ ಪ್ರಯತ್ನ ಮಾಡುತ್ತಿದ್ದಾರೆ.

ದೌಡಾಯಿಸಿ ಬಂದ ವೇಣು: ಸರ್ಕಾರಕ್ಕೆ ಅಪಾಯ ಎದುರಾಗಿದೆ ಎಂಬುದು ತಿಳಿಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಬೆಂಗಳೂರಿಗೆ ದೌಡಾಯಿಸಿದರು. ಆದರೆ ಪರಿಸ್ಥಿತಿ ಕೈ ಮೀರಿದ್ದನ್ನು ಅರಿತು ಖಾಸಗಿ ಹೋಟೆಲ್​ಗೆ ರಾಮಲಿಂಗಾ ರೆಡ್ಡಿಯನ್ನು ಕರೆಸಿ ಮನವೊಲಿಸುವ ಯತ್ನ ನಡೆಸಿದರು.

ಯಾರಿಗೂ ಬೇಡ ಎಲೆಕ್ಷನ್: ಮೈತ್ರಿ ಪಕ್ಷಗಳ ಬಹುತೇಕ ಶಾಸಕರು ತಕ್ಷಣ ಚುನಾವಣೆ ಎದುರಿಸುವ ಮೂಡ್​ನಲ್ಲಿಲ್ಲ. ಚುನಾವಣೆಯಲ್ಲಿ ಗೆದ್ದು ಇನ್ನೂ ಒಂದೂವರೆ ವರ್ಷವೂ ಆಗಿಲ್ಲ. ಈಗ ಮತ್ತೆ ಚುನಾವಣೆ ಎದುರಾದರೆ ದೊಡ್ಡ ಹೊರೆ. ಹೀಗಾಗಿ ಬಿಜೆಪಿ ಸರ್ಕಾರ ರಚಿಸಿದರೂ ಪರವಾಗಿಲ್ಲ, ಇನ್ನೊಂದೆರಡು ವರ್ಷ ಚುನಾವಣೆ ಬೇಡ ಎಂಬ ಮೂಡ್​ನಲ್ಲಿದ್ದಾರೆ.

ಸರ್ಕಾರ ಉಳಿಯಲು ಅವಕಾಶ

 • ಜೆಡಿಎಸ್ ತನ್ನ ಪಾಲಿಗೆ ಅನಾಯಾಸವಾಗಿ ಬಂದಿರುವ ಸಿಎಂ ಸ್ಥಾನವನ್ನು ಕಾಂಗ್ರೆಸ್​ಗೆ ಬಿಟ್ಟುಕೊಟ್ಟಲ್ಲಿ ಆ ಪಕ್ಷ ಸಹ ಸರ್ಕಾರ ಉಳಿಸಿ ಕೊಳ್ಳಲು ನಿರ್ಣಾಯಕ ಹೋರಾಟ ಮಾಡಲಿದೆ.
 • ಸಿದ್ದರಾಮಯ್ಯ ಅಥವಾ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಸ್ಥಾನ ನೀಡಿದಲ್ಲಿ ರಾಜೀನಾಮೆ ಕೊಟ್ಟ ಶಾಸಕರು ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆ.
 • ಕಾಮರಾಜ್ ಸೂತ್ರದಂತೆ ತಕ್ಷಣವೇ ಸಂಪುಟ ವಿಸರ್ಜಿಸಿ, ಅತೃಪ್ತರನ್ನು ಪಟ್ಟಿಮಾಡಿ ಅವರಿಗೆ ಅವಕಾಶ ನೀಡುವುದು, ಉಳಿದವರಿಗೆ ಅವರವರ ‘ಬೇಡಿಕೆ’ ಈಡೇರಿಸುವುದು.

