24.5 C
Bangalore
Saturday, December 7, 2019

ರಾಜ್ಯದ ಪಾಲಿಗೆ ಜಲಸಂಪನ್ಮೂಲ

Latest News

ರಕ್ತದಾನ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ: ಹಳೆ ಪಿಂಚಣಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ಸರ್ಕಾರಿ ನೌಕರರು

ಬಳ್ಳಾರಿ: ಹಳೆ ಪಿಂಚಣೆ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ರಕ್ತದಾನ ಮಾಡುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ಎನ್​ಪಿಎಸ್​ ಸಂಘದ ಪದಾಧಿಕಾರಿಗಳು ವಿಭಿನ್ನವಾಗಿ ಪ್ರತಿಭಟನೆ...

ಹೊಳೆನರಸೀಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಣೆ

ಹೊಳೆನರಸೀಪುರ: ವಿಶ್ವಕ್ಕೆ ಮಾದರಿಯಾದ ಹಾಗೂ ಅದ್ಭುತವಾದ ಸಂವಿಧಾನವನ್ನು ರಚಿಸಿದ ಮೇಧಾವಿ ಡಾ. ಅಂಬೇಡ್ಕರ್ ಎಂದು ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್ ನುಡಿದರು. ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಸಂಜೆ...

ಕ್ಯಾಂಪ್​ಗೆಂದು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಕಾಲೇಜಿನ ವಿರುದ್ಧ ಪಾಲಕರ ಆಕ್ರೋಶ

ಶಿವಮೊಗ್ಗ: ಕಾಲೇಜಿನ ವತಿಯಿಂದ ಕ್ಯಾಂಪ್​ಗೆ ತೆರಳಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿನಿಯೋರ್ವಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಪರಿಣಿತಾ (20) ಮೃತ ವಿದ್ಯಾರ್ಥಿನಿ. ಪಿಇಎಸ್​ ಸಂಸ್ಥೆಯ ಫೆಸಿಟ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಓದುತ್ತಿದ್ದಳು. ಬೀರನಕೆರೆ...

ಬಿಎಸ್-6 ಜುಪಿಟರ್ ಮಾರುಕಟ್ಟೆಗೆ:ಎರಡು ಮಾದರಿಗಳು, ಮೂರು ವರ್ಣಗಳಲ್ಲಿ ಲಭ್ಯ

ಬೆಂಗಳೂರು: ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿ ನೂತನ ಇಟಿ-ಎಫ್​ಐ ತಂತ್ರಜ್ಞಾನ ಹೊಂದಿರುವ ಬಿಎಸ್-6 ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನವನ್ನು...

ಈ ಆರು ವರ್ಷದ ಬಾಲಕನನ್ನು ಪೂಜಿಸಲು ಬರುವ ಜನರು ! ಅವರೆಲ್ಲರ ಕಣ್ಣಲ್ಲಿ ಈತ ಆಂಜನೇಯನ ಅವತಾರ…; ಇದೊಂದು ಅಸಹಜವೆನ್ನಿಸುವ ಸ್ಟೋರಿ

ನವದೆಹಲಿ: ಈ ಆರುವರ್ಷದ ಬಾಲಕನನ್ನು ಪೂಜಿಸಲು ಆತನ ನೆರೆಮನೆಯವರೆಲ್ಲ ಬರುತ್ತಾರೆ. ಹೀಗೆ ಪದೇಪದೆ ಬರುವ ಜನರನ್ನು ನೋಡಿ ಸಾಕಾಗಿ, ಆತನ ತಂದೆ-ತಾಯಿ ಬಾಲಕನನ್ನು ಬಚ್ಚಿಡುತ್ತಿದ್ದಾರೆ ! ಇದು...

ಬೆಂಗಳೂರು: ಮಹದಾಯಿ ನೀರಿನ ಸದ್ಬಳಕೆ, ಮೇಕೆದಾಟು ಯೋಜನೆಗೆ ಗ್ರೀನ್ ಸಿಗ್ನಲ್, ಎತ್ತಿನಹೊಳೆ ಯೋಜನೆ ತ್ವರಿತ ಜಾರಿ, ಕೆಆರ್​ಎಸ್ ಉದ್ಯಾನಕ್ಕೆ ಜಾಗತಿಕ ಸ್ಪರ್ಶ, 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ ಒಳಗೊಂಡ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಚಯ.. ಹೀಗೆ ಒಂದೇ-ಎರಡೇ? ಹತ್ತು-ಹಲವು ಕಾರ್ಯಯೋಜನೆಗಳ ಮೂಲಕ ಜಲಸಂಪನ್ಮೂಲ ಇಲಾಖೆ ಶರವೇಗದಲ್ಲಿ ಸಾಗುತ್ತಿದೆ. ಟ್ರಬಲ್ ಶೂಟರ್ ಎಂದೇ ಕರೆಯಲ್ಪಡುವ ಸಚಿವ ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಇಲಾಖೆಯ ಚುಕ್ಕಾಣಿ ಹಿಡಿದಂದಿನಿಂದ ಇಡೀ ಇಲಾಖೆ ಮೈಚಳಿ ಬಿಟ್ಟು ಅಭಿವೃದ್ಧಿ ಚಟುವಟಿಕೆಯತ್ತ ದಾಪುಗಾಲಿಟ್ಟಿದೆ. ಪ್ರಗತಿಯಲ್ಲಿರುವ ಹಲವು ಯೋಜನೆಗಳು ಹಾಗೂ ನನೆಗುದಿಗೆ ಬಿದ್ದಿರುವ ಕೆಲವು ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ವೇಗ ನೀಡಲಾಗಿದೆ.

ಮಹದಾಯಿ ನ್ಯಾಯಮಂಡಳಿ ತೀರ್ಪಿನನ್ವಯ, ರಾಜ್ಯದ ಪಾಲಿಗೆ ದಕ್ಕಿರುವ ನೀರು ಬಳಸಿಕೊಳ್ಳುವ ನಿಟ್ಟಿನಲ್ಲಿ ತ್ವರಿತ ಕ್ರಮ ತೆಗೆದುಕೊಳ್ಳುವಲ್ಲಿ ಸರ್ಕಾರ ಯುದ್ಧೋಪಾದಿಯಲ್ಲಿ ಕಾರ್ಯಕ್ರಮ ಕೈಗೆತ್ತಿಕೊಂಡಿದೆ. ಬಹುವರ್ಷಗಳ ಬೇಡಿಕೆ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವುದು ಜನರಲ್ಲಿ ಸಂತಸ ಮೂಡಿಸಿದೆ.

ಕಾಮಗಾರಿ ವೀಕ್ಷಣೆ: ಡಿ.ಕೆ. ಶಿವಕುಮಾರ್ ಅಧಿಕಾರ ಸೂತ್ರ ಹಿಡಿದ ನಂತರ ತಮ್ಮ ಇಲಾಖೆಯಲ್ಲಿ ಪ್ರಗತಿ ಹಂತದಲ್ಲಿನ ಬಹುಮುಖ್ಯ ಕಾಮಗಾರಿಗಳನ್ನು ದಿನಗಟ್ಟಲೆ ಖುದ್ದು ಪರಿಶೀಲಿಸಿದ್ದಾರೆ. ಆಗಬೇಕಾಗಿರುವ ಕಾರ್ಯಗಳ ಕುರಿತು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಉತ್ತರಕರ್ನಾಟಕ ಮತ್ತು ಮಲೆನಾಡು ಭಾಗದ ಬೃಹತ್ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.

