ಸಿಎಂ ಎಚ್​ಡಿಕೆಯವರ 8 ತಿಂಗಳ ಕಾರ್ಯ ವೈಖರಿಯನ್ನು ಟ್ವೀಟ್​ ಮೂಲಕ ಟೀಕಿಸಿದ ಬಿಜೆಪಿ

ಬೆಂಗಳೂರು: ಕಾಂಗ್ರೆಸ್​ ಹಾಗೂ ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಎಚ್​.ಡಿ.ಕುಮಾರಸ್ವಾಮಿ ಅವರ 8 ತಿಂಗಳ ಕಾರ್ಯ ವೈಖರಿಯನ್ನು ಪ್ರತಿಪಕ್ಷ ಬಿಜೆಪಿ ಟ್ವೀಟ್​ ಮೂಲಕ ವ್ಯಂಗ್ಯವಾಡಿದೆ.

ಸಿಎಂ ಕುಮಾರಸ್ವಾಮಿ ಅವರು ಮೊದಲ ಎರಡು ತಿಂಗಳು ಸರ್ಕಾರವನ್ನು ಹೇಗೆ ರಚಿಸಬೇಕೆಂಬ ಗೊಂದಲದಲ್ಲಿದ್ದರು. ಮೂರು ಮತ್ತು ನಾಲ್ಕನೇ ತಿಂಗಳಲ್ಲಿ ಪತ್ನಿ ಗೆಲುವಿಗೆ ಹೇಗೆ ಸಹಕಾರ ನೀಡುವುದು ಎಂಬ ಚಿಂತನೆಯಲ್ಲಿದ್ದರು. ಐದು ಮತ್ತು ಆರನೇ ತಿಂಗಳಲ್ಲಿ ಮಗನ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದರು. ಏಳು ಮತ್ತು ಎಂಟನೇ ತಿಂಗಳಲ್ಲಿ ಮಂಡ್ಯದಲ್ಲಿ ಪುತ್ರನನ್ನು ಗೆಲ್ಲಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್​ ಮೂಲಕ ಟೀಕಿಸಿದೆ.

ಕುಟುಂಬದ ಅವಶ್ಯಕತೆಗೆ ಸಿಎಂ ಸ್ಥಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಟ್ವೀಟ್​ ಮೂಲಕ ಆರೋಪಿಸಿದೆ. (ದಿಗ್ವಿಜಯ ನ್ಯೂಸ್​)