ರಾಜೀನಾಮೆ ಕೊಟ್ಟವರ ಹಾದಿ

 • ರಾಜೀನಾಮೆ ಕೊಟ್ಟ ಬಹುತೇಕರು ಬಿಜೆಪಿ ಸೇರುವ ಮನಸ್ಥಿತಿಯಲ್ಲಿಲ್ಲ. ಸರ್ಕಾರ ಬೀಳಬೇಕೆಂಬುದಷ್ಟೇ ಅವರ ಆಶಯ ಎಂಬಂತೆ ತೋರುತ್ತಿದೆ.
 • ರಾಜೀನಾಮೆ ಅಂಗೀಕಾರವಾದ ಬಳಿಕ ಒಂದೊಮ್ಮೆ ಬಿಜೆಪಿ ಸರ್ಕಾರ ರಚಿಸಿದ್ದೇ ಆದಲ್ಲಿ ಈ ಎಲ್ಲ ಶಾಸಕರು ಚುನಾವಣೆಗೆ ಸ್ಪರ್ಧಿಸಬೇಕಾಗುತ್ತದೆ. ಆದರೆ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆಂಬುದು ಕುತೂಹಲ.
 • ಸರ್ಕಾರ ಅಭದ್ರಗೊಳಿಸಿದ ಕಾರಣ ಹೇಳಿ ಎರಡೂ ಪಕ್ಷಗಳು ಈ ಶಾಸಕರನ್ನು ಉಚ್ಚಾಟಿಸಿದಲ್ಲಿ ಅವರ ರಾಜಕೀಯ ದಾರಿಯೂ ಅಸ್ಪಷ್ಟವಾಗಲಿದೆ.
 • ಒಂದೊಮ್ಮೆ ಮಧ್ಯಂತರ ಚುನಾವಣೆ ಬಂದರೆ ಇವರಿದ್ದ ಪಕ್ಷಗಳೇ ಮತ್ತೆ ಟಿಕೆಟ್ ನೀಡುತ್ತವೆಯೇ ಎಂಬುದು ಮತ್ತೊಂದು ಪ್ರಶ್ನೆ.

ರಾಜೀನಾಮೆ ಅಂಗೀಕಾರ 10 ದಿನ ವಿಳಂಬ

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ತಕ್ಷಣ ಆಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.

ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವ ಡಿ.ಕೆ. ಶಿವಕುಮಾರ್ ಅವರು ನಡೆಸಿದ ಸಭೆಯಲ್ಲಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು. ರಾಜೀನಾಮೆ ಅಂಗೀಕಾರ ಸ್ವಲ್ಪ ದಿನ ಮುಂದೂಡಿದರೆ ಆಗ ಪರಿಸ್ಥಿತಿ ತಣ್ಣಗಾಗಿ ಶಾಸಕರನ್ನು ವಾಪಸ್ ಕರೆತರಲು ಅನುಕೂಲವಾಗುತ್ತದೆ ಎಂಬ ಚರ್ಚೆಯಾಗಿದೆ. ರಾಜೀನಾಮೆ ಕೊಟ್ಟು ಹೋಗಿರುವ ಕಾಂಗ್ರೆಸ್ ಶಾಸಕರಲ್ಲಿ ಕೆಲವರನ್ನು ಅವರ ಆಪ್ತ ಶಾಸಕರು, ಬೆಂಬಲಿಗರು, ಕುಟುಂಬದ ಸದಸ್ಯರ ಮೂಲಕ ಒತ್ತಡ ತಂದು ವಾಪಸ್ ಕರೆಸಬೇಕು ಎಂಬ ಬಗ್ಗೆಯೂ ನಿರ್ಧಾರವಾಗಿದೆ.

ವಿಧಾನಮಂಡಲ ಅಧಿವೇಶನ ಶುಕ್ರವಾರದಿಂದ ನಡೆದರೆ ಗದ್ದಲವಾಗುತ್ತದೆ. ಆದ್ದರಿಂದ ಒಂದು ವಾರ ಅಥವಾ ಹತ್ತು ದಿನಗಳ ಮಟ್ಟಿಗಾದರೂ ಮುಂದೂಡುವ ಬಗ್ಗೆ ಭಾನುವಾರ ಸಿಎಂ ಬಂದ ನಂತರ ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಸಚಿವಗಿರಿ ಆಫರ್: ಕೊನೆಯ ಕಸರತ್ತಾಗಿ ಅತೃಪ್ತ ಶಾಸಕರನ್ನು ತಣಿಸಲು ಮೈತ್ರಿ ಪಕ್ಷಗಳು ಸಚಿವ ಸ್ಥಾನದ ಆಫರ್ ನೀಡುವ ಸಾಧ್ಯತೆಗಳಿವೆ. ಎರಡೂ ಪಕ್ಷಗಳಿಂದ ತಲಾ ಐದರಿಂದ ಆರು ಮಂದಿ ಸಚಿವರ ರಾಜೀನಾಮೆ ಪಡೆದು ಅತೃಪ್ತರಿಗೆ ಧಾರೆ ಎರೆದು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಉಭಯ ಪಕ್ಷಗಳ ವರಿಷ್ಠರು ಮಾಡುವ ಲಕ್ಷಣಗಳು ಗೋಚರಿಸುತ್ತಿವೆ.