ಇಸ್ರೇಲ್ ಕೃಷಿ, ನೀರಾವರಿ ಯೋಜನೆ ಜಾರಿ, ಜಲಸಂಪನ್ಮೂಲ ಸದ್ಬಳಕೆಗೆ ಮೈತ್ರಿ ಸರ್ಕಾರ ವಿಶೇಷ ಒತ್ತು ನೀಡಿರುವುದರಿಂದ ದೂರದೃಷ್ಟಿಯ ಹಲವು ಯೋಜನೆ ಅನುಷ್ಠಾನಗೊಳಿಸುವ ವಾಗ್ದಾನವನ್ನು ಚೊಚ್ಚಲ ಬಜೆಟ್​ನಲ್ಲೇ ನೀಡಲಾಗಿದೆ. ಅದಕ್ಕೆ ಪೂರಕವಾಗಿ ನಾನಾ ನೀರಾವರಿ ಯೋಜನೆ ಕಾರ್ಯಾನುಷ್ಠಾನಕ್ಕೆ ಜಲಸಂಪನ್ಮೂಲ ಇಲಾಖೆ ನೀಲಿನಕ್ಷೆ ತಯಾರಿಸಿದೆ.

ಈ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಗಳು ತುಂಬಿವೆ. ಈ ನೀರಿನ ಮಿತ ಬಳಕೆಗೂ ಇಲಾಖೆ ಒತ್ತು ನೀಡಿದೆ. ತಮಿಳುನಾಡಿನ ಜತೆ ಜಟಾಪಟಿಗೆ ಕಾರಣವಾಗಿದ್ದ ಬಯಲುಸೀಮೆಯ ಜಿಲ್ಲೆಗಳಿಗೆ ನೀರು ಒದಗಿಸುವ ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ. ಈ ಯೋಜನೆಯನ್ನು ಕಾಲಮಿತಿಯಲ್ಲಿ ಕಾರ್ಯಗತಗೊಳಿಸಲು ಸರ್ಕಾರ ಸಜ್ಜಾಗಿದೆ. ಹೀಗಾಗಿ ಈಗಾಗಲೇ ಯೋಜನಾ ವರದಿ ತಯಾರಿಕೆಯಲ್ಲಿ ನಿರತವಾಗಿದೆ. ಈ ಯೋಜನೆಗೆ ಅನುಮೋದನೆ ಪಡೆಯುವಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ. ಶಿವಕುಮಾರ್ ಪರಿಶ್ರಮವಿದೆ.

ಎತ್ತಿನಹೊಳೆಗೆ ಒತ್ತು

ರಾಜ್ಯ ಸರ್ಕಾರ 2012ರಲ್ಲಿ ಕೈಗೆತ್ತಿಕೊಂಡಿರುವ ಎತ್ತಿನಹೊಳೆ ನೀರಾವರಿ ಯೋಜನೆಯನ್ನೂ ಆದಷ್ಟು ಶೀಘ್ರ ಅನುಷ್ಠಾನಗೊಳಿಸಬೇಕು ಎನ್ನುವುದು ಶಿವಕುಮಾರ್ ಸಂಕಲ್ಪ. ಇದು ಜಾರಿಯಾದರೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಜತೆಗೆ ತಮಗೂ ಮತ್ತು ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂಬುದು ಅವರ ಲೆಕ್ಕಾಚಾರ. ಆ ಕಾರಣದಿಂದ ಭೂ ಸ್ವಾಧೀನ, ಕಾಮಗಾರಿ ಪ್ರಗತಿ ಕಡೆಗೆ ವಿಶೇಷ ಗಮನಹರಿಸಿದ್ದಾರೆ.

ಆಲಮಟ್ಟಿಗೆ ಆದ್ಯತೆ

ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು 519 ಮೀಟರ್​ನಿಂದ 524.25 ಮೀಟರ್​ಗೆ ಎತ್ತರಿಸಲು ಉದ್ದೇಶಿಸಿದೆ. ಇದಕ್ಕಾಗಿ 2018-19ನೇ ಸಾಲಿನ ಬಜೆಟ್​ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ, ಪುನರ್ವಸತಿ, ಮರು ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಿದೆ. ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಜನರಿಗೆ ಭರವಸೆ ನೀಡಿದೆ.

ಡಿಸ್ನಿಲ್ಯಾಂಡ್ ಕೆಆರ್​ಎಸ್ ಉದ್ಯಾನ

ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್​ಎಸ್ ಉದ್ಯಾನವನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವುದು ಸಚಿವ ಶಿವಕುಮಾರ್ ಕನಸು. ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನ 80ರ ದಶಕದಲ್ಲಿ ರಾಷ್ಟ್ರ ಖ್ಯಾತಿ ಗಳಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಕಳೆಗುಂದಿರುವ ಇದರ ವೈಭವ ಮರುಕಳಿಸಲು ಸರ್ಕಾರ ಉದ್ದೇಶಿಸಿದೆ. ಈ ಯೋಜನೆಗೆ ಬಂಡವಾಳ ಹೂಡಲು ವಿಶ್ವಮಟ್ಟದ ಉದ್ಯಮಿಗಳು ಉತ್ಸುಕರಾಗಿದ್ದು, ಕಾರ್ಯಯೋಜನೆ ಸಿದ್ಧಪಡಿಸಲು ಬಜೆಟ್​ನಲ್ಲಿ 5 ಕೋಟಿ ರೂ. ಮೀಸಲಿಡಲಾಗಿದೆ.

22 ಅಣೆಕಟ್ಟೆ ಅಭಿವೃದ್ಧಿ

ವಿಶ್ವಬ್ಯಾಂಕ್ ನೆರವಿನ ಅಣೆಕಟ್ಟೆ ಪುನಶ್ಚೇತನ ಮತ್ತು ಸುಧಾರಣೆ ಯೋಜನೆಯ ಮೊದಲ ಹಂತ ಈಗಾಗಲೇ ಚಾಲ್ತಿಯಲ್ಲಿದೆ. ಇದರನ್ವಯ ರಾಜ್ಯಕ್ಕೆ 581 ಕೋಟಿ ರೂ. ಲಭ್ಯವಿದ್ದು, ಆಲಮಟ್ಟಿ, ನಾರಾಯಣಪುರ, ಕೃಷ್ಣರಾಜಸಾಗರ ಸೇರಿ 22 ಅಣೆಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

125 ಅಡಿ ಕಾವೇರಿ ಪ್ರತಿಮೆ

125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ ಒಳಗೊಂಡ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಚಯ, ಗೋಪುರಯುಕ್ತ ಗಾಜಿನ ಮನೆ, ವೀಕ್ಷಣೆ ಗೋಪುರ, ಬ್ಯಾಂಡ್ ಸ್ಟಾ್ಯಂಡ್, ಒಳಾಂಗಣ ಕ್ರೀಡಾಂಗಣ ಮತ್ತಿತರ ಐತಿಹ್ಯ ಸಾರುವ ಕಟ್ಟಡಗಳನ್ನು ನಿರ್ವಿುಸುವ ಮಹದಾಸೆಯನ್ನು ಸರ್ಕಾರ ಹೊಂದಿದೆ.