ಹೀಗಿದೆ ಲೆಕ್ಕಾಚಾರ

ಸದ್ಯ ಪ್ರತಿಪಕ್ಷ ಬಿಜೆಪಿ 105 ಸದಸ್ಯರನ್ನು ಹೊಂದಿದ್ದರೆ, ಸ್ಪೀಕರ್ ಸೇರಿ ಆಡಳಿತ ಪಕ್ಷದ ಸಂಖ್ಯೆ 119. ದೋಸ್ತಿ ಸರ್ಕಾರದ ಬಲವನ್ನು 104ಕ್ಕೆ ಇಳಿಸುವುದು ಬಿಜೆಪಿಗೆ ಅನಿವಾರ್ಯ. ಅಂದರೆ 14 ಶಾಸಕರು ರಾಜೀನಾಮೆ ನೀಡಬೇಕು. ಈಗ ಆನಂದ ಸಿಂಗ್ ಸೇರಿ 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಇನ್ನೂ ಇಬ್ಬರು ರಾಜೀನಾಮೆ ನೀಡಿ ಸ್ಪೀಕರ್ ಅಂಗೀಕರಿಸಿದರೆ ಸರ್ಕಾರ ತಾನಾಗಿ ಬಿದ್ದುಹೋಗುತ್ತದೆ.

ರಾಜೀನಾಮೆಗಳು ಇನ್ನೂ ಅಂಗೀಕಾರ ಆಗಬೇಕಾಗಿದೆ. ಆ ನಂತರವಷ್ಟೇ ಮುಂದಿನ ಬೆಳವಣಿಗೆಗಳು ನಡೆಯುತ್ತವೆ.

| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

ಮುಂದೇನು?

 • ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡಬೇಕು
 • ಬಹುಮತ ಸಾಬೀತಿಗೆ ರಾಜ್ಯಪಾಲರು ಸೂಚಿಸಬಹುದು
 • ಬಹುಮತ ಸಾಬೀತು ಸಾಧ್ಯವಾಗದಿದ್ದರೆ ಸಿಎಂ ರಾಜೀನಾಮೆ
 • ಮುಖ್ಯಮಂತ್ರಿ ಬದಲು ಮಾಡಿ ಸರ್ಕಾರ ಉಳಿಸಿಕೊಳ್ಳುವ ಯತ್ನ
 • ಬಿಜೆಪಿ ಸರ್ಕಾರ ರಚಿಸಬಹುದು

ನಮ್ಮ ಪಕ್ಷ ಬೆಳವಣಿಗೆಗಳನ್ನು ಕಾದು ನೋಡುತ್ತದೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಚುನಾವಣೆ ರಾಜ್ಯಕ್ಕೆ ಹೊರೆಯಾಗುತ್ತದೆ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಮಂಗಳವಾರ ಸ್ಪೀಕರ್ ನಿರ್ಧಾರ