ಯೋಜನೆ ಜಾರಿಯಲ್ಲಿ ಕ್ರಿಯಾಶೀಲ

ಮೈತ್ರಿ ಧರ್ಮ ಪಾಲನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಚಿವ ಡಿ.ಕೆ. ಶಿವಕುಮಾರ್ ಇಲಾಖೆ ಕಾರ್ಯಗಳನ್ನೂ ಕಡೆಗಣಿಸಿಲ್ಲ. ಬಿಡುವಿಲ್ಲದ ರಾಜಕೀಯ ಚಟುವಟಿಕೆ ನಡುವೆಯೂ ಇಲಾಖೆ ಕೆಲಸ ಕಾರ್ಯಗಳಲ್ಲೂ ಪಾದರಸದಂತೆ ಕ್ರಿಯಾಶೀಲರಾಗಿದ್ದಾರೆ. ನೀರಾವರಿ ಯೋಜನೆಗಳ ಅನುಷ್ಠಾನ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿರುವ ಅವರು, ಕಾಮಗಾರಿಗಳ ಗುಣಮಟ್ಟದ ಕಡೆಗೂ ಕಣ್ಣು ಹಾಯಿಸಿದ್ದಾರೆ.

ಬಜೆಟ್​ನಲ್ಲಿ ಭರ್ಜರಿ ಹಣ ಹಂಚಿಕೆ

ಬಜೆಟ್​ನಲ್ಲಿ ಜಲಸಂಪನ್ಮೂಲ ಇಲಾಖೆಗೆ 15,998 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಹಣವನ್ನು ಕಾಲಮಿತಿಯಲ್ಲಿ ವಿನಿಯೋಗಿಸಿ ರಾಜ್ಯದ ಜನರಿಗೆ ನೀರಾವರಿ ಸವಲತ್ತು ಕಲ್ಪಿಸುವುದು ಸರ್ಕಾರದ ಗುರಿ.


ಉ.ಕ. ಅಭಿವೃದ್ಧಿಗೂ ಒತ್ತು

ಬೆಂಗಳೂರು: ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿರುವ ಉತ್ತರ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸದ್ದಿಲ್ಲದೆ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಬೆಳಗಾವಿ ಸುವರ್ಣಸೌಧದಲ್ಲಿ ಮೊದಲ ಬಾರಿಗೆ ಜನತಾ ದರ್ಶನ ನಡೆಸುವ ಮೂಲಕ ಉತ್ತರ ಕರ್ನಾಟಕ ಬಗೆಗಿನ ಆದ್ಯತೆಯನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಸಾಬೀತುಪಡಿಸಿದರು.

ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಈ ಬಾರಿಯ ಬಜೆಟ್​ನಲ್ಲಿ 1,500 ಕೋಟಿ ರೂ. ಘೋಷಣೆ ಮಾಡಲಾಗಿದ್ದು, ಈಗಾಗಲೇ 1,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಪ್ರಾಯೋಗಿಕವಾಗಿ ಅಳವಡಿಸಲು ಯಾದಗಿರಿ, ಹಾವೇರಿ, ಗದಗ ಆಯ್ಕೆ ಮಾಡಲಾಗಿದೆ. ವಿಶೇಷವಾಗಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಕಾಂಪಿಟ್ ವಿಥ್ ಚೀನಾ’ ಯೋಜನೆಯಲ್ಲೂ ಉತ್ತರ ಕರ್ನಾಟಕಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ. ಚೀನಾದಿಂದ ಸರಬರಾಜಾಗುವ ಅತ್ಯಂತ ಕಳಪೆ ಹಾಗೂ ರಾಸಾಯನಿಕಯುಕ್ತ ಆಟಿಕೆ ಬದಲಿಗೆ ಕೊಪ್ಪಳದಲ್ಲಿ ಬೊಂಬೆ ತಯಾರಿಕಾ ಘಟಕಕ್ಕೆ ಮಂಜೂರಾತಿ ನೀಡಲಾಗಿದೆ. ಚೀನಾದಿಂದ ಆಮದಾಗುವ ಕಡಿಮೆ ಗುಣಮಟ್ಟದ ಜೀನ್ಸ್ ಬದಲಿಗೆ ಬಳ್ಳಾರಿಯಲ್ಲಿ ಈಗಾಗಲೇ ಇರುವ ಜೀನ್ಸ್ ಉದ್ಯಮವನ್ನು ಬೃಹತ್ ಆಗಿ ಬೆಳೆಸಲು ಸರ್ಕಾರ ಸಂಕಲ್ಪ ತೊಟ್ಟಿದೆ.

ಐತಿಹಾಸಿಕ ಬಾದಾಮಿ ಪ್ರವಾಸೋದ್ಯಮ ತಾಣದ ಅಭಿವೃದ್ಧಿಗೆ 5.8 ಕೋಟಿ ರೂ., ವಿಜಯಪುರದಲ್ಲಿ 100 ಹಾಸಿಗೆಗಳ ತಾಯಿ ಹಾಗೂ ಮಗು ಆರೈಕೆ ಕೇಂದ್ರ, ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನೆನಪಿಗೆ ನಿರ್ವಿುಸಿದ್ದ ಭವನ ಕಾಮಗಾರಿಗೆ ಚುರುಕು, ಧಾರವಾಡ ವಿವಿ ರೂಪಿಸಿದ್ದ ನಿರ್ವಾತ ತಂತ್ರಜ್ಞಾನಕ್ಕೆ ಪ್ರೋತ್ಸಾಹ, ಬಿಆರ್​ಟಿಎಸ್ ಪ್ರಾಯೋಗಿಕ ಸಂಚಾರ ಆರಂಭ, ಸಂಡೂರಿನಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಚಿಂತನೆ, ಬೀದರ್​ನಲ್ಲಿ ಕೃಷಿ ಉಪಕರಣ ತಯಾರಿಗೆ ಆಗಮಿಸುವ ಕೈಗಾರಿಕೆಗಳಿಗೆ ಸಹಾಯ ನೀಡಲು 2 ಸಾವಿರ ಕೋಟಿ ರೂ. ಬಂಡವಾಳ, ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಬಯಲು ಬಹಿರ್ದೆಸೆಮುಕ್ತ ಆಗಿಸುವತ್ತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸರ್ಕಾರ ವಿಶೇಷ ಕಾಳಜಿ ವಹಿಸಿದೆ.


ವೈದ್ಯಕೀಯ ಸೌಕರ್ಯಕ್ಕೆ ಆದ್ಯತೆ

ಬೆಂಗಳೂರು: ರಾಜ್ಯದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖಪಾತ್ರ ವಹಿಸುತ್ತಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಈ ಬಾರಿ ಮಹತ್ವ ಪೂರ್ಣ ಗುರಿಯೊಂದಿಗೆ ಹೆಜ್ಜೆ ಇಟ್ಟಿದೆ. ರಾಮನಗರ ಜಿಲ್ಲೆ ಕನಕಪುರದಲ್ಲಿ ಹೊಸ ವೈದ್ಯಕಾಲೇಜು, ಮಂಡ್ಯ ಆಸ್ಪತ್ರೆ ಮೇಲ್ದರ್ಜೆಗೆ, ಕಿದ್ವಾಯಿಯಲ್ಲಿ ಬೋನ್​ವ್ಯಾರೋ

ಟ್ರಾನ್ಸ್​ಪ್ಲಾಂಟ್ ಚಿಕಿತ್ಸೆಗೆ ಪ್ರತ್ಯೇಕ ಘಟಕ, ರಾಮನಗರದಲ್ಲಿ ಸೂಪರ್ ಸ್ಪೆಷಾಲಿಟಿ ಸ್ಥಾಪನೆಗೆ ಪ್ರಯತ್ನಗಳು ಆರಂಭವಾಗಿವೆ. ಬೆಳಗಾವಿ, ಕಲಬುರಗಿ, ಮೈಸೂರು ನಗರಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಹಾಗೂ ಇತರ ತೃತೀಯ ಹಂತದ ಆರೋಗ್ಯ ಸೇವೆ ಒದಗಿಸುವುದಕ್ಕಾಗಿ ಹೊಸ ಆಸ್ಪತ್ರೆ ನಿರ್ವಣದ ಕಲ್ಪನೆ ಟಿಸಿಲೊಡೆದಿದೆ. ಗದಗ, ಕೊಪ್ಪಳ, ಚಾಮರಾಜನಗರಗಳನ್ನೂ ಒಳಗೊಂಡು ಅಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಸ್ಪತ್ರೆಕಟ್ಟಡಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗುತ್ತಿದೆ. ಶಿವಮೊಗ್ಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ಘಟಕ, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ಒಂದು ಪೆಟ್ ಸಿಟಿ ಸ್ಕಾ್ಯನ್ ಅಳವಡಿಕೆ, ಬೀದರ್ ಹಾಗೂ ಗದಗ ವೈದ್ಯವಿಜ್ಞಾನಗಳ ಸಂಸ್ಥೆಗಳಲ್ಲಿ ಕ್ಯಾತ್ ಲ್ಯಾಬ್ ಹೃದ್ರೋಗ ಘಟಕ ಸ್ಥಾಪನೆ, ಕಲಬುರಗಿ ವೈದ್ಯಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಅನದಾನದಲ್ಲಿ ಸುಟ್ಟ ಗಾಯಗಳ ವಾರ್ಡ್ ಸ್ಥಾಪನೆ, ಹಾಸನ, ಮೈಸೂರು ಮತ್ತು ಕಾರವಾರ ವೈದ್ಯ ಕಾಲೇಜುಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸುವ ಬಗ್ಗೆ ಪ್ರಕ್ರಿಯೆಗಳು ಶುರುವಾಗಿದೆ. ಒಟ್ಟಾರೆ ಆರೋಗ್ಯ ಕ್ಷೇತ್ರಕ್ಕೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದ ವೈದ್ಯ ಶಿಕ್ಷಣ ಇಲಾಖೆಯಲ್ಲಿ ಕೆಲಸಗಳು ಆರಂಭವಾಗಿವೆ.


ಕೊಡಗು ಸಂತ್ರಸ್ತರಿಗೆ ಪರಿಹಾರ

ಬೆಂಗಳೂರು: ಪ್ರಕೃತಿ ವಿಕೋಪದಿಂದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹದಿಂದ ಕೊಡಗು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಲು ಸ್ವತಃ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿ ಸಚಿವ ಸಂಪುಟದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮನೆ ಕಳೆದುಕೊಂಡ 840 ಕುಟುಂಬಗಳಿಗೆ 9.84 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಕೊಡಲು ನಿರ್ಧರಿಸಲಾಗಿದೆ. ಮನೆ ನಿರ್ಮಾಣ ಆಗುವವರೆಗೆ ಬಾಡಿಗೆ ಮನೆಯಲ್ಲಿ ವಾಸಿಸಲು ಮಾಸಿಕ 10 ಸಾವಿರ ರೂ. ಬಾಡಿಗೆ ಹಣ ಮಂಜೂರು ಮಾಡಲಾಗಿದೆ. ಸಾಮಗ್ರಿ ಖರೀದಿಗೆ 50 ಲಕ್ಷ ರೂ. ಮಂಜೂರು ಮಾಡಲಾಗಿದೆ. ಪ್ರಕೃತಿ ವಿಕೋಪ ಸಂಭವಿಸಿದ ಮೇಲೆ ಸಿಎಂ ಮೂರು ಬಾರಿ ಕೊಡಗಿಗೆ ಖುದ್ದು ಭೇಟಿ ನೀಡಿ, ವಾಸ್ತವ ಸ್ಥಿತಿಗತಿ ಅರಿತುಕೊಂಡಿದ್ದಾರೆ. ಅಧಿಕಾರಿಗಳ, ಜನಪ್ರತಿನಿಧಿಗಳ ಸಭೆ ನಡೆಸುವ ಮೂಲಕ ತಕ್ಷಣದ ಪರಿಹಾರ ಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸಫಲರಾಗಿದ್ದಾರೆ. ಸಿಎಂ ರಾಜ್ಯ ಸರ್ಕಾರದಿಂದ ಗಮನ ಸೆಳೆಯುವ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದರ ಮೂಲಕ 546 ಕೋಟಿ ರೂ. ಅನುದಾನ ಘೊಷಿಸುವಂತೆ ಮಾಡಿದ್ದಾರೆ. ಸಚಿವ ಸಾ.ರಾ. ಮಹೇಶ್ ಕೊಡಗಿನ ಜನರ ಸಂಕಷ್ಟ ಪರಿಹಾರಕ್ಕೆ ಕಾರ್ಯೋನ್ಮುಖರಾಗಿದ್ದಾರೆ.

ಎಲ್ಲ ಪ್ರವಾಸಿತಾಣಗಳ ಅಭಿವೃದ್ಧಿ

ಪ್ರವಾಸೋದ್ಯಮದಲ್ಲಿ ಕರ್ನಾಟಕ ರಾಜ್ಯ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಐತಿಹಾಸಿಕ ಸ್ಥಳಗಳಿಂದ ಕೆಆರ್​ಎಸ್ ತನಕ ಎಲ್ಲ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿರುವುದರಿಂದ ಕೇಂದ್ರ ಸರ್ಕಾರದ ನೆರವಿನೊಂದಿಗೆ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಪ್ರವಾಸಿ ತಾಣಗಳಲ್ಲಿ ಗುಣಮಟ್ಟದ ಹೋಟೆಲ್​ಗಳನ್ನು ತೆರೆಯುವುದು ಹಾಗೂ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಮಾದರಿ ಪ್ರವಾಸಿ ರಾಜ್ಯವನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದೆ.