ಸರ್ಕಾರದ ಕಾಲಾವಧಿ, ಭವಿಷ್ಯ ಸ್ಪೀಕರ್ ಕೈನಲ್ಲಿದೆ. 13 ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಅವರು ಎಷ್ಟು ದಿನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಯಾವೊಬ್ಬ ಶಾಸಕರೂ ನೇರವಾಗಿ ಸ್ಪೀಕರ್ ಭೇಟಿ ಆಗಿ ರಾಜೀನಾಮೆ ನೀಡಿಲ್ಲ. ಆದ್ದರಿಂದ 13 ಜನರನ್ನು ಕರೆದು ವಿಚಾರಣೆ ಮಾಡಿ ನಂತರ ತೀರ್ಮಾನ ಮಾಡಬೇಕಾಗುತ್ತದೆ. ದೋಸ್ತಿ ಶಾಸಕರು ರಾಜೀನಾಮೆ ನೀಡಲು ಬರುವ ಮುನ್ನ ಕಚೇರಿಯಲ್ಲಿ ಕಡತ ಪರಿಶೀಲಿಸುತ್ತಿದ್ದ ಸ್ಪೀಕರ್ ರಮೇಶ್​ಕುಮಾರ್ ಅಲ್ಲಿಂದ ಆಸ್ಪತ್ರೆಗೆ ತೆರಳಿದರು. ಆಗ ಶಾಸಕರು ಕಚೇರಿಗೆ ಬಂದರು. ಸ್ಪೀಕರ್ ಅಲ್ಲಿಂದ ತಮ್ಮ ಮನೆಗೆ ಹೋಗಿ ಆನಂತರ ಕೋಲಾರಕ್ಕೆ ಹೋದರು. ಸಂಜೆ ಅಲ್ಲಿಂದ ವೆಲ್ಲೂರಿಗೆ ತೆರಳಿದರೆಂಬ ಮಾಹಿತಿ ಇದೆ.

ಕಾಂಗ್ರೆಸ್ ಲೆಕ್ಕಾಚಾರ

 • ಸಚಿವರಿಂದ ರಾಜೀನಾಮೆ ಕೊಡಿಸಿ ಅತೃಪ್ತರಿಗೆ ಸಚಿವ ಸ್ಥಾನ
 • ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಪ್ರತಿಪಕ್ಷದಲ್ಲಿ ಕೂರುವುದು
 • ನಾಯಕತ್ವದಲ್ಲಿ ಬದಲಾವಣೆಗೆ ಮುಂದಾಗುವುದು
 • ಶಾಸಕರನ್ನು ವಾಪಸ್ ಕರೆತರುವ ಪ್ರಯತ್ನ

ಜೆಡಿಎಸ್ ನಡೆ ಏನು

 • ಕಾಂಗ್ರೆಸ್​ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದು
 • ಉಪ ಮುಖ್ಯಮಂತ್ರಿ ಹುದ್ದೆ ಪಡೆಯಬಹುದು
 • ವಿಶ್ವನಾಥ್ ಹೊರತುಪಡಿಸಿ ಉಳಿದ ಶಾಸಕರ ಕರೆತರುವ ಯತ್ನ
 • ದೇವೇಗೌಡರು ಕಾಂಗ್ರೆಸ್ ವರಿಷ್ಠರ ಜತೆ ರ್ಚಚಿಸಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ

ಬಿಜೆಪಿ ಪ್ರತಿತಂತ್ರ

 • ಕಾದು ನೋಡಿ ಎಚ್ಚರಿಕೆಯ ಹೆಜ್ಜೆಯನ್ನಿಡುವುದು
 • ಅಧಿವೇಶನ ನಡೆಯದಂತೆ ಮಾಡುವುದು
 • ಬಹುಮತ ಸಾಬೀತಿಗೆ ಸಿಎಂ ಮೇಲೆ ಒತ್ತಡ
 • ರಾಜೀನಾಮೆಗಳ ಅಂಗೀಕಾರಕ್ಕೆ ಪ್ರಯತ್ನ

ಕುತೂಹಲ ಕೆರಳಿಸಿದ ಸಿಎಂ ನಡೆ

ಬೆಂಗಳೂರು: ಮೈತ್ರಿ ಶಾಸಕರ ರಾಜೀನಾಮೆಯಿಂದಾಗಿ ಇದೀಗ ಎಲ್ಲರ ಚಿತ್ರ ಜೆಡಿಎಸ್​ನತ್ತ ನೆಟ್ಟಿದೆ. ಆಪರೇಷನ್ ಕಮಲ ನಡೆದರೆ ನಾವೂ ರಿವರ್ಸ್ ಆಪರೇಷನ್​ಗೆ ಸಿದ್ಧ ಎಂದು ಗುಡುಗಿದ್ದ ಸಿಎಂ ಕುಮಾರಸ್ವಾಮಿ ಅವರ ಮುಂದಿನ ನಡೆ ಏನೆಂಬುದು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೊಳಪಟ್ಟಿದೆ.