| ಸಾ.ರಾ.ಮಹೇಶ್ ಪ್ರವಾಸೋದ್ಯಮ ಸಚಿವ


ಕೌಶಲಾಧಾರಿತ ವಿಶ್ವವಿದ್ಯಾಲಯ

ಬೆಂಗಳೂರು: ಪದವೀಧರರ ಎಂಪ್ಲಾಯಬಿಲಿಟಿ ಅನುಪಾತ ಅತಿ ಕಡಿಮೆ ಇರುವುದನ್ನು ಗಮನಿಸಿರುವ ಸರ್ಕಾರ, ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಮೂರು ಕೌಶಲಾಧಾರಿತ ವಿಶ್ವವಿದ್ಯಾಲಯ ಸ್ಥಾಪನೆಗೆ ತೀರ್ಮಾನ ಕೈಗೊಂಡಿದೆ. ಆಯವ್ಯಯದಲ್ಲಿ 9 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿಯವರು ಒಟ್ಟು ಏಳು ಬಾರಿ ದೆಹಲಿಗೆ ಭೇಟಿ ನೀಡಿದ್ದು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ವಿಷಯಗಳಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಉತ್ತಮ ಸ್ಪಂದನೆ ದೊರೆತಿದೆ ಎಂಬುದು ಉಲ್ಲೇಖಾರ್ಹ ವಿಚಾರ. ಇದರ ಫಲವಾಗಿ ಸುಮಾರು 2,500 ಕೋಟಿ ರೂ.ಗಳಿಗೆ ಹೆಚ್ಚು ಅನುದಾನ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ಸು ಲಭಿಸಿದೆ. ಉನ್ನತ ಶಿಕ್ಷಣ ಸಚಿವರಾಗಿ ಜಿ.ಟಿ.ದೇವೇಗೌಡ ಅಧಿಕಾರ ವಹಿಸಿಕೊಂಡ ಬಳಿಕ ಇಲಾಖೆಯಲ್ಲಿ ಕೆಲವೊಂದು ತಾಂತ್ರಿಕ ಬದಲಾವಣೆಗಳನ್ನು ಮಾಡಿದ್ದು, ರಾಜ್ಯದ ಎಲ್ಲ ವಿವಿಗಳು ಗುಣಮಟ್ಟದ ಶಿಕ್ಷಣ ನೀಡುವತ್ತ ಹೆಜ್ಜೆ ಹಾಕಿವೆ.


ಗರ್ಭಿಣಿಯರಿಗೆ ಮಾತೃಶ್ರೀ

ಬೆಂಗಳೂರು: ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಸುಧಾರಣೆಗೆ ಸಿದ್ದರಾಮಯ್ಯ ಸರ್ಕಾರ ಮಾತೃಪೂರ್ಣ ಯೋಜನೆ ಜಾರಿಗೆ ತಂದಿತ್ತು. ಅದರ ಮುಂದುವರಿದ ಭಾಗವಾಗಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಗರ್ಭಿಣಿಯರಿಗೆ 6 ಸಾವಿರ ರೂ. ಆರ್ಥಿಕ ನೆರವು ನೀಡುವ ಮಾತೃಶ್ರೀ ಯೋಜನೆ ಜಾರಿಗೊಳಿಸಿದೆ.

ರಾಜ್ಯದ 1.2 ದಶಲಕ್ಷ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ಸುಧಾರಿಸಲು ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆ ಆರಂಭಿಸಿತ್ತು. ತಿಂಗಳಲ್ಲಿ 25 ದಿನ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರೆಯುತ್ತಿತ್ತು. ಗರ್ಭಧರಿಸಿದ ದಿನದಿಂದ ಆರಂಭಿಸಿ ಹೆರಿಗೆ ನಂತರದ ಆರು ತಿಂಗಳವರೆಗೆ ಅನ್ನ, ತರಕಾರಿಗಳಿಂದ ಕೂಡಿದ ಸಾಂಬಾರ್, ಬೇಯಿಸಿದ ಮೊಟ್ಟೆ, 200 ಎಂಎಲ್ ಹಾಲು, ಕಡಲೆ ಬೀಜ ಮತ್ತು ಬೆಲ್ಲದಿಂದ ಮಾಡಿದ ಚಿಕ್ಕಿ ಸೇರಿ ಪರಿಪೂರ್ಣ ಆಹಾರ ನೀಡಲಾಗುತ್ತಿದೆ. ಅನುಷ್ಠಾನಕ್ಕಾಗಿ 302 ಕೋಟಿ ರೂ. ಅನ್ನು ರಾಜ್ಯ ಸರ್ಕಾರ ವಿನಿಯೋಗಿಸುತ್ತಿದೆ. ರಾಜ್ಯದ ಈ ಯೋಜನೆಯನ್ನು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಜಾರಿಗೆ ತಂದಿವೆ. ಗರ್ಭಿಣಿಯರ ಆರೋಗ್ಯ ಉತ್ತಮವಾಗಿದ್ದರೆ ಮಕ್ಕಳ ಅಪೌಷ್ಟಿಕತೆಯನ್ನೂ ನಿವಾರಿಸಬಹುದು ಎಂಬುದು ಈ ಬೃಹತ್ ಯೋಜನೆಯ ಉದ್ದೇಶ. ನ.1ರಿಂದ ಯೋಜನೆ ಜಾರಿಯಾಗಿದ್ದು, 350 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಕುಟುಂಬ) ಗರ್ಭಿಣಿಯರಿಗಾಗಿ ರಾಜ್ಯ ಸರ್ಕಾರ ಮಾತೃಶ್ರೀ ಯೋಜನೆಯನ್ನು ಹೊಸದಾಗಿ ರೂಪಿಸಿದ್ದು, ಯೋಜನೆ ಮುಖಾಂತರ ಫಲಾನುಭವಿಗಳು ಒಟ್ಟು ರೂ. 6000 ಪಡೆಯಬಹುದಾಗಿದೆ. ಇದನ್ನು ಎರಡು ಹಂತದಲ್ಲಿ ನೀಡಲಾಗುತ್ತದೆ. ಮೊದಲನೆಯದು ಹೆರಿಗೆ ಪೂರ್ವದ ಮೂರು ತಿಂಗಳಿಗೆ ತಲಾ ಒಂದು ಸಾವಿರ ಹಾಗೂ ಹೆರಿಗೆ ನಂತರದ ಮೂರು ತಿಂಗಳು ತಲಾ ಒಂದು ಸಾವಿರ ನೀಡಲಾಗುತ್ತದೆ.

ಮಾತೃಶ್ರೀ ಯೋಜನೆಯ ಮೇಲುಸ್ತುವಾರಿಯನ್ನು ಆಯಾ ಗ್ರಾಮಗಳ ಅಂಗನವಾಡಿ ಶಿಕ್ಷಕಿಯರಿಗೆ ಅಥವಾ ಕಾರ್ಯಕರ್ತೆಯರಿಗೆ ನೀಡಲಾಗಿದೆ. ಗ್ರಾಮದ ಅಥವಾ ಸುತ್ತಮುತ್ತಲಿನ ಅಂಗನವಾಡಿ ಶಿಕ್ಷಕಿಯರು ಅಥವಾ ಕಾರ್ಯಕರ್ತೆಯರ ಬಳಿ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬಹುದು.


ಕುಡಿಯುವ ನೀರಿಗೆ ಜಲಧಾರೆ

ಬೆಂಗಳೂರು: ಕುಡಿಯುವ ನೀರಿನ ತತ್ವಾರ ಈಗ ಎಲ್ಲೆಡೆ ಕಾಡುತ್ತಿದೆ. ನಗರ ಪ್ರದೇಶಗಳ ಮಾತು ಒತ್ತಟ್ಟಿಗಿರಲಿ, ಗ್ರಾಮೀಣ ಪ್ರದೇಶಗಳೂ ಇಂದು ಬಾಯಾರಿ ಬಳಲುತ್ತಿವೆ. ಅನೇಕ ಹಳ್ಳಿಗಳಲ್ಲಿ ನೀರಿನ ದಾಹ ನೀಗಿಸಿಕೊಳ್ಳಲು ಹರ ಸಾಹಸ ಪಡುವ ಸ್ಥಿತಿ ಇದೆ. ಎಲ್ಲರಿಗೂ ಕುಡಿಯುವ ನೀರು ಒದಗಿಸುವುದು ಸರ್ಕಾರಕ್ಕೆ ಸವಾಲಿನ ಕೆಲಸವೇ ಆಗಿದೆ. ಹೀಗಾಗಿ ಮೈತ್ರಿ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ!

ರಾಜ್ಯದ ಹಳ್ಳಿಹಳ್ಳಿಗೂ ಕುಡಿಯುವ ನೀರು ಪೂರೈಸುವ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷೆಯ ಫಲವಾಗಿ 80 ಸಾವಿರ ಕೋಟಿ ರೂ.ಗಳ ‘ಜಲಧಾರೆ’ ಹೆಸರಿನ ಯೋಜನೆಯೊಂದು ಮುಂದಿನ ವರ್ಷ ಆರಂಭಗೊಳ್ಳಲಿದೆ. ಈಗಾಗಲೇ ರಾಜ್ಯದ ಪ್ರತಿ ಹಳ್ಳಿಗೂ ಕುಡಿಯುವ ನೀರು ಪೂರೈಸುವ 53 ಸಾವಿರ ಕೋಟಿ ರೂ. ವೆಚ್ಚದ ‘ಜಲಧಾರೆ’ ಯೋಜನೆಯನ್ನು ಮುಂದಿನ ವರ್ಷ ಆರಂಭಿಸಲು ಸಿದ್ಧತೆ ನಡೆಸಿದೆ.

ಹಳ್ಳಿಗಳಿಗೆ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ ಕುಡಿಯುವ ನೀರಿನ ಗಂಭೀರ ಸಮಸ್ಯೆ ತಲೆದೋರಿರುವುದರಿಂದ ಅಂತಹ ಪಟ್ಟಣ ಹಾಗೂ ನಗರ ಪ್ರದೇಶಗಳನ್ನು ಈ ಯೋಜನೆ ಪರಿಧಿಗೆ ತಂದು ಇನ್ನೂ 27 ಸಾವಿರ ಕೋಟಿ ರೂ. ಹೆಚ್ಚುವರಿ ವ್ಯಯಿಸಲು ಕೂಡ ಸರ್ಕಾರ ತೀರ್ವನಿಸಿದೆ.

ವರ್ಷದ ಎಲ್ಲ ದಿನವೂ ನೀರು ಪೂರೈಸಬೇಕೆಂಬುದು ಸರ್ಕಾರದ ಸಂಕಲ್ಪ. ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡರ ವಿಶೇಷ ಆಸಕ್ತಿಯ ಫಲವಾಗಿ ಈ ಯೋಜನೆಗೆ ಬೇಕಾದ ತಯಾರಿ ನಡೆದಿದೆ.

ನಗರ ಪ್ರದೇಶಗಳನ್ನೂ ಸೇರಿಸಿಕೊಂಡು ‘ಜಲಧಾರೆ’ ಯೋಜನೆ ರೂಪಿಸಲಾಗುತ್ತಿದೆ. ವಿವರ ಯೋಜನಾ ವರದಿ ತಯಾರಿಸಿ ಮುಂದಿನ ವರ್ಷ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಗೆ ನದಿ-ಜಲಾಶಯ ಮೂಲಗಳಿಂದ ನೀರು ಪೂರೈಸಲಾಗುತ್ತದೆ. ಲಭ್ಯತೆ ಇರುವ ನೀರನ್ನು ಖಾತ್ರಿ ಪಡಿಸಿಕೊಂಡು ಡಿಪಿಆರ್ ತಯಾರಿ ನಡೆದಿದೆ.

ಉದ್ಯೋಗ ಖಾತ್ರಿಯಲ್ಲಿ ಚೆಕ್ ಡ್ಯಾಂ, ಬದು ನಿರ್ಮಾಣ: ಉದ್ಯೋಗ ಖಾತ್ರಿ ಯೋಜನೆಯಡಿ ಚೆಕ್ ಡ್ಯಾಂ, ಬದು ನಿರ್ವಣಗೊಳ್ಳಲಿವೆ. ಅಷ್ಟೇ ಅಲ್ಲ, ಬರ ಪೀಡಿತ ಪ್ರದೇಶಗಳಲ್ಲಿ ತೋಟಗಾರಿಕೆ ಬೆಳೆ ನಾಟಿ ಮಾಡಲು ನರೇಗಾದಲ್ಲಿ ನೆರವು ನೀಡಲಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಈ ವರ್ಷ 10 ಕೋಟಿ ಮಾನವದಿನ ಸೃಷ್ಟಿಸಲಾಗುತ್ತಿದೆ. ಇದು 8.5 ಕೋಟಿ ಮಾನವದಿನಗಳಿಂದ 10ಕ್ಕೆ ಏರುವುದರೊಂದಿಗೆ ದುಡಿವ ಕೈಗಳಿಗೆ ಉದ್ಯೋಗ ದೊರಕಿಸಿಕೊಡಲಾಗುತ್ತದೆ. ಪ್ರತಿಯೊಬ್ಬರಿಗೂ 100ರಿಂದ 150 ಮಾನವದಿನಗಳಷ್ಟು ಉದ್ಯೋಗ ಸಿಗಲಿದೆ. ಉದ್ಯೋಗ ಖಾತ್ರಿಯಡಿ ಆಸ್ತಿ ನಿರ್ವಣಕ್ಕೆ ಆದ್ಯತೆ ನೀಡಲಾಗುತ್ತದೆ.

ಕಾಮಗಾರಿಗಳಿಗೆ -ಠಿ;17,000 ಕೋಟಿ

ರಾಜ್ಯದಲ್ಲಿ ಕುಡಿಯುವ ನೀರಿಗೆ ಸಂಬಂಧಿತ 27 ಸಾವಿರ ಕಾಮಗಾರಿಗಳಿಗೆ ಸರ್ಕಾರ 17 ಸಾವಿರ ಕೋಟಿ ರೂ. ಹಂಚಿಕೆ ಮಾಡಿದೆ. ಜಿಲ್ಲಾ ಪಂಚಾಯಿತಿಗಳ ಮೂಲಕ ಈ ಕಾಮಗಾರಿ ನಡೆಯಲಿದ್ದು, ಡಿ.31ರ ಒಳಗೆ ಟೆಂಡರ್ ಕರೆದು ಕಾರ್ಯಾದೇಶ ಪತ್ರ ನೀಡಲಾಗುತ್ತದೆ. ಮಾರ್ಚ್ 31ರ ಒಳಗಾಗಿ ಈ ಎಲ್ಲ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಹೊಂದಿದೆ.

ಒಣಕಸ ವಿಲೇವಾರಿ ಜಾರಿ

ಗ್ರಾಮೀಣ ಪ್ರದೇಶಗಳಲ್ಲೂ ಕಸ ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಸರ್ಕಾರ ಒಣ ಕಸ ವಿಲೇವಾರಿಗೆ ಈ ವರ್ಷ 500 ಗ್ರಾಮ ಪಂಚಾಯಿತಿಗಳನ್ನು ಆರಿಸಿಕೊಂಡಿದೆ. ಈಗಾಗಲೇ ಉಡುಪಿ ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳಲ್ಲಿ ಒಣ ಕಸ ಬೇರ್ಪಡಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಈ ವರ್ಷದ ಉದ್ದೇಶಿತ ಗುರಿ ಸಾಧನೆ ಹಿನ್ನೆಲೆಯಲ್ಲಿ 91 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿ, ಪ್ರಾಥಮಿಕ ಹಂತದ ಕೆಲಸ ಆರಂಭಿಸಲಾಗಿದೆ.