ಎಚ್ಡಿಕೆ ನಡೆ ಏನು? ದೇವೇಗೌಡರ ಪ್ರತಿತಂತ್ರ ಏನೆಂಬುದು ಇನ್ನೂ ನಿಗೂಢವಾಗಿದೆ. ಅಮೆರಿಕದಿಂದಲೇ ಹಲವು ಅತೃಪ್ತ ಶಾಸಕರನ್ನು ಸಂರ್ಪಸಿ ಮಾತುಕತೆ ನಡೆಸಿದ ಬಳಿಕ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಕೈಚೆಲ್ಲಿರುವ ಕುಮಾರಸ್ವಾಮಿ ಏನು ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಬೇಲಿಯೇ ಎದ್ದು ಹೊಲ ಮೇಯ್ದ ಅನುಭವ ಈಗ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಆಗಿದೆ. ಇನ್ನೇನು ಎಲ್ಲವೂ ತಣ್ಣಗಾಯಿತು ಎಂದು ನಿಟ್ಟುಸಿರು ಬಿಡುವ ಹಂತದಲ್ಲಿ ಅದೇ ನಿಟ್ಟುಸಿರು ಬಿಸಿ ಉಸಿರಾಗಿ ಸುಡುತ್ತಿದೆ. ಹಳ್ಳಿ ಹಕ್ಕಿ ಆಡಗೂರು ವಿಶ್ವನಾಥ್ ಕೊಟ್ಟ ಏಟಿಗೆ ಜೆಡಿಎಸ್ ವರಿಷ್ಠರು ತಲೆ ಸುತ್ತು ಬಂದು ಬಿದ್ದಂತಾಗಿದ್ದಾರೆ. ಮುಂದೇನು ಮಾಡಬೇಕು ಎಂದು ಯೋಚಿಸಲೂ ಆಗದ ಮರ್ವಘಾತವನ್ನು ವಿಶ್ವನಾಥ್ ನೀಡಿದ್ದಾರೆ. ಅನುಭವಿ ರಾಜಕಾರಣಿ ಆಗಿರುವ ದೇವೇಗೌಡರು ಪರಿಸ್ಥಿತಿಯನ್ನು ತಹಬದಿಗೆ ತರುವ ಸಾಧ್ಯತೆ ಕ್ಷೀಣಿಸಿವೆ. ಕುಮಾರಸ್ವಾಮಿ ಮೇಲಿರುವ ಬಹುತೇಕ ಶಾಸಕರ ಸಿಟ್ಟು, ಆಕ್ರೋಶಗಳು ದೇವೇಗೌಡರ ಮಾತನ್ನು ಕೇಳದ ಸ್ಥಿತಿಗೆ ಅತೃಪ್ತ ಶಾಸಕರನ್ನು ತಂದು ನಿಲ್ಲಿಸಿವೆ. ಕಾರಣ ದೇವೇಗೌಡರು ಕೂಡ ಸರ್ಕಾರ ಉಳಿಸಿಕೊಳ್ಳುವ ಸಾಹಸಕ್ಕೆ ಕೈಹಾಕಲಾರರು ಎಂದು ಹೇಳಲಾಗುತ್ತಿದೆ. ಮೈತ್ರಿ ಪಕ್ಷಗಳಿಂದ ಬರೋಬ್ಬರಿ ಡಜನ್ ಶಾಸಕರು ಕೈಕೊಟ್ಟಿರುವುದರಿಂದ ರಿವರ್ಸ್ ಅಪರೇಷನ್ ಸಕ್ಸಸ್ ಆಗುವುದಿಲ್ಲ ಎಂಬುದು ಜೆಡಿಎಸ್ ನಾಯಕರ ಅರಿವಿಗೆ ಬಂದಿದೆ. ಹೀಗಾಗಿಯೇ ಕೈಲಾಗದ ಕೆಲಸಕ್ಕೆ ಮೈಪರಚಿಕೊಳ್ಳುವ ಬದಲು ಕುಮಾರಸ್ವಾಮಿ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಬಿಜೆಪಿಗೆ ಬಿಎಸ್ಪಿ ಬೆಂಬಲ?

ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಗೆ ಮುಂದಾದರೆ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಬೆಂಬಲ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

- Advertisement -

Stay connected

278,673FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...