ಹೊಸ 5 ಲಕ್ಷ ಕುಟುಂಬಗಳಿಗೆ ಶೌಚಗೃಹ

ಸ್ವಚ್ಛತೆಗೆ ಶೌಚಗೃಹಗಳದ್ದೇ ದೊಡ್ಡ ಸಮಸ್ಯೆ. ಶೌಚಗೃಹಗಳ ನಿರ್ಮಾಣ ಎಷ್ಟು ಮುಖ್ಯವೋ ಅವನ್ನು ಬಳಸುವ ಪ್ರವೃತ್ತಿ ಬೆಳೆಸುವುದೂ ಬಹುಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ‘ಶೌಚಾಲಯ ಆಗಲಿ ಸ್ವಚ್ಛಾಲಯ’ ಆಂದೋಲನವನ್ನೇ ಆರಂಭಿಸಿದೆ. ಅಷ್ಟೇ ಅಲ್ಲ, ವಿಭಜಿತ ಹೊಸ 5 ಲಕ್ಷ ಕುಟುಂಬಗಳಿಗೆ ಹೆಚ್ಚುವರಿಯಾಗಿ ಶೌಚಗೃಹ ನಿರ್ವಿುಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸಜ್ಜಾಗಿದೆ. ಕರ್ನಾಟಕವನ್ನು ಬಯಲು ಬಹಿರ್ದೆಸೆಮುಕ್ತಗೊಳಿಸುವ ದೃಢ ಸಂಕಲ್ಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ನಡೆಸಿದ ಸರ್ವೆಯಲ್ಲಿ ಅವಿಭಜಿತ ಕುಟುಂಬಗಳಿಂದ ಸುಮಾರು 5 ಲಕ್ಷ ಹೊಸ ಕುಟುಂಬಗಳು ವಿಭಜನೆಗೊಂಡಿದ್ದು, ಆ ಎಲ್ಲ ಹೊಸ ಕುಟುಂಬಗಳಿಗೂ ಹೆಚ್ಚುವರಿಯಾಗಿ ಶೌಚಗೃಹ ಸೌಲಭ್ಯ ಸಿಗಲಿದೆ. ಶೌಚಗೃಹ ನಿರ್ವಣದಲ್ಲಿ ಕೇಂದ್ರ ಸರ್ಕಾರದ ನಿಗದಿತ ಗುರಿಯನ್ನು ರಾಜ್ಯ ಸರ್ಕಾರ ಸಾಧಿಸಿದ್ದು, 70.20 ಲಕ್ಷ ಶೌಚಗೃಹಗಳ ನಿರ್ವಣದ ಗುರಿ ಸಾಧಿಸಿದೆ. ಸ್ವಚ್ಛ ಭಾರತ ಅಭಿಯಾನದಡಿ 4 ವರ್ಷಗಳಲ್ಲೇ 45 ಲಕ್ಷಕ್ಕೂ ಹೆಚ್ಚು ಶೌಚಗೃಹಗಳನ್ನು ನಿರ್ವಿುಸಲಾಗಿದೆ. ಸ್ವಚ್ಛ ಭಾರತ ಯೋಜನೆಯಡಿ ‘ಶೌಚಾಲಯ ಆಗಲಿ ಸ್ವಚ್ಛಾಲಯ’ ಅಭಿಯಾನವನ್ನೇ ಆರಂಭಿಸಿರುವ ಸರ್ಕಾರ ಶೌಚಗೃಹಗಳ ಶುಚಿತ್ವದ ಜತೆಗೆ ಗ್ರಾಮೀಣ ಪ್ರದೇಶವನ್ನೂ ಕಸಮುಕ್ತಗೊಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದೆ. ಹಸಿಕಸ, ಒಣಕಸ ವಿಂಗಡಿಸಿ ಒಣಕಸ ಸದ್ಬಳಕೆ ಮಾಡಿಕೊಳ್ಳುವತ್ತ ಕಾರ್ಯಕ್ರಮ ರೂಪಿಸುತ್ತಿದೆ.

ಗ್ರಾಮ ಪಂಚಾಯಿತಿಗಳ ಸಶಕ್ತೀಕರಣಕ್ಕೆ ಒತ್ತು

ಗ್ರಾಮ ಪಂಚಾಯಿತಿಗಳು ಪದೇಪದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಡೆಗೆ ಕೈ ಚಾಚದಂತೆ ಸಂಪನ್ಮೂಲ ಸೃಷ್ಟಿಸಿಕೊಳ್ಳಲು ಪೂರಕ ವಾತಾವರಣ ನಿರ್ವಿುಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯಪ್ರವೃತ್ತವಾಗಿದೆ.


ಮೇವಿನ ಕೊರತೆ ನೀಗಿಸಲು ಜಲಕೃಷಿ ತಂತ್ರಜ್ಞಾನ

ಬೆಂಗಳೂರು: ಭೂಮಿ ಮತ್ತು ಮಣ್ಣು ಇಲ್ಲದೆಯೇ ಭರಪೂರ ಮೇವು ಬೆಳೆಯುವ ವಿನೂತನ ‘ಜಲ ಕೃಷಿ’ ಯೋಜನೆ, ವಲಸೆ ಕುರಿಗಾರರಿಗೆ ಡೇರೆ ಸೌಲಭ್ಯ, ತಂತ್ರಜ್ಞಾನ ಆಧಾರಿತ ಜಾನು ವಾರು ಗಣತಿಯಂತಹ ವಿಶೇಷ ಕಾರ್ಯಕ್ರಮಗಳನ್ನು ಪಶು ಸಂಗೋಪನಾ ಇಲಾಖೆ ಕೈಗೆತ್ತಿಕೊಂಡಿದೆ. ರೈತರು ಅತಿವೃಷ್ಟಿ, ಅನಾವೃಷ್ಟಿಗೆ ಒಳಗಾಗಿ ಸಂಕಷ್ಟ ಅನುಭವಿಸುವುದನ್ನು ತಪ್ಪಿಸಲು ಉಪಕಸಬುಗಳನ್ನು ಕೈಗೆತ್ತಿಕೊಳ್ಳಲು ರೈತರನ್ನು ಉತ್ತೇಜಿಸುತ್ತಿದೆ.

ಮೇವಿನ ಕೊರತೆ ನೀಗಿಸುವ ಉದ್ದೇಶದಿಂದ ರೈತರಿಗೆ ಜಲಕೃಷಿ ತಂತ್ರಜ್ಞಾನ ಪರಿಚಯಿಸಲು ರಾಜ್ಯದ ಐದು ಜಾನುವಾರು ಕ್ಷೇತ್ರಗಳಲ್ಲಿ ಜಲಕೃಷಿ ಮೇವಿನ ಪದ್ಧತಿಯ ಪ್ರಾತ್ಯಕ್ಷಿಕಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ತಾಂತ್ರಿಕತೆ ಬಗ್ಗೆ ರೈತರಿಗೆ ತರಬೇತಿ ಹಾಗೂ ವಿಸ್ತರಣಾ ಕಾರ್ಯಕ್ರಮಗಳನ್ನು ರೂಪಿಸಿದೆ. ಆರಂಭಿಕ ಹಂತದಲ್ಲಿ ಸರ್ಕಾರಿ ಫಾರಂಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಮುಂದಿನ ಹಂತದಲ್ಲಿ ರೈತರಿಗೂ ಈ ಘಟಕ ಸ್ಥಾಪನೆಗೆ ನೆರವು ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಪ್ರಾಯೋಗಿಕವಾಗಿ ಜಲಕೃಷಿ ಮೇವು ಯೋಜನೆಗೆ 3 ಕೋಟಿ ರೂ. ಒದಗಿಸಲಾಗಿದೆ.

ರಾಜ್ಯದಲ್ಲಿ ಸುಮಾರು 20 ಸಾವಿರ ವಲಸೆ ಮತ್ತು ಅರೆ ಸಂಚಾರಿ ಕುರಿಗಾರರಿದ್ದು, ಇವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕುರಿ-ಮೇಕೆಗಳೊಂದಿಗೆ ಮಳೆ,ಗಾಳಿ, ಬಿಸಿಲು, ಕತ್ತಲೆಯನ್ನು ಲೆಕ್ಕಿಸದೆ ಮೇವು-ನೀರು ಅರಸಿ ಸಂಚರಿಸುತ್ತಾರೆ. ಇಂತಹ ಸಂದರ್ಭದಲ್ಲಿ ವಾತಾವರಣ ವೈಪರೀತ್ಯಗಳಿಂದ ಹೆಚ್ಚು ಸಂಕಷ್ಟ ಎದುರಿಸುತ್ತಾರೆ. ಇವರಿಗೆ ರಕ್ಷಣೆ ನೀಡಲು ಸರ್ಕಾರ ಉಚಿತವಾಗಿ ತಲಾ ಒಂದು ಸಂಚಾರಿ ಟೆಂಟ್, ಸೋಲಾರ್ ಟಾರ್ಚ್, ರೇನ್ ಕೋಟ್ ಮತ್ತು ರಬ್ಬರ್ ನೆಲ ಹಾಸು ಒದಗಿಸಲು ಮುಂದಾಗಿದೆ. ಸುಮಾರು 4 ಸಾವಿರ ವಲಸೆ ಹಾಗೂ ಅರೆ ಸಂಚಾರಿ ಕುರಿಗಾರರಿಗೆ ಈ ಯೋಜನೆ ಪ್ರಯೋಜನ ದೊರೆಯಲಿದೆ.

ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಸಂಚಾರಿ ಮಾಂಸ ಮಳಿಗೆ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮವನ್ನು ಸಹ ಇಲಾಖೆ ನೂತನವಾಗಿ ಜಾರಿಗೊಳಿಸಲಿದೆ. ಅದಕ್ಕಾಗಿ ಎಲ್ಲ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅಲ್ಪ-ಸ್ವಲ್ಪ ಪರಿಹಾರ ಒದಗಿಸಲು ಪಶು ಭಾಗ್ಯ ಯೋಜನೆ ಜಾರಿಗೆ ವಿಶೇಷ ಆಸಕ್ತಿಯನ್ನು ಸಚಿವ ವೆಂಕಟರಾವ್ ನಾಡಗೌಡ ಹೊಂದಿದ್ದಾರೆ. ಪಶುಭಾಗ್ಯ ಯೋಜನೆಯಲ್ಲಿ ಬ್ಯಾಂಕ್​ಗಳಿಂದ 1.20 ಲಕ್ಷ ರೂ. ಸಾಲ ಪಡೆದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಸು, ಎಮ್ಮೆ, ಆಡು, ಹಂದಿ, ಕುರಿ, ಕೋಳಿ ಘಟಕ ಸ್ಥಾಪಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.50 ಹಾಗೂ ಇತರ ವರ್ಗದವರಿಗೆ ಶೇ.25 ಸಹಾಯ ಧನ ದೊರೆಯುತ್ತದೆ. ಮಹಿಳೆಯರಿಗಾಗಿ ಪಶುಸಂಗೋಪನೆ ಅದರಲ್ಲೂ ವಿಶೇಷವಾಗಿ ವಿಧವೆಯರು, ದೇವದಾಸಿಯರು, ಸಂಕಷ್ಟಕ್ಕೊಳಗಾದ ಮಹಿಳೆಯರು, ಪರಿತ್ಯಕ್ತೆಯರಿಗೆ ಹಾಗೂ ಇತರ ಮಹಿಳೆಯರಿಗೆ ಪಶುಸಂಗೋಪನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆದಾಯ ವೃದ್ಧಿಸಿಕೊಳ್ಳಲು ಈ ಯೋಜನೆ ಮೂಲಕ ಸಹಾಯಧನ ನೀಡಲಾಗುತ್ತದೆ.

ಜಾನುವಾರು-ಕುಕ್ಕುಟ ಅವಲಂಬಿತ ರೈತರಿಗೆ ಮತ್ತು ಉದ್ದಿಮೆದಾರರಿಗೆ ಸಹಾಯ ಧನ ಒದಗಿಸಲಾಗುತ್ತಿದೆ. ನಿರುದ್ಯೋಗ ಯುವಕ-ಯುವತಿಯರಿಗೆ ಮಾಂಸದ ಕುಕ್ಕುಟ ಕ್ಷೇತ್ರಗಳನ್ನು ರಾಜ್ಯ ವಲಯ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ 500 ಮಾಂಸದ ಕೋಳಿ ಫಾರಂ ಸ್ಥಾಪಿಸಲು ಸಹಾಯಧನ ನೀಡಲಾಗುತ್ತದೆ. ‘ಮನೆಗೊಂದು ದನ-ಕರು, ಕುರಿ-ಆಡು, ಆ ಮನೆ ಸುಸ್ಥಿರ ಅಭಿವೃದ್ಧಿಯ ಗೂಡು’ ಎಂಬ ಸಂಕಲ್ಪದೊಂದಿಗೆ ಯುವಕರನ್ನು ಉದ್ಯೋಗಶೀಲರನ್ನಾಗಿಸಲು ಪಶು ಸಂಗೋಪನಾ ಇಲಾಖೆ ಹತ್ತಾರು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ.

ನಾರಿ ಸುವರ್ಣ ಟಗರುಗಳ ವಿತರಣೆ ಯೋಜನೆ

ಅವಳಿ ಮತ್ತು ತ್ರಿವಳಿ ಮರಿಗಳನ್ನು ಹಾಕುವ ನಾರಿ ಸುವರ್ಣ ತಳಿ ಕುರಿಯನ್ನು ಕ್ಷೇತ್ರ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಕುರಿ ಸಂವರ್ಧನೆಗಾಗಿ ನಾರಿ ಸುವರ್ಣ ಟಗರುಗಳನ್ನು ಪ್ರಗತಿಪರ ಮತ್ತು ಆಸಕ್ತ ಕುರಿ, ಮೇಕೆ ಸಾಕಾಣಿಕೆದಾರರಿಗೆ, ನೋಂದಾಯಿತ ಸಹಕಾರಿ ಸಂಘಗಳ ಸದಸ್ಯರಿಗೆ, ಕುರಿಗಾರರಿಗೆ ವಿತರಿಸಲಾಗುತ್ತದೆ. ನಾರಿ ಸುವರ್ಣ ಟಗರು ಖರೀದಿಸಿದಲ್ಲಿ ಪ್ರತಿ ಟಗರಿನ ಸರಾಸರಿ ಬೆಲೆಯ 20 ಸಾವಿರ ರೂ. ಮೊತ್ತದಲ್ಲಿ ಶೇ.75 ಹಾಗೂ ಗರಿಷ್ಠ 15 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.

Stay connected

278,743FